Akki thambittu recipe in Kannada | ಅಕ್ಕಿ ತಂಬಿಟ್ಟು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ದೋಸೆ ಅಕ್ಕಿ
- 1/4 ಕಪ್ ಕೊಬ್ಬರಿ ತುರಿ
- 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
- 1/8 ಕಪ್ ನೆಲಗಡಲೆ ಅಥವಾ ಶೇಂಗಾ
- 1/2 ಕಪ್ ಬೆಲ್ಲ
- 1/4 ಕಪ್ ನೀರು
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಅಕ್ಕಿ ತಂಬಿಟ್ಟು ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ನೀರಾರಲು ಬಿಡಿ.
- ನೀರಾರಿದ ಮೇಲೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಹುರಿಗಡಲೆಯೊಂದಿಗೆ ಮಿಕ್ಸಿಯಲ್ಲಿ ಪುಡಿ ಮಾಡಿ.
- ಸಾರಣಿಸಿ ಅಥವಾ ಜರಡಿ ಹಿಡಿದು ಹಿಟ್ಟನ್ನು ಸಿದ್ಧ ಮಾಡಿಕೊಳ್ಳಿ.
- ಒಂದು ಬಾಣಲೆಯಲ್ಲಿ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿದು, ಸಿಪ್ಪೆ ತೆಗೆದು ಸಿದ್ಧ ಮಾಡಿದ ಹಿಟ್ಟಿಗೆ ಸೇರಿಸಿ.
- ಕೊಬ್ಬರಿ ತುರಿಯನ್ನು ಮತ್ತು ಏಲಕ್ಕಿ ಪುಡಿಯನ್ನೂ ಸೇರಿಸಿ. ಕಲಸಿ ಪಕ್ಕಕ್ಕಿಡಿ.
- ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. ಒಂದೆಳೆ ಪಾಕ ಮಾಡಿ.
- ಒಂದೆಳೆ ಪಾಕ ಬಂದ ಕೂಡಲೇ ಸ್ಟವ್ ಆಫ್ ಮಾಡಿ.
- ಕೂಡಲೇ ಹಿಟ್ಟು, ಶೇಂಗಾ ಮತ್ತು ಕೊಬ್ಬರಿ ತುರಿ ಮಿಶ್ರಣಕ್ಕೆ ಸುರಿದು ಚೆನ್ನಾಗಿ ಕಲಸಿ.
ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ