Halu payasa recipe in Kannada | ಹಾಲು ಪಾಯಸ ಮಾಡುವ ವಿಧಾನ
ಹಾಲು ಪಾಯಸ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/4 ಕಪ್ ಅಕ್ಕಿ
- 3/4 ಕಪ್ ನೀರು
- 1/2 ಕಪ್ ಸಕ್ಕರೆ
- 1.5 - 2 ಕಪ್ ಹಾಲು (ಪಾಯಸದ ದಪ್ಪ ಅವಲಂಬಿಸಿ)
- 2 ಟೀಸ್ಪೂನ್ ತುಪ್ಪ
- 5-6 ಗೋಡಂಬಿ
- 8-10 ಒಣದ್ರಾಕ್ಷಿ
- 2 ಲವಂಗ ಅಥವಾ ಒಂದು ಏಲಕ್ಕಿ
ಹಾಲು ಪಾಯಸ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು 3/4 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ (ಒಂದು ಲೋಟ ಅಕ್ಕಿಗೆ ಮೂರು ಲೋಟ ನೀರು).
- ಅಕ್ಕಿ ಬೆಂದ ನಂತರ, ಅನ್ನಕ್ಕೆ ಹಾಲು ಹಾಕಿ ಸಣ್ಣ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಹಾಲು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಿ.
- ನಂತರ ಸಕ್ಕರೆ ಮತ್ತು ಜಜ್ಜಿದ ಲವಂಗ ಸೇರಿಸಿ.
- ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಡಿ.
- ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದ ಸಮೇತ ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ