ಗುರುವಾರ, ಫೆಬ್ರವರಿ 9, 2017

Balehannu dose recipe in Kannada | ಬಾಳೆಹಣ್ಣು ದೋಸೆ ಮಾಡುವ ವಿಧಾನ


Balehannu dose recipe in Kannada

Balehannu dose recipe in Kannada | ಬಾಳೆಹಣ್ಣು ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ 
  2. 1 ಟೀಸ್ಪೂನ್ ಮೆಂತ್ಯ
  3. 1/4 ಕಪ್ ಅವಲಕ್ಕಿ 
  4. 2 ದೊಡ್ಡ ಬಾಳೆಹಣ್ಣು ಅಥವಾ 4 ಸಣ್ಣ ಬಾಳೆಹಣ್ಣು 
  5. ಉಪ್ಪು ರುಚಿಗೆ ತಕ್ಕಷ್ಟು 
  6. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು

ಬಾಳೆಹಣ್ಣು ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಮೆಂತೆಯನ್ನು ತೊಳೆದು 3 - 4 ಘಂಟೆಗಳ ಕಾಲ ನೆನೆಸಿ. 
  2. ಅರೆಯುವ ಮೊದಲು ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆ ಹಾಕಿ. 
  3. ನೆನೆಸಿದ ನಂತರ ನೀರು ಬಗ್ಗಿಸಿ ತೆಗೆಯಿರಿ. ಅಕ್ಕಿ, ಮೆಂತೆ, ಅವಲಕ್ಕಿ ಮತ್ತು ಸಿಪ್ಪೆ ಸುಲಿದ ಬಾಳೆಹಣ್ಣನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಸುರಿಯಿರಿ. ಮುಚ್ಚಳ ಮುಚ್ಚಿ 7 - 8 ಘಂಟೆಗಳ ಕಾಲ ಅಥವಾ ಒಂದು ರಾತ್ರಿ ಹುದುಗಲು ಬಿಡಿ. 
  5. ಮಾರನೇ ದಿನ ಉಪ್ಪು ಹಾಕಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ. ದೋಸೆ ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  6. ಬಿಸಿ ದೋಸೆ ಕಾವಲಿಗೆ ಎಣ್ಣೆ ಸವರಿ  ಒಂದು ಸೌಟು ಹಿಟ್ಟನ್ನು ಸುರಿಯಿರಿ. ತುಂಬ ತೆಳ್ಳಗೆ ಮಾಡ ಬೇಡಿ. 
  7.  ಕೆಲವು ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ತುಪ್ಪ ಅಥವಾ ಎಣ್ಣೆ ಹಾಕಿ. ದೋಸೆಯನ್ನು ತೆಗೆಯಿರಿ. ಬಿಸಿ ದೋಸೆಯನ್ನು ಬೆಣ್ಣೆ ಮತ್ತು ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗು ನೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...