Ragi halbai recipe in Kannada | ರಾಗಿ ಹಾಲ್ಬಾಯಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ರಾಗಿ
- 1/4 ಕಪ್ ತೆಂಗಿನ ತುರಿ
- 1/2 ಕಪ್ ಬೆಲ್ಲ
- 1 ಟೇಬಲ್ ಸ್ಪೂನ್ ತುಪ್ಪ
- ಒಂದು ಚಿಟಿಕೆ ಏಲಕ್ಕಿ ಪುಡಿ
- 1.25 ಕಪ್ ನೀರು (ಅರೆಯಲು ಬಳಸಿದ ನೀರನ್ನು ಸೇರಿಸಿದೆ)
ರಾಗಿ ಹಾಲ್ಬಾಯಿ ಮಾಡುವ ವಿಧಾನ:
- ರಾಗಿಯನ್ನು ತೊಳೆದು 3-4 ಗಂಟೆಗಳ ಕಾಲ ನೆನೆಯಲು ಬಿಡಿ.
- ಬೆಲ್ಲಕ್ಕೆ 1/4 ಕಪ್ ನೀರು ಹಾಕಿ ಕುದಿಸಿ. ಒಂದು ಕುದಿ ಬಂದ ಕೂಡಲೇ ಸ್ಟವ್ ಆಫ್ ಮಾಡಿ. ಇದನ್ನು ನಾವು ಸ್ವಲ್ಪ ಸಮಯದ ನಂತರ ಉಪಯೋಗಿಸುತ್ತೇವೆ.
- ನೆನೆಸಿದ ರಾಗಿ ಮತ್ತು ತೆಂಗಿನ ತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.
- ಅರೆದ ನಂತರ, ಬಟ್ಟೆ ಅಥವಾ ಜರಡಿಯ ಸಹಾಯದಿಂದ ಸೋಸಿ. ಸೋಸಿ ಉಳಿದ ಮಿಶ್ರಣಕ್ಕೆ ಪುನಃ ನೀರು ಸೇರಿಸಿ ಅರೆಯಿರಿ. ಹೀಗೆ 2 ಬಾರಿ ಅರೆದು ಸೋಸಿ, ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ತೆಗೆಯಿರಿ.
- ಒಂದು ದಪ್ಪ ತಳದ ಬಾಣಲೆಗೆ ಸೋಸಿದ ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ಸುರಿಯಿರಿ. ಉಳಿದ ನೀರನ್ನು ಸೇರಿಸಿ ಮತ್ತು ಬೆಲ್ಲದ ನೀರನ್ನು ಸೋಸಿ, ಸೇರಿಸಿ.
- ಸ್ಟವ್ ಆನ್ ಮಾಡಿ, ಸ್ಟವ್ ಮೇಲಿಟ್ಟು ಮಗುಚಿ.
- ಗಟ್ಟಿಯಾದ ಕೂಡಲೇ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
- ಸ್ವಲ್ಪ ಸಮಯದ ನಂತರ ಹಾಲುಬಾಯಿಯಲ್ಲಿ ಹೊಳತೆ ಕಾಣಬಹುದು ಮತ್ತು ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಹಾಲುಬಾಯಿಯನ್ನು ತುಪ್ಪ ಸವರಿದ ಪ್ಲೇಟ್ ಗೆ ಸುರಿಯಿರಿ. ಬಿಸಿ ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ