Curd rice or mosaranna in Kannada | ಮೊಸರನ್ನ ಮಾಡುವ ವಿಧಾನ
ಮೊಸರನ್ನ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/2 ಕಪ್ ಸೋನಾ ಮಸೂರಿ ಅಕ್ಕಿ
- 2 ಕಪ್ ಮೊಸರು
- 1/2 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ)
- 1/2 ಚಮಚ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡಲೆಬೇಳೆ
- 5 - 6 ಗೋಡಂಬಿ
- 4 - 5 ಕರಿಬೇವಿನ ಎಲೆ
- 1 ಹಸಿರು ಮೆಣಸಿನಕಾಯಿ
- ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
- ಒಂದು ಚಿಟಿಕೆ ಇಂಗು
- 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತಂಬರಿ ಸೊಪ್ಪು
- 2 ಟೀ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಮೊಸರನ್ನ ಮಾಡುವ ವಿಧಾನ:
- ಮೊದಲಿಗೆ ಮೆತ್ತಗಿನ ಅನ್ನ ಮಾಡಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ. ಈರುಳ್ಳಿ ಹಾಕಲು ಬಯಸಿದಲ್ಲಿ ಹಾಕಿ ಹುರಿಯಿರಿ (ನಾನು ಈರುಳ್ಳಿ ಹಾಕಲಿಲ್ಲ).
- ಒಮ್ಮೆ ಕೈಯಾಡಿಸಿ ಸ್ಟವ್ ಆಫ್ ಮಾಡಿ.
- ಮೆತ್ತಗೆ ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಅನ್ನ ಮೆತ್ತಗಿಲ್ಲವಾದಲ್ಲಿ ಸೌಟು ಅಥವಾ ಮಾಷೆರ್ ನಿಂದ ಮುದ್ದೆ ಮಾಡಿ.
- ಅನ್ನ ಬೆಚ್ಚಗಾದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಕೊತಂಬರಿ ಸೊಪ್ಪು ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ