Baale hoo palya recipe in Kannada | ಬಾಳೆ ಹೂ ಅಥವಾ ಬಾಳೆ ಮೂತಿ ಪಲ್ಯ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಬಾಳೆ ಹೂ ಅಥವಾ ಬಾಳೆ ಮೂತಿ ಅಥವಾ ಪೂಂಬೆ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 4 ಟೀಸ್ಪೂನ್ ಅಡುಗೆ ಎಣ್ಣೆ
- 1 ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- ಒಂದು ಲಿಂಬೆ ಗಾತ್ರದ ಬೆಲ್ಲ
- ಒಂದು ಸಣ್ಣ ಲಿಂಬೆ ಗಾತ್ರದ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
- 1 ಕಪ್ ನೀರು
ಅರೆಯಲು ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 2 - 4 ಒಣ ಮೆಣಸಿನ ಕಾಯಿ
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಕೊತ್ತಂಬರಿ ಬೀಜ
ಬಾಳೆ ಹೂ ಅಥವಾ ಬಾಳೆ ಮೂತಿ ಪಲ್ಯ ಮಾಡುವ ವಿಧಾನ:
- ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ತೊಳೆದು ಸಣ್ಣದಾಗಿ ಕೊಚ್ಚಿ. ನೇಂದ್ರ ಅಥವಾ ಏಲಕ್ಕಿ ಬಾಳೆ ಹೂ ಆದಲ್ಲಿ ಉತ್ತಮ. ಬೇರೆ ಬಾಳೆ ಆದಲ್ಲಿ ಹೊರಗಿನ ಒಂದೆರಡು ಎಲೆಯನ್ನು ತೆಗೆದು ಹಾಕಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ.
- ಕತ್ತರಿಸಿದ ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ಹಾಕಿ. ಒಂದು ನಿಮಿಷ ಮಗುಚಿ.
- 1/2 ಕಪ್ ನೀರು ಸೇರಿಸ. ಉಪ್ಪು, ಹುಣಿಸೆಹಣ್ಣಿನ ರಸ ಮತ್ತು ಬೆಲ್ಲ ಹಾಕಿ.
- ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ನೀರಾರುವವರೆಗೆ ಬೇಯಿಸಿ. ಒಂದೆರಡು ಬಾರಿ ಮಗುಚಿ.
- ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿಟ್ಟು ಕೊಳ್ಳಿ.
- ಅರೆದ ಮಸಾಲೆಯನ್ನು ಸೇರಿಸಿ, 2 ನಿಮಿಷ ಮಗುಚಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ