Kara kadle recipe in Kannada | ಖಾರ ಕಡ್ಲೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ನೆಲಗಡಲೆ ಅಥವಾ ಶೇಂಗಾ
- 1/4 ಕಪ್ ಕಡ್ಲೆಹಿಟ್ಟು
- 1 ಅಕ್ಕಿ ಹಿಟ್ಟು
- 1 - 2 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಇಂಗು
- 1/4 ಟೀಸ್ಪೂನ್ ಅರಿಶಿನ ಪುಡಿ
- ಎಣ್ಣೆ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು.
ಖಾರ ಕಡ್ಲೆ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಇಂಗು, ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ.
- ಶೇಂಗಾ ಅಥವಾ ಕಡ್ಲೆಕಾಯಿ ಹಾಕಿ.
- ಸ್ವಲ್ಪ ನೀರು ಹಾಕಿ ಕಲಸಿ. ಮಸಾಲೆ ಅಂಟುವಷ್ಟು ನೀರು ಹಾಕಿದರೆ ಸಾಕು.
- ಒಂದೈದು ನಿಮಿಷ ಪಕ್ಕಕ್ಕಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಕಲಸಿದ ನೆಲಗಡಲೆಯನ್ನು ಬಿಸಿ ಎಣ್ಣೆಯಲ್ಲಿ ಬಿಡಿ ಬಿಡಿಯಾಗಿ ಹಾಕಿ.
- ಮಧ್ಯಮ ಉರಿಯಲ್ಲಿ ಸ್ವರ ಕಡಿಮೆಯಾಗುವವರೆಗೆ ಕಾಯಿಸಿ. ಬಿಸಿ ಚಹಾದೊಂದಿಗೆಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ