Avarekalu mixture recipe in Kannada | ಅವರೇಕಾಳು ಕುರುಕಲು ತಿಂಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅವರೇಕಾಳು
- 1/2 ಕಪ್ ಗಟ್ಟಿ ಅವಲಕ್ಕಿ
- 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
- 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
- 1/4 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
- 2 ದೊಡ್ಡ ಚಿಟಿಕೆ ಅರಿಶಿನ ಪುಡಿ
- 2 ದೊಡ್ಡ ಚಿಟಿಕೆ ಇಂಗು
- 5 - 6 ಕರಿಬೇವಿನ ಎಲೆ
- ಎಣ್ಣೆ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು
ಅವರೇಕಾಳು ಕುರುಕಲು ತಿಂಡಿ ಮಾಡುವ ವಿಧಾನ:
- ಅವರೆಕಾಯಿಯನ್ನು ಸುಲಿದು, ಅವರೆಕಾಳನ್ನು ನೀರಿನಲ್ಲಿ 4 - 5 ಘಂಟೆಗಳ ಕಾಲ ಅಥವಾ ರಾತ್ರಿಯಿಡಿ ನೆನೆ ಹಾಕಿ.
- ನೆನೆಸಿದ ನಂತರ ಅವರೆಕಾಳನ್ನು ಹಿಸುಕಿ ಸಿಪ್ಪೆ ತೆಗೆಯಿರಿ. ಒಂದು ಬಟ್ಟೆಯ ಮೇಲೆ ಹರಡಿ ನೀರಾರಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅವರೆಕಾಳನ್ನು ಕಾಯಿಸಿ ಅಥವಾ ಕರಿದು ತೆಗೆಯಿರಿ.
- ನಂತರ ಗಟ್ಟಿ ಅವಲಕ್ಕಿಯನ್ನು ಕಾಯಿಸಿ ಅಥವಾ ಕರಿದು ತೆಗೆಯಿರಿ.
- ಇನ್ನೊಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ.
- ನಂತರ ಕರಿಬೇವನ್ನು ಸೇರಿಸಿ ಹುರಿಯಿರಿ. ಸ್ಟವ್ ಆಫ್ ಮಾಡಿ.
- ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಅರಿಶಿನ, ಉಪ್ಪು ಮತ್ತು ಇಂಗು ಹಾಕಿ.
- ನಂತರ ಹುರಿದು ತೆಗೆದಿಟ್ಟ ಅವರೇಕಾಳು ಮತ್ತು ಅವಲಕ್ಕಿ ಹಾಕಿ ಚೆನ್ನಾಗಿ ಮಗುಚಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ