Hitikida avarekalu saru recipe in Kannada | ಹಿತಿಕಿದ ಅವರೇಕಾಳು ಸಾರು ಮಾಡುವ ವಿಧಾನ
ಹಿತಿಕಿದ ಅವರೇಕಾಳು ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 2 ಕಪ್ ಅವರೇಕಾಳು
- 1 - 2 ಟೀ ಚಮಚ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ ಅಥವಾ (ಅಚ್ಚಖಾರದ ಪುಡಿ + ಧನಿಯಾ ಪುಡಿ)
- 2 ಟೀಸ್ಪೂನ್ ಅಡುಗೆ ಎಣ್ಣೆ
- 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- ನಿಮ್ಮ ರುಚಿ ಪ್ರಕಾರ ಉಪ್ಪು
ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 1 ಕತ್ತರಿಸಿದ ಈರುಳ್ಳಿ
- 4 ಬೇಳೆ ಬೆಳ್ಳುಳ್ಳಿ
- ಸ್ವಲ್ಪ ಶುಂಠಿ
- 1 ಕತ್ತರಿಸಿದ ಟೊಮೆಟೊ
- 1/4 ಕಪ್ ತೆಂಗಿನ ತುರಿ
- ಸ್ವಲ್ಪ ಚಕ್ಕೆ
- ಸ್ವಲ್ಪ ಲವಂಗ
- ಸ್ವಲ್ಪ ಕೊತ್ತುಂಬರಿ ಸೊಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಹಿತಿಕಿದ ಅವರೇಕಾಳು ಸಾರು ಮಾಡುವ ವಿಧಾನ:
- ಅವರೆಕಾಯಿಯನ್ನು ಸುಲಿದು, ಅವರೆಕಾಳನ್ನು ನೀರಿನಲ್ಲಿ 4 - 5 ಘಂಟೆಗಳ ಕಾಲ ಅಥವಾ ರಾತ್ರಿಯಿಡಿ ನೆನೆ ಹಾಕಿ.
- ನೆನೆಸಿದ ನಂತರ ಅವರೆಕಾಳನ್ನು ಹಿಸುಕಿ ಸಿಪ್ಪೆ ತೆಗೆಯಿರಿ.
- ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ.
- ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಿಪ್ಪೆ ತೆಗೆದ ಅವರೆಕಾಳನ್ನು ಹಾಕಿ ಒಂದು ನಿಮಿಷ ಹುರಿಯಿರಿ.
- ನಂತರ ಅರೆದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ.
- ಸಾರು ಅಥವಾ ಸಾಂಬಾರ್ ಪುಡಿ ಸೇರಿಸಿ ಕೈಯಾಡಿಸಿ.
- ಉಪ್ಪು ಮತ್ತು ಮೂರು ಕಪ್ ನಷ್ಟು ನೀರು ಹಾಕಿ ಎರಡು ವಿಷಲ್ ಮಾಡಿ ಬೇಯಿಸಿ.
- ಒತ್ತಡ ಇಳಿದ ಮೇಲೆ ಮುಚ್ಚಳ ತೆರೆದು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ.
- ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
- ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ