Nellikai chutney recipe in Kannada | ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು - ವಿಧಾನ 1: ( ಅಳತೆ ಕಪ್ = 240 ಎಂಎಲ್ )
- 2 - 4 ನೆಲ್ಲಿಕಾಯಿ (ಗಾತ್ರ ಮತ್ತು ನಿಮ್ಮ ರುಚಿ ಅವಲಂಬಿಸಿ)
- 1 ಕಪ್ ತೆಂಗಿನ ತುರಿ
- 1- 2 ಹಸಿರು ಮೆಣಸಿನಕಾಯಿ
- 2 ಟೀಸ್ಪೂನ್ ಉದ್ದಿನ ಬೇಳೆ
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಬೇಕಾಗುವ ಪದಾರ್ಥಗಳು - ವಿಧಾನ 2: ( ಅಳತೆ ಕಪ್ = 240 ಎಂಎಲ್ )
- 2 - 4 ನೆಲ್ಲಿಕಾಯಿ (ಗಾತ್ರ ಮತ್ತು ನಿಮ್ಮ ರುಚಿ ಅವಲಂಬಿಸಿ)
- 1 ಕಪ್ ತೆಂಗಿನ ತುರಿ
- 1- 2 ಹಸಿರು ಮೆಣಸಿನಕಾಯಿ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ - ವಿಧಾನ 1:
- ನೆಲ್ಲಿಕಾಯಿಯನ್ನು ತೊಳೆದು ಕತ್ತರಿಸಿ.
- ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ನೆಲ್ಲಿಕಾಯಿ, ಉಪ್ಪು ಮತ್ತು ತೆಂಗಿನ ತುರಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಸೀಳಿದ ಹಸಿರುಮೆಣಸಿನಕಾಯಿ ಹಾಕಿ ಹುರಿಯಿರಿ (ಒಂದೊಂದಾಗಿ ಹಾಕಿ ಹುರಿಯಿರಿ).
- ಹುರಿದ ಪದಾರ್ಥಗಳನ್ನು ಸೇರಿಸಿ ಪುನಃ ಅರೆಯಿರಿ.
- ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ - ವಿಧಾನ 2:
- ನೆಲ್ಲಿಕಾಯಿಯನ್ನು ತೊಳೆದು ಕತ್ತರಿಸಿ.
- ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ನೆಲ್ಲಿಕಾಯಿ, ಹಸಿರುಮೆಣಸಿನಕಾಯಿ ಮತ್ತು ತೆಂಗಿನ ತುರಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು ಹಾಕಿ ಕಲಸಿ.
- ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ