ಶುಕ್ರವಾರ, ಫೆಬ್ರವರಿ 10, 2017

Bassaru recipe in Kannada | ಬಸ್ಸಾರು ಮಾಡುವ ವಿಧಾನ

Bassaru recipe in Kannada

Bassaru recipe in Kannada | ಬಸ್ಸಾರು ಮಾಡುವ ವಿಧಾನ 

ಮುಖ್ಯ ಪದಾರ್ಥಗಳು: (ಅಳತೆ ಕಪ್ = 240ml) 

  1. 1 ಕಟ್ಟು ಸೊಪ್ಪು ಅಥವಾ  250gm ತರಕಾರಿ (ಮೆಂತೆ ಸೊಪ್ಪು ಹೊರತುಪಡಿಸಿ ಯಾವುದೇ ಸೊಪ್ಪ ಮತ್ತು ಎಲೆಕೋಸು, ಬೀನ್ಸ್ ಅಥವಾ ಹೀರೇಕಾಯಿಯಂತಹ ತರಕಾರಿ)
  2. 1/4 ಕಪ್ ತೊಗರಿಬೇಳೆ
  3. 1/4 ಕಪ್ ಹೆಸರುಕಾಳು ಅಥವಾ ಇನ್ನಾವುದೇ ಕಾಳು (ಬೇಕಾದಲ್ಲಿ -  ಇಲ್ಲವಾದಲ್ಲಿ 1/4 ಕಪ್ ನಷ್ಟು ತೊಗರಿಬೇಳೆ ಹೆಚ್ಚಿಸಿ) 
  4. ಚಿಟಿಕೆ ಅರಿಶಿನ ಪುಡಿ
  5. ನಿಮ್ಮ ರುಚಿ ಪ್ರಕಾರ ಉಪ್ಪು

ಬಸ್ಸಾರಿಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 2 - 4 ಒಣ ಮೆಣಸಿನಕಾಯಿ (ಈ ಸಾರು ಸ್ವಲ್ಪ ಜಾಸ್ತಿ ಖಾರ ಇರ ಬೇಕು)
  2. 2  ಟೀಸ್ಪೂನ್ ಕೊತ್ತುಂಬರಿ ಬೀಜ
  3. 1 ಟೀಸ್ಪೂನ್ ಜೀರಿಗೆ 
  4. 4 - 5 ಕರಿಮೆಣಸು
  5. 1 ಕತ್ತರಿಸಿದ ಈರುಳ್ಳಿ
  6. 10 ಬೇಳೆ ಸುಲಿದು ಮತ್ತು ಕತ್ತರಿಸಿದ ಬೆಳ್ಳುಳ್ಳಿ
  7. 1 ಕತ್ತರಿಸಿದ ಟೊಮೆಟೊ
  8. 1/2 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು 
  9. 1/4 ಕಪ್ ತೆಂಗಿನ ತುರಿ
  10. ನಿಮ್ಮ ರುಚಿ ಪ್ರಕಾರ ಉಪ್ಪು

ಬಸ್ಸಾರು ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ ಎಲೆ
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ 

ಬಸ್ಸಾರು ಪಲ್ಯಕ್ಕೆ ಬೇಕಾಗುವ ಪದಾರ್ಥಗಳು: 

  1. 1 ಕೆಂಪು ಮೆಣಸಿನಕಾಯಿ 
  2. 1/2 ಚಮಚ ಸಾಸಿವೆ 
  3. 1 ಟೀಸ್ಪೂನ್ ಉದ್ದಿನ ಬೇಳೆ 
  4. 1 ಟೀಸ್ಪೂನ್ ಕಡಲೆಬೇಳೆ 
  5. 5 - 6 ಕರಿಬೇವಿನ ಎಲೆ  
  6. 1 ಕತ್ತರಿಸಿದ ಈರುಳ್ಳಿ 
  7. 1 - 2 ಹಸಿಮೆಣಸು (ಬೇಕಾದಲ್ಲಿ) 
  8. 2 ಟೇಬಲ್ ಸ್ಪೂನ್  ತೆಂಗಿನ ತುರಿ
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 2 ಟೀಸ್ಪೂನ್ ಅಡುಗೆ ಎಣ್ಣೆ

ಬಸ್ಸಾರು ಮಾಡುವ ವಿಧಾನ:

  1. ಸೊಪ್ಪು, ಬೇಳೆ ಮತ್ತು ಕಾಳನ್ನು, ಉಪ್ಪು, ಅರಿಶಿನ ಪುಡಿ ಮತ್ತು ನೀರಿನೊಂದಿಗೆ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿ ಮೆಣಸನ್ನು ಹುರಿಯಿರಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
  4. ನಂತರ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ.
  5. ಕೊನೆಯಲ್ಲಿ ತೆಂಗಿನ ತುರಿ ಮತ್ತು ಹುಣಿಸೆರಸ ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ. 
  6. ಬೇಯಿಸಿದ ಸೊಪ್ಪು, ಬೇಳೆ ಮತ್ತು ಕಾಳಿನಿಂದ ನೀರನ್ನು ಬಸಿದು ತೆಗೆಯಿರಿ. 
  7. ಮಿಕ್ಸಿಯಲ್ಲಿ ಹುರಿದ ಎಲ್ಲ ಪದಾರ್ಥಗಳು ಮತ್ತು ಬೇಯಿಸಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣ ೨ ಟೇಬಲ್ ಚಮಚದಷ್ಟು ಹಾಕಿ ನುಣ್ಣನೆ ಅರೆದುಕೊಳ್ಳಿ. 
  8. ಅರೆದ ಮಸಾಲೆಯನ್ನು ಬಗ್ಗಿಸಿದ ನೀರಿಗೆ ಹಾಕಿ, ಬೇಕಾದಷ್ಟು ನೀರು ಸೇರಿಸಿ, ಉಪ್ಪು ಹಾಕಿ ಕುದಿಸಿ. 
  9. ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಸ್ಸಾರು ತಯಾರಾಯಿತು. 
  10. ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. 
  11. ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. 
  12. ನೀರು ಬಸಿದು ಉಳಿದ ಸೊಪ್ಪು+ಕಾಳು+ಬೇಳೆಯ ಮಿಶ್ರಣವನ್ನು ಸೇರಿಸಿ ಮಗುಚಿ. ಬೇಕಾದಲ್ಲಿ ಉಪ್ಪು ಸೇರಿಸಿ. 
  13. ತೆಂಗಿನ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ ಸ್ಟೋವ್ ಆಫ್ ಮಾಡಿ. 
  14. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಸ್ಸಾರು ಮತ್ತು ಪಲ್ಯವನ್ನು ಬಡಿಸಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...