Jolada rotti recipe in Kannada | ಜೋಳದ ರೊಟ್ಟಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಜೋಳದ ಹಿಟ್ಟು
- 1.25 ಕಪ್ ನೀರು
- 1 - 2 ಟೀಸ್ಪೂನ್ ಗೋಧಿ ಹಿಟ್ಟು
- 1/2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
- ಒಂದು ಕಾಟನ್ ಬಟ್ಟೆ ಮತ್ತು ಸ್ವಲ್ಪ ನೀರು
ಜೋಳದ ರೊಟ್ಟಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ 1 ಕಪ್ ನೀರು, ಎಣ್ಣೆ ಮತ್ತು ಉಪ್ಪನ್ನು ಹಾಕಿ ಕುದಿಸಿ.
- ಕುದಿಯುವ ನೀರಿಗೆ ಜೋಳದ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಸೇರಿಸಿ, ಒಮ್ಮೆ ಕೈಯಾಡಿಸಿ ಸ್ಟವ್ ಆಫ್ ಮಾಡಿ.
- ಈಗ ಉಳಿದ 0.25 ಕಪ್ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಸಟ್ಟುಗದಿಂದ ಮಗುಚಿ, ಚೆನ್ನಾಗಿ ಹೊಂದಿಸಿ.
- ಬಿಸಿ ಆರುವವರೆಗೆ ಮುಚ್ಚಿಡಿ.
- ಬಿಸಿ ಆರಿದ ಮೇಲೆ ಕೈಗೆ ಹಿಟ್ಟು ಮುಟ್ಟಿಸಿ ಕೊಂಡು ಹಿಟ್ಟನ್ನು ಚೆನ್ನಾಗಿ ನಾದಿ.
- ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. ಕೈಯಲ್ಲಿ ತಟ್ಟಿಯೂ ಮಾಡಬಹುದು.
- ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ.
- ಬಟ್ಟೆಯನ್ನು ನೀರಿನಲ್ಲಿ ಅದ್ದಿ ಇಡೀ ರೊಟ್ಟಿಯ ಮೇಲೆ ಮೆತ್ತಗೆ ಒತ್ತಿರಿ. ರೊಟ್ಟಿಯ ಮೇಲಿನ ನೀರು ಆರಿದ ಮೇಲೆ ರೊಟ್ಟಿಯನ್ನು ತಿರುಗಿಸಿ ಎರಡು ಬದಿ ಕಾಯಿಸಿ.
- ಬಿಸಿ ಬಿಸಿಯಾಗಿರುವಾಗಲೇ ಬೆಣ್ಣೆ ಮತ್ತು ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ