Kumbalakayi halwa or Kashi halwa recipe in Kannada | ಕುಂಬಳಕಾಯಿ ಹಲ್ವಾ ಅಥವಾ ಕಾಶಿ ಹಲ್ವಾ ಅಥವಾ ಡೂಮ್ರೂಟ್ ಹಲ್ವಾ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಕಪ್ ತುರಿದ ಬೂದುಕುಂಬಳಕಾಯಿ
- 1/2 ಕಪ್ ಸಕ್ಕರೆ
- 1/4 ಕಪ್ ತುಪ್ಪ
- ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- 5 - 6 ಗೋಡಂಬಿ
- 10 ಒಣ ದ್ರಾಕ್ಷಿ
ಕುಂಬಳಕಾಯಿ ಹಲ್ವಾ ಅಥವಾ ಕಾಶಿ ಹಲ್ವಾ ಅಥವಾ ಡೂಮ್ರೂಟ್ ಹಲ್ವಾ ಮಾಡುವ ವಿಧಾನ:
- ಬೂದುಕುಂಬಳಕಾಯಿ ಸಿಪ್ಪೆ ಮತ್ತು ತಿರುಳು ತೆಗೆದು ತುರಿದಿಟ್ಟುಕೊಳ್ಳಿ.
- ತುರಿದ ಕುಂಬಳಕಾಯಿಯನ್ನು ಒಂದು ಪಾತ್ರೆಗೆ ಹಾಕಿ ಆಗಾಗ್ಯೆ ಮಗುಚುತ್ತಾ ಬೇಯಿಸಿ.
- ಕುಂಬಳಕಾಯಿ ಮೆತ್ತಗಾದ ಮೇಲೆ ಅದರ ನೀರನ್ನು ತೆಗೆಯಿರಿ.
- ಆ ನೀರನ್ನು ಒಂದು ದಪ್ಪ ತಳದ ಬಾಣಲೆಗೆ ಹಾಕಿ, ಸಕ್ಕರೆ ಸೇರಿಸಿ.
- ಒಂದೆಳೆ ಪಾಕ ಅಥವಾ ದಪ್ಪ ಸಕ್ಕರೆ ಪಾಕ ಆಗುವವರೆಗೆ ಕುದಿಸಿ.
- ಈಗ ಅದಕ್ಕೆ ಬೇಯಿಸಿ ನೀರು ಬಸಿದ ಕುಂಬಳಕಾಯಿ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚಿ. ಕೆಲವೇ ನಿಮಿಷದಲ್ಲಿ ನೀರಾರುತ್ತದೆ.
- ನೀರಾರಿದ ಮೇಲೆ ಸ್ಟವ್ ಉರಿ ತಗ್ಗಿಸಿ. ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹುರಿದು ತುಪ್ಪ ಸಮೇತ ಸೇರಿಸಿ. ಏಲಕ್ಕಿ ಪುಡಿಯನ್ನೂ ಸೇರಿಸಿ.
- ಕೆಲವೇ ನಿಮಿಷಗಳಲ್ಲಿ ಹಲ್ವಾ ಬಾಣಲೆ ತಳ ಬಿಡಲು ಪ್ರಾರಂಭಿಸುತ್ತದೆ. ಅಥವಾ ಹಲ್ವಾ ಒಂದು ಮೆತ್ತಗಿನ ಮುದ್ದೆಯಂತಾದಾಗ ಸ್ಟವ್ ಆಫ್ ಮಾಡಿ.
- ರುಚಿಕರ ಹಾಗೂ ಆರೋಗ್ಯಕರ ಹಲ್ವಾ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ