Beetroot mudde huli recipe in Kannada | ಬೀಟ್ರೂಟ್ ಮುದ್ದೆ ಹುಳಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್)
- 2 ಮಧ್ಯಮ ಗಾತ್ರದ ಬೀಟ್ರೂಟ್
- 1-2 ಹಸಿರು ಮೆಣಸಿನ ಕಾಯಿ
- 1/2 ನಿಂಬೆ ಗಾತ್ರದ ಬೆಲ್ಲ
- 1/2 ನಿಂಬೆ ಗಾತ್ರದ ಹುಣಿಸೇಹಣ್ಣು
- 1 ಚಿಟಿಕೆ ಅರಿಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 4 ಟೀಸ್ಪೂನ್ ಅಡುಗೆ ಎಣ್ಣೆ
- 1 ಒಣ ಮೆಣಸಿನ ಕಾಯಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 4 - 5 ಕರಿಬೇವಿನ ಎಲೆ
- 7 - 8 ಬೇಳೆ ಬೆಳ್ಳುಳ್ಳಿ
ಬೀಟ್ರೂಟ್ ಮುದ್ದೆ ಹುಳಿ ಮಾಡುವ ವಿಧಾನ:
- ಬೀಟ್‌ರೂಟನ್ನು ಸಿಪ್ಪೆ ತೆಗೆದು, ತೊಳೆದು, ತುರಿಯಿರಿ.
- ತುರಿದ ಬೀಟ್‌ರೂಟ್, ಉಪ್ಪು, ಸೀಳಿದ ಹಸಿರುಮೆಣಸಿನಕಾಯಿ, ಬೆಲ್ಲ, ಹುಣಿಸೇಹಣ್ಣು ಮತ್ತು ಅರಿಶಿನ ಹಾಕಿ ಬೇಯಿಸಿ.
- ಎಣ್ಣೆ, ಒಣ ಮೆಣಸು, ಸಾಸಿವೆ, ಜೀರಿಗೆ. ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಬಿಸಿಯಾದ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ