Badam burfi recipe in Kannada | ಬಾದಾಮ್ ಬರ್ಫಿ ಮಾಡುವ ವಿಧಾನ
ಬಾದಾಮ್ ಬರ್ಫಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1 ಕಪ್ ಬಾದಾಮಿ
- 1/4 ಕಪ್ ಗೋಡಂಬಿ
- 3/4 ಕಪ್ ಹಾಲು
- 1 ಕಪ್ ಸಕ್ಕರೆ
- 2 ಟೇಬಲ್ ಚಮಚ ತುಪ್ಪ
- ಚಿಟಿಕೆ ಏಲಕ್ಕಿ ಪುಡಿ
ಬಾದಾಮ್ ಬರ್ಫಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಬಾದಾಮಿ ಹಾಕಿ ಎರಡು ನಿಮಿಷದ ನಂತ್ರ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ಬಾದಾಮಿ ಸಿಪ್ಪೆ ತೆಗೆದು ಒಂದು ಘಂಟೆ ನೀರಿನಲ್ಲಿ ನೆನೆಸಿಡಿ.
- ಗೋಡಂಬಿಯನ್ನು ಒಂದು ಘಂಟೆ ನೆನೆಸಿಡಿ.
- ನೆನೆಸಿದ ಬಾದಾಮಿ ಮತ್ತು ಗೋಡಂಬಿಯನ್ನು ಹಾಲು ಹಾಕಿ ನುಣ್ಣನೆ ಅರೆಯಿರಿ.
- ಒಂದು ನಾನ್-ಸ್ಟಿಕ್ ಬಾಣಲೆಯಲ್ಲಿ ತುಪ್ಪ, ಅರೆದ ಮಿಶ್ರಣ ಮತ್ತು ಸಕ್ಕರೆ ಹಾಕಿ ಸ್ಟೋವ್ ಮೇಲಿಟ್ಟು ಮಗುಚಿ.
- ಗಟ್ಟಿಯಾದ ಮುದ್ದೆಯಂತಾದಾಗ ಮತ್ತು ಮಿಶ್ರಣ ಬಿಳಿ ಬಣ್ಣಕ್ಕೆ ತಿರುಗಿದಾಗ ಸ್ಟವ್ ಆಫ್ ಮಾಡಿ.
- ಬಿಸಿ ಆರಿದ ಮೇಲೆ ತುಪ್ಪ ಸವರಿದ ದಪ್ಪ ಪ್ಲಾಸ್ಟಿಕ್ ಹಾಳೆ ಮೇಲೆ ಹಾಕಿ, ನಾದಿ, ತುಪ್ಪ ಸವರಿದ ಲಟ್ಟಣಿಗೆಯಿಂದ ದಪ್ಪನಾಗಿ ಲಟ್ಟಿಸಿ. ತುಂಬ ಅಂಟುತ್ತಿದ್ದಲ್ಲಿ ಮಗುಚಿದ್ದು ಕಡಿಮೆಯಾಯಿತೆಂದರ್ಥ. ಪುನಃ ಸ್ವಲ್ಪ ಹೊತ್ತು ಮಗುಚಿ.
- ಎರಡು ಘಂಟೆಯ ನಂತರ ನಿಮಗೆ ಇಷ್ಟವಾದ ಆಕಾರಕ್ಕೆ ಕತ್ತರಿಸಿ.
- ರುಚಿಯಾದ ಬಾದಾಮ್ ಬರ್ಫಿ ಸವಿಯಲು ಸಿದ್ದ. ನಾಲ್ಕೈದು ಘಂಟೆಗಳ ನಂತ್ರ ಸವಿದರೆ ಉತ್ತಮ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ