hesaru bele nippattu recipe in Kannada | ಜಟ್ -ಪಟ್ ಹೆಸರು ಬೇಳೆ ನಿಪ್ಪಟ್ಟು ಮಾಡುವ ವಿಧಾನ
ಹೆಸರು ಬೇಳೆ ನಿಪ್ಪಟ್ಟು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಹೆಸರು ಬೇಳೆ
- 2 ಕಪ್ ಮೈದಾ ಹಿಟ್ಟು
- 2 ಕಪ್ ಗೋಧಿ ಹಿಟ್ಟು
- 4 ಚಮಚ ಜಜ್ಜಿದ ಕಾಳು ಮೆಣಸು
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
ಜಟ್ -ಪಟ್ ಹೆಸರು ಬೇಳೆ ನಿಪ್ಪಟ್ಟು ಮಾಡುವ ವಿಧಾನ:
- ಹೆಸರು ಬೇಳೆಯನ್ನು ೨ ಘಂಟೆಗಳ ಕಾಲ ನೆನೆಸಿಡಿ.
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಗೋಧಿ ಹಿಟ್ಟು, ಜಜ್ಜಿದ ಕಾಳು ಮೆಣಸು, ಉಪ್ಪು ಮತ್ತು ನೆನೆಸಿದ ಹೆಸರು ಬೇಳೆ ಹಾಕಿ.
- ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾದ ಹಿಟ್ಟು ಕಲಸಿ.
- ಈಗ ದೊಡ ಕಿತ್ತಳೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ತೆಳುವಾಗಿ ಲಟ್ಟಿಸಿ.
- ಒಂದು ಲೋಟ ತೆಗೆದುಕೊಂಡು ಸಣ್ಣ ಸಣ್ಣ ವೃತ್ತಾಕಾರದ ನಿಪ್ಪಟ್ಟುಗಳನ್ನು ಮಾಡಿ. ಅಥವಾ ಚೌಕಾಕಾರವಾಗಿ ಕತ್ತರಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ವೃತ್ತಾಕಾರದ ಅಥವಾ ಚೌಕಾಕಾರದ ನಿಪ್ಪಟ್ಟನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಬಿಸಿ ಬಿಸಿ ಮತ್ತು ಗರಿ ಗರಿಯಾದ ಹೆಸರು ಬೇಳೆ ನಿಪ್ಪಟ್ಟು ಸವಿಯಲು ಸಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ