Halasinakai happala recipe in Kannada | ಹಲಸಿನಕಾಯಿ ಹಪ್ಪಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 1 ಮಧ್ಯಮ ಗಾತ್ರದ ಹಲಸಿನಕಾಯಿ
- 5 - 6 ಹಸಿಮೆಣಸಿನಕಾಯಿ ಅಥವಾ 1 - 2 ಟೀಸ್ಪೂನ್ ಅಚ್ಚಖಾರದ ಪುಡಿ
- 4 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- 2 ಚಿಕ್ಕ ಪ್ಲಾಸ್ಟಿಕ್ ಹಾಳೆಗಳು
- 1 ದೊಡ್ಡ ಪ್ಲಾಸ್ಟಿಕ್ ಹಾಳೆ
ಹಲಸಿನಕಾಯಿ ಹಪ್ಪಳ ಮಾಡುವ ವಿಧಾನ:
- ಹಲಸಿನಕಾಯಿಯನ್ನು ಕತ್ತರಿಸಿ ಸೊಳೆಗಳನ್ನು ಬೇರ್ಪಡಿಸಿ. ಗಮನಿಸಿ ಹಲಸಿನಕಾಯಿ ಚೆನ್ನಾಗಿ ಬಲಿತಿರಬೇಕು ಆದರೆ ಹಣ್ಣಾಗಿರಬಾರದು.
- ನಂತರ ಸೆಕೆ ಅಥವಾ ಆವಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಸುಮಾರು ಮೂವತ್ತು ನಿಮಿಷ ಬೇಕಾಗುವುದು.
- ಆ ಸಮಯದಲ್ಲಿ ಒರಳುಕಲ್ಲಿನಲ್ಲಿ ಮೆಣಸು ಮತ್ತು ಉಪ್ಪು ಹಾಕಿ ಗುದ್ದಿರಿ. ನಿಮ್ಮಿಷ್ಟದ ಯಾವುದೇ ಮಸಾಲೆ ಸೇರಿಸಬಹುದು.
- ಅದಕ್ಕೆ ಬೇಯಿಸಿದ ಹಲಸಿನ ಸೊಳೆ ಅಥವಾ ತೊಳೆ ಹಾಕಿ ಒನಕೆಯಿಂದ ಗುದ್ದಿ ಕೊಳ್ಳಿ ಅಥವಾ ಅರೆಯಿರಿ. ಬಿಸಿಯಾಗಿರುವಾಗಲೇ ಗುದ್ದಬೇಕು, ಇಲ್ಲವಾದಲ್ಲಿ ಗುದ್ದುವುದು ಸ್ವಲ್ಪ ಶ್ರಮದಾಯಕವೆನಿಸಬಹುದು.
- ಅಂಗೈಗೆ ನೀರು ಮುಟ್ಟಿಸಿ ನಿಂಬೆ ಗಾತ್ರದ ಉಂಡೆ ಮಾಡಿ ಕೊಳ್ಳಿ.
- ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ನಂತರ ಒಂದು ಉಂಡೆಯನ್ನು ಇರಿಸಿ ಎಣ್ಣೆ ಹಚ್ಚಿದ ಮತ್ತೊಂದು ಸಣ್ಣ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ.
- ಈಗ ಒಂದು ಅಗಲವಾದ ಪಾತ್ರೆ ಅಥವಾ ಮಣೆಯಿಂದ ಒತ್ತಿ. ಜಾಗ್ರತೆಯಿಂದ ಮೇಲಿನ ಪ್ಲಾಸ್ಟಿಕ್ ಹಾಳೆಯನ್ನು ತೆಗೆಯಿರಿ.
- ದೊಡ್ಡ ಪ್ಲಾಸ್ಟಿಕ್ ಹಾಳೆ ಅಥವಾ ಬಟ್ಟೆ ಮೇಲೆ ಒತ್ತಿದ ಹಪ್ಪಳವನ್ನು ಹಾಕಿ, ಸಣ್ಣ ಪ್ಲಾಸ್ಟಿಕನ್ನು ಜಾಗ್ರತೆಯಿಂದ ತೆಗೆಯಿರಿ.
- ಎಲ್ಲ ಹಪ್ಪಳವನ್ನು ಇದೆ ರೀತಿ ಮಾಡಿ. ನಂತರ ಬಿಸಿಲಿನಲ್ಲಿಟ್ಟು ಒಣಗಿಸಿ. 3-4 ಗಂಟೆಗಳ ನಂತರ ಒಮ್ಮೆ ಹಪ್ಪಳಗಳನ್ನು ತಿರುವಿ ಹಾಕಿ. ಒಂದೆರಡು ಹಪ್ಪಳ ಒಣಗುತ್ತದೆ. ಒಣಗಿದ ನಂತರ ಎಣ್ಣೆ ಅಥವಾ ಓವೆನ್ ನಲ್ಲಿ ಕಾಯಿಸಿ.
good
ಪ್ರತ್ಯುತ್ತರಅಳಿಸಿ