Rave idli recipe in Kannada | ರವೇ ಇಡ್ಲಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಮೀಡಿಯಂ ರವೆ
- 1/2 ಕಪ್ ಮೊಸರು (ಹುಳಿ ಇದ್ದರೆ ಉತ್ತಮ)
- 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/4 ಟೀಸ್ಪೂನ್ ಅಡುಗೆ ಸೋಡಾ ಅಥವಾ 1/2 ಟೀಸ್ಪೂನ್ ಏನೊ ಫ್ರೂಟ್ ಸಾಲ್ಟ್
- ಎಣ್ಣೆ ಅಥವಾ ತುಪ್ಪ (ಇಡ್ಲಿ ತಟ್ಟೆಗೆ ಹಚ್ಚಲು)
- 2 ಟೇಬಲ್ ಸ್ಪೂನ್ ಕ್ಯಾರಟ್ ತುರಿ
- 8 - 10 ಹುರಿದ ಗೋಡಂಬಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉದ್ದಿನಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
- 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
- 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
- ಚಿಟಿಕೆ ಇಂಗು
- ಚಿಟಿಕೆ ಅರಿಶಿನ ಪುಡಿ
- 2 ಟೀಸ್ಪೂನ್ ಅಡುಗೆ ಎಣ್ಣೆ
ರವೇ ಇಡ್ಲಿ ಮಾಡುವ ವಿಧಾನ:
- ಒಂದು ಬಾಣಲೆ ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಹೆಚ್ಚಿದ ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ ಹುರಿಯಿರಿ.
- ನಂತರ ಇಂಗು ಮತ್ತು ಅರಿಶಿನ ಪುಡಿ ಸೇರಿಸಿ.
- ಕೂಡಲೇ ರವೇ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಒಂದೈದು ನಿಮಿಷ ಹುರಿಯಬೇಕಾಗಬಹುದು.
- ಆಮೇಲೆ ಹುರಿದ ರವೆಯನ್ನು ಒಂದು ಪಾತ್ರೆಗೆ ಹಾಕಿ.
- ಬಿಸಿ ಆರಿದ ಮೇಲೆ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
- ಮೊಸರು ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ.
- ಅಡುಗೆ ಸೋಡಾ ಬಳಸುತ್ತೀರಾದಲ್ಲಿ ಅಡುಗೆ ಸೋಡಾ ಬೆರೆಸಿ ಅರ್ಧ ಘಂಟೆ ಬಿಡಿ. ಏನೊ ಫ್ರೂಟ್ ಸಾಲ್ಟ್ ಆದಲ್ಲಿ ಬೆರೆಸಿದ ಕೂಡಲೇ ಇಡ್ಲಿ ಮಾಡಿ.
- ಇಡ್ಲಿ ಮಾಡಲು ತುಪ್ಪ ಅಥವಾ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ 10 - 12 ನಿಮಿಷ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ