Mysore rasam powder recipe in Kannada | ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ಮಾಡುವ ವಿಧಾನ
ಮೈಸೂರು ಶೈಲಿಯ ರಸಂ ಪುಡಿ
ಬೇಕಾಗುವ ಪದಾರ್ಥಗಳು - ಸಣ್ಣ ಅಳತೆ: (ಅಳತೆ ಕಪ್ = 240 ಎಂ ಎಲ್)
- 15 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
- 8 ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ
- 2 ಚಮಚ ಜೀರಿಗೆ
- 1 ಚಮಚ ಮೆಂತೆ
- 1 ಚಮಚ ಸಾಸಿವೆ
- 1 ಚಮಚ ಕರಿಮೆಣಸು ಅಥವಾ ಕಾಳುಮೆಣಸು
- ಸಣ್ಣ ಚೂರು ಅರಶಿನ ಕೊಂಬು
- 1/2 ಚಮಚ ಇಂಗು
- 2 ಚಮಚ ಅಡುಗೆ ಎಣ್ಣೆ
ಬೇಕಾಗುವ ಪದಾರ್ಥಗಳು - ದೊಡ್ಡ ಅಳತೆ: (ಅಳತೆ ಕಪ್ = 240 ಎಂ ಎಲ್)
- 100gm ಬ್ಯಾಡಗಿ ಮೆಣಸಿನಕಾಯಿ
- 100gm ಗುಂಟೂರ್ ಮೆಣಸಿನಕಾಯಿ
- 200gm ಧನಿಯಾ ಅಥವಾ ಕೊತ್ತಂಬರಿ ಬೀಜ
- 50gm ಜೀರಿಗೆ
- 50gm ಮೆಂತೆ
- 50gm ಸಾಸಿವೆ
- 50gm ಕರಿಮೆಣಸು ಅಥವಾ ಕಾಳುಮೆಣಸು
- ಒಂದು ಬೆರಳುದ್ದ ಅರಶಿನ ಕೊಂಬು
- 10gm ಇಂಗು
- 10 ಚಮಚ ಅಡುಗೆ ಎಣ್ಣೆ
ಮೈಸೂರು ಶೈಲಿಯ ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ಮಾಡುವ ವಿಧಾನ:
- ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಗಮನಿಸಿ ನಾನು ಸಣ್ಣ ಅಳತೆ ಉಪಯೋಗಿಸಿದ್ದು, ಅದು ದೊಡ್ಡ ಅಳತೆಯನ್ನು ಗಮನದಲ್ಲಿಟ್ಟು, ಅಂದಾಜಿನ ಮೇಲೆ ನಿಗದಿ ಪಡಿಸಿದ ಅಳತೆಯಾಗಿದೆ.
- ಈಗ ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಒಂದು ಚಮಚ ಎಣ್ಣೆ ಹಾಕಿ, ಒಣ ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟು ಕೊಳ್ಳಿ.
- ನಂತರ ಅದೇ ಬಾಣಲೆಗೆ ಧನಿಯಾ, ಜೆರಿಗೆ, ಮೆಂತೆ, ಕಾಳುಮೆಣಸು, ಅರಶಿನ ಕೊಂಬು ಮತ್ತು ಸಾಸಿವೆಯನ್ನು ಹಾಕಿ, ಸಣ್ಣ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ.
- ಮಸಾಲೆಗಳ ಸುವಾಸನೆ ಬರುವವರೆಗೆ ಅಥವಾ ಮಸಾಲೆಗಳ ಬಣ್ಣ ಸ್ವಲ್ಪ ಬದಲಾವಣೆ ಆಗುವವರೆಗೆ ಅಥವಾ ಜೀರಿಗೆ ಮತ್ತು ಮೆಂತೆ ಉಬ್ಬುವವರೆಗೆ ಹುರಿಯಿರಿ. ಗಮನಿಸಿ, ದೊಡ್ಡ ಅಳತೆಯಾದಲ್ಲಿ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಬೇಕು.
- ಈಗ ಅದೇ ಬಾಣಲೆಗೆ ಇಂಗು ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ.
- ಹುರಿದ ಎಲ್ಲ ಮಸಾಲೆಗಳು ತಣ್ಣಗಾಗುವವರೆಗೆ ಕಾದು, ನೀರಿನ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.
- ಘಮಘಮಿಸುವ ಮೈಸೂರು ಶೈಲಿಯ ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ತಯಾರಾಯಿತು. ಈಗ ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸದ್ಯದಲ್ಲೇ ಈ ಪುಡಿ ಉಪಯೋಗಿಸಿ ಸಾರು ಮತ್ತು ಪುಳಿಯೋಗರೆ ಮಾಡುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
100gm Andre eshtu cups hakbeku. Cups nalli measurement tilisi
ಪ್ರತ್ಯುತ್ತರಅಳಿಸಿ