Rave parota recipe in Kannada | ರವೇ ಪರೋಟ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1.5 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
- 4 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಸ್ಟಫ್ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ರವೇ
- 1/2 ಕಪ್ ಹಾಲು
- 1/2 ಕಪ್ ನೀರು
- 1 ಟೀಸ್ಪೂನ್ ತುಪ್ಪ
- 2 ಟೀಸ್ಪೂನ್ ಸಕ್ಕರೆ
ರವೇ ಪರೋಟ ಮಾಡುವ ವಿಧಾನ:
- ಗೋಧಿಹಿಟ್ಟನ್ನು ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಮುಚ್ಚಿಡಿ.
- ಒಂದು ಪಾತ್ರೆಯಲ್ಲಿ ಹಾಲು, ನೀರು ಮತ್ತು ಸಕ್ಕರೆಯನ್ನು ಹಾಕಿ ಕುದಿಯಲು ಇಡಿ.
- ಕುದಿಯಲು ಪ್ರಾರಂಭವಾದ ಕೂಡಲೇ ರವೆಯನ್ನು ಹಾಕಿ ಮಗುಚಿ.
- ಪೇಸ್ಟ್ ನಂತಾದಾಗ ಸ್ಟವ್ ಆಫ್ ಮಾಡಿ. ಏಕೆಂದರೆ ಬಿಸಿ ಆರಿದ ಮೇಲೆ ಗಟ್ಟಿ ಆಗುತ್ತದೆ.
- 1 ಟೀಸ್ಪೂನ್ ತುಪ್ಪ ಹಾಕಿ, ಮಗುಚಿ, ತಣ್ಣಗಾಗಲು ಬಿಡಿ.
- ತಣ್ಣಗಾದ ಮೇಲೆ ರವೆಯ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ಈ ರವೆ ಉಂಡೆಗಳು ಮೃದುವಾಗಿರಬೇಕು. ಇಲ್ಲವಾದಲ್ಲಿ ಸ್ವಲ್ಪ ಹಾಲು ಹಾಕಿ ಕಲಸಿ, ಸರಿ ಮಾಡಿಕೊಳ್ಳಿ.
- ಈಗ ರವೇ ಪರೋಟ ಮಾಡಲು, ಗೋಧಿ ಹಿಟ್ಟನ್ನು ಮುಟ್ಟಿಕೊಂಡು, ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಒಂದು ಬಟ್ಟಲಿನ ಆಕಾರ ಮಾಡಿ. ಅದರೊಳಗೆ ಒಂದು ರವೇ ಉಂಡೆಯನ್ನು ಇರಿಸಿ.
- ತುದಿಗಳನ್ನು ಒಟ್ಟಿಗೆ ತಂದು ರವೆಯನ್ನು ಒಳಗೆ ಸೇರಿಸಿ.
- ಸಾಕಷ್ಟು ಗೋಧಿ ಹಿಟ್ಟನ್ನು ಬಳಸಿ ರವೇ ಸೇರಿಸಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
- ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ.
- ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಯಾವುದೇ ಗೊಜ್ಜು ಅಥವಾ ಸಕ್ಕರೆ-ತುಪ್ಪ ದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ