ಗುರುವಾರ, ಫೆಬ್ರವರಿ 16, 2017

Paneer butter masala recipe in Kannada | ಪನೀರ್ ಬಟರ್ ಮಸಾಲಾ ಮಾಡುವ ವಿಧಾನ

Paneer butter masala recipe in Kannada

Paneer butter masala recipe in Kannada | ಪನೀರ್ ಬಟರ್ ಮಸಾಲಾ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 200gm ಪನೀರ್ ಅಥವಾ 1 ಲೀಟರ್ ಹಾಲಿನಿಂದ ಮಾಡಿದ ಪನೀರ್ 
 2. 1 ಸಣ್ಣ ಪಲಾವ್ ಎಲೆ 
 3. 1 - 2 ಹಸಿರು ಮೆಣಸಿನಕಾಯಿ
 4. 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
 5. 1/2 ಟೀಸ್ಪೂನ್ ಗರಂ ಮಸಾಲಾ
 6. 2 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
 7. 1/4 ಟೀಸ್ಪೂನ್ ಅರಿಶಿನ ಪುಡಿ 
 8. 1/2 ಕಪ್ ಹಾಲು
 9. 2 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು
 10. 2 ಟೇಬಲ್ ಚಮಚ ಅಡುಗೆ ಎಣ್ಣೆ 
 11. 2 ಟೇಬಲ್ ಚಮಚ ಬೆಣ್ಣೆ
 12. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

 1. 2 ಮಧ್ಯಮ ಗಾತ್ರದ ಈರುಳ್ಳಿ 
 2. 4 ಎಸಳು ಬೆಳ್ಳುಳ್ಳಿ
 3. 1 ಇಂಚು ಉದ್ದದ ಶುಂಠಿ
 4. 3 ಮಧ್ಯಮ ಗಾತ್ರದ ಟೊಮೇಟೊ
 5. 10 - 12 ಗೋಡಂಬಿ

ಪನೀರ್ ಬಟರ್ ಮಸಾಲಾ ಮಾಡುವ ವಿಧಾನ:

 1. ಗೋಡಂಬಿಯನ್ನು ಅರ್ಧ ಘಂಟೆ ನೆನೆಸಿಟ್ಟು ಪೇಸ್ಟ್ ಮಾಡಿಟ್ಟುಕೊಳ್ಳಿ. 
 2. ದೊಡ್ಡದಾಗಿ ಕತ್ತರಿಸಿದ ಟೊಮ್ಯಾಟೊವನ್ನು ನೀರಿನಲ್ಲಿ ೨ ನಿಮಿಷ ಕುದಿಸಿ, ಬಿಸಿ ಆರಿದ ಮೇಲೆ ಪೇಸ್ಟ್ ಮಾಡಿಟ್ಟುಕೊಳ್ಳಿ. 
 3. ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಪೇಸ್ಟ್ ಮಾಡಿಟ್ಟುಕೊಳ್ಳಿ.
 4. ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಬೆಣ್ಣೆಯನ್ನು ಬಿಸಿಮಾಡಿ. 
 5. ಪಲಾವ್ ಎಲೆ ಮತ್ತು ಅರೆದ ಈರುಳ್ಳಿ+ಬೆಳ್ಳುಳ್ಳಿ ಮತ್ತು +ಶುಂಠಿ ಪೇಸ್ಟ್ ನ್ನು ಹಾಕಿ ೩ - ೪ ನಿಮಿಷ ಬಾಡಿಸಿ. 
 6. ಸೀಳಿದ ಹಸಿರುಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಮಗುಚಿ. 
 7. ಗೋಡಂಬಿ ಪೇಸ್ಟ್ ಹಾಕಿ ಮಗುಚಿ. 
 8. ಟೊಮೇಟೊ ಪೇಸ್ಟ್ ಮತ್ತು ಅರಿಶಿನ ಪುಡಿ ಹಾಕಿ. ೩ - ೪ ನಿಮಿಷ ಬಾಡಿಸಿ.
 9. ನಂತರ ಅದಕ್ಕೆ ಗರಂ ಮಸಾಲಾ ಮತ್ತು ಕೊತ್ತಂಬರಿ ಅಥವಾ ಧನಿಯಾ ಪುಡಿ  ಹಾಕಿ ಮಗುಚಿ. 
 10. ಹಾಲು ಮತ್ತು ಉಪ್ಪು ಹಾಕಿ. ಮುಚ್ಚಳ ಮುಚ್ಚಿ ೪ - ೫ ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.
 11. ಕತ್ತರಿಸಿದ ಪನೀರ್ ಮತ್ತು ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
 12. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.

2 ಕಾಮೆಂಟ್‌ಗಳು:

Related Posts Plugin for WordPress, Blogger...