Shavige payasa recipe in Kannada | ಶಾವಿಗೆ ಪಾಯಸ ಮಾಡುವ ವಿಧಾನ
ಶಾವಿಗೆ ಪಾಯಸ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಶಾವಿಗೆ
- 2 ಕಪ್ ಹಾಲು
- 2 ಕಪ್ ನೀರು (ಶಾವಿಗೆ ಬೇಯಿಸಲು)
- 1/2 ಕಪ್ ಸಕ್ಕರೆ
- 2 ಟೀಸ್ಪೂನ್ ತುಪ್ಪ
- 5-6 ಗೋಡಂಬಿ
- 8-10 ಒಣದ್ರಾಕ್ಷಿ
- ಒಂದು ಚಿಟಿಕೆ ಏಲಕ್ಕಿ ಪುಡಿ
ಶಾವಿಗೆ ಪಾಯಸ ಮಾಡುವ ವಿಧಾನ:
- ಶಾವಿಗೆಯನ್ನು ಹುರಿದು ತೆಗೆದುಕೊಳ್ಳಿ. ಹಾಗೆ ಎರಡು ಕಪ್ ಕುದಿಸಿದ ಹಾಲು ತೆಗೆದುಕೊಳ್ಳಿ.
- ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ.
- ಕುದಿಯುವ ನೀರಿಗೆ ಶಾವಿಗೆ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.
- ನಂತ್ರ ನೀರು ಬಸಿದು ತೆಗೆಯಿರಿ.
- ಬೇಯಿಸಿದ ಶಾವಿಗೆಗೆ, ಹಾಲು ಮತ್ತು ಸಕ್ಕರೆ ಸೇರಿಸಿ, ಕುದಿಯಲು ಇಡಿ.
- ಒಂದೈದು ನಿಮಿಷ ಕುದಿಸಿ, ಏಲಕ್ಕಿ ಪುಡಿ ಸೇರಿಸಿ.
- ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ, ಸ್ಟವ್ ಆಫ್ ಮಾಡಿ.
- ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ. ಈ ಪಾಯಸದಲ್ಲಿ ಶಾವಿಗೆ ಬೇಯಿಸಿ, ನೀರು ಬಸಿದ ಕಾರಣ, ತಣ್ಣಗಾದ ಮೇಲೆ ಪಾಯಸ ಗಟ್ಟಿಯಾಗುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ