Jamun recipe in Kannada | ಜಾಮೂನ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 150gm ನ ಜಾಮೂನ್ ಮಿಕ್ಸ್
- 1/4 ಪ್ರಮಾಣದಷ್ಟು ನೀರು
- 2 ಕಪ್ ಸಕ್ಕರೆ
- 1 ಟೀಸ್ಪೂನ್ ತುಪ್ಪ
- 1 ಟೀ ಚಮಚ ತುಪ್ಪ
- ಚಿಟಿಕೆ ಏಲಕ್ಕಿ ಪುಡಿ
ಜಾಮೂನ್ ಮಾಡುವ ವಿಧಾನ:
- ಒಂದು ಅಗಲವಾದ ಪಾತ್ರೆಯಲ್ಲಿ ಜಾಮೂನ್ ಮಿಕ್ಸ್ ನ್ನು ಅಳತೆ ಮಾಡಿ ತೆಗೆದುಕೊಳ್ಳಿ.
- ನಂತರ 1/4 ಅಳತೆಯಷ್ಟು ನೀರು ತೆಗೆದುಕೊಳ್ಳಿ. (ಹಿಟ್ಟು 2 ಕಪ್ ಗಿಂತ ಸ್ವಲ್ಪ ಕಡಿಮೆ ಇದ್ದ ಕಾರಣ ನಾನು 1/2 ಕಪ್ ಗಿಂತ ಸ್ವಲ್ಪ ಕಡಿಮೆ ನೀರು ಬಳಸಿದೆ). ಸರಿಯಾದ ಪ್ರಮಾಣದಲ್ಲಿ ನೀರು ಉಪಯೋಗಿಸುವುದು ಬಹಳ ಅವಶ್ಯಕ.
- ನಂತರ ಸ್ವಲ್ಪ ಸ್ವಲ್ಪ ನೀರು ಚಿಮುಕಿಸುತ್ತಾ ಜಾಮೂನ್ ಹಿಟ್ಟನ್ನು ಹೆಚ್ಚು ಒತ್ತಡ ಹಾಕದೆ ಕೈ ಬೆರಳುಗಳಿಂದ ಕಲಸಿ. ಚಪಾತಿ ಹಿಟ್ಟು ಕಲಸುವಂತೆ ಒತ್ತಿ ಕಲಸಬೇಡಿ. ಈ ವಿಡಿಯೋದಲ್ಲಿ ಹಿಟ್ಟು ಕಲಸುವುದನ್ನು ನೀವು ನೋಡಬಹುದು. ಐದು ನಿಮಿಷ ಮುಚ್ಚಿಡಿ.
- ಆ ಸಮಯದಲ್ಲಿ ಒಂದು ಪಾತ್ರೆಗೆ 2 ಕಪ್ ಸಕ್ಕರೆ, 2 ಕಪ್ ನೀರು ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಬಿಡಿ.
- ಕುದಿಯಲು ಪ್ರಾರಂಭವಾದ ಮೇಲೆ 6 - 7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ.
- ಈಗ ಕೈಗೆ ತುಪ್ಪ ಸವರಿಕೊಂಡು, ಜಾಮೂನ್ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಉಂಡೆ ಮಾಡುವಾಗಲೂ ಹೆಚ್ಚು ಒತ್ತಡ ಹಾಕಬೇಡಿ.
- ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ ಜಾಮೂನ್ ಗಳನ್ನು ಸಣ್ಣ-ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ.
- ಕಾಯಿಸಿದ ಜಾಮೂನ್ ನನ್ನು ಬಿಸಿ ಸಕ್ಕರೆ ಪಾಕಕ್ಕೆ ಹಾಕಿ. 15 ನಿಮಿಷಗಳ ನಂತರ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ