Nellikai thokku recipe in Kannada | ನೆಲ್ಲಿಕಾಯಿ ತೊಕ್ಕು ಮಾಡುವ ವಿಧಾನ
ನೆಲ್ಲಿಕಾಯಿ ತೊಕ್ಕುವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 10 ನೆಲ್ಲಿಕಾಯಿ
- 8 - 10 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಸಾಸಿವೆ
- 2 ಟೀಸ್ಪೂನ್ ಮೆಂತೆ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಇಂಗು
- 1/4 ಟೀಸ್ಪೂನ್ ಅರಿಶಿನ ಪುಡಿ
- 4 ಟೀಸ್ಪೂನ್ ಎಣ್ಣೆ
ನೆಲ್ಲಿಕಾಯಿ ತೊಕ್ಕು ಮಾಡುವ ವಿಧಾನ:
- ನೆಲ್ಲಿಕಾಯಿಯನ್ನು ತೊಳೆದು ನೀರಾರಿಸಿ, ಕತ್ತರಿಸಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿ, ಸಾಸಿವೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ಪುಡಿ ಮಾಡಿ ಕೊಳ್ಳಿ.
- ನಂತರ ಅದೇ ಜಾರಿಗೆ ಕತ್ತರಿಸಿದ ನೆಲ್ಲಿಕಾಯಿ ಹಾಕಿ, ನೀರು ಹಾಕದೆ ಪುಡಿ ಮಾಡಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಅರಿಶಿನ ಪುಡಿಯ ಒಗ್ಗರಣೆ ಮಾಡಿ. ಸ್ಟವ್ ಆಫ್ ಮಾಡಿ, ಬಿಸಿ ಆರುವವರೆಗೆ ನಿಲ್ಲಿ.
- ನಂತರ ಅರೆದ ಮಸಾಲೆ ಮತ್ತು ನೆಲ್ಲಿಕಾಯಿಯನ್ನು ಸೇರಿಸಿ. ಉಪ್ಪು ಹಾಕಿ.
- ಚೆನ್ನಾಗಿ ಮಗುಚಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
- ನೆಲ್ಲಿಕಾಯಿ ತೊಕ್ಕು ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ