ಗುರುವಾರ, ಅಕ್ಟೋಬರ್ 27, 2016

Athrasa or Kajjaya recipe in Kannada | ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ

Athrasa or Kajjaya recipe in Kannada

Athrasa or Kajjaya recipe in Kannada | ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ 

ಅತ್ರಾಸ ಅಥವಾ ಕಜ್ಜಾಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.25 ಕಪ್ ಅಕ್ಕಿ
  2. 1 ಕಪ್ ಬೆಲ್ಲ
  3. 1/4 ಕಪ್ ನೀರು
  4. 5 ಚಮಚ ತುಪ್ಪ ಅಥವಾ ಎಣ್ಣೆ
  5. 2 ಏಲಕ್ಕಿ
  6. 2 ಟೇಬಲ್ ಚಮಚ ಬಿಳಿ ಎಳ್ಳು (ಬೇಕಾದಲ್ಲಿ)
  7. 1 ಟೇಬಲ್ ಚಮಚ ಗಸಗಸೆ (ಬೇಕಾದಲ್ಲಿ)
  8. ಕಾಯಿಸಲು ತುಪ್ಪ ಅಥವಾ ಎಣ್ಣೆ

ಅತ್ರಾಸ ಅಥವಾ ಕಜ್ಜಾಯ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 2 ಗಂಟೆ ಕಾಲ ನೆನೆಯಲು ಬಿಡಿ. 
  2. 2 ಗಂಟೆಯ ನಂತರ ನೀರನ್ನು ಸಂಪೂರ್ಣ ಬಗ್ಗಿಸಿ, ಒಂದು ಬಟ್ಟೆಯಲ್ಲಿ ಹರಡಿ ನೀರಾರಲು ಬಿಡಿ. 
  3. ಸುಮಾರು ಒಂದು ಘಂಟೆಯ ನಂತರ ಅಥವಾ ಅಕ್ಕಿ ಸ್ವಲ್ಪ ಒದ್ದೆಯಿರುವಾಗ ಮಿಕ್ಸಿಯಲ್ಲಿ, ಏಲಕ್ಕಿಯೊಂದಿಗೆ ಪುಡಿ ಮಾಡಿ. 
  4. ಸಾರಣಿಸಿ ಅಥವಾ ಜರಡಿ ಹಿಡಿದು ನಯವಾದ ಅಕ್ಕಿ ಹಿಟ್ಟನ್ನು ಸಿದ್ಧ ಮಾಡಿ. ಒಂದು ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ. 
  5. ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. 
  6. ಒಂದೆಳೆ ಪಾಕ ಮಾಡಿ ಅಥವಾ ನೀರಿನಲ್ಲಿ ಸ್ವಲ್ಪ ಬೆಲ್ಲದ ಪಾಕ ಹಾಕಿದಾಗ ಮೆತ್ತಗಿನ ಮುದ್ದೆಯಾಗುವವರೆಗೆ ಅಥವಾ ನೊರೆ ನೊರೆಯಾದ ದಪ್ಪ ಪಾಕ ಆಗುವವರೆಗೆ ಕುದಿಸಿ. ಸ್ಟವ್ ಆಫ್ ಮಾಡಿ. 
  7. ಕೂಡಲೇ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ. ದಪ್ಪ ಪೇಸ್ಟ್ ನಂತಹ ಹಿಟ್ಟು ರೆಡಿಯಾಗುವುದು. 
  8. ಸ್ವಲ್ಪ ಬಿಸಿ ಆರಿದ ಮೇಲೆ ಒಂದು ಸ್ಟೀಲ್ ಡಬ್ಬಕ್ಕೆ ಹಾಕಿ ಮೇಲಿನಿಂದ 5 ಚಮಚ ತುಪ್ಪ ಅಥವಾ ಎಣ್ಣೆ ಸುರಿದು ಮುಚ್ಚಿಡಿ. 
  9. ಸಂಪೂರ್ಣ ತಣ್ಣಗಾದ ಮೇಲೆ ಹಿಟ್ಟು ಸ್ವಲ್ಪ ಗಟ್ಟಿಯಾಗಿರುವುದನ್ನು ನೀವು ಗಮನಿಸಬಹುದು. ಆದರೂ ಒಂದು ಕೈಯಲ್ಲಿ ತೆಗೆದು ಉಂಡೆ ಮಾಡುವಷ್ಟು ಮೆತ್ತಗಿರುತ್ತದೆ. ಸಾಧ್ಯವಾದಲ್ಲಿ ಒಂದು ದಿನ ಇಟ್ಟರೆ ಅತ್ರಸ ಅಥವಾ ಕಜ್ಜಾಯ ಚೆನ್ನಾಗಿ ಬರುವುದು. 
  10. ಸಣ್ಣ ನಿಂಬೆ ಗಾತ್ರದ ಉಂಡೆ ತೆಗೆದುಕೊಂಡು ಎಣ್ಣೆ ಹಚ್ಚಿದ ಬಾಳೆಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ತಟ್ಟಿ ಬಿಸಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕಾಯಿಸಿ. 
  11. ಗಮನಿಸಿ ಎಣ್ಣೆ ಬಿಸಿ ಇರಬೇಕು. ಕಾಯಿಸುವುದು ಸಣ್ಣ ಉರಿಯಲ್ಲಿ ಆಗಬೇಕು. ಕಜ್ಜಾಯ ಅಥವಾ ಅತ್ರಸ ಬೇಗನೆ ಕಾಯುತ್ತದೆ. ಸ್ವರ ಅಥವಾ ಗುಳ್ಳೆ ನಿಂತ ಕೂಡಲೇ ತೆಗೆಯಿರಿ. ಜಾಸ್ತಿ ಕಾಯಿಸಿದರೆ ತುಂಬ ಗರಿ ಗರಿಯಾಗುವುದು. 
  12. ತೆಗೆಯುವ ಮೊದಲು ಎರಡು ಸಟ್ಟುಗದಿಂದ ಒತ್ತಿದಲ್ಲಿ ಹೆಚ್ಚಿನ ಎಣ್ಣೆ ತೆಗೆಯಬಹುದು. 
  13. ತಣ್ಣಗಾದ ಮೇಲೆ ಡಬ್ಬದಲ್ಲಿ ತುಂಬಿಸಿಡಿ. ರುಚಿ ರುಚಿಯಾದ ಕಜ್ಜಾಯ ಸವಿದು ಆನಂದಿಸಿ. ದೀಪಾವಳಿ ಹಬ್ಬದ ಶುಭಾಶಯಗಳು. 


sihi avalakki panchakajjaya recipe in Kannada | ಸಿಹಿ ಅವಲಕ್ಕಿ ಪಂಚಕಜ್ಜಾಯ ಮಾಡುವ ವಿಧಾನ

sihi avalakki panchakajjaya recipe in Kannada

sihi avalakki panchakajjaya recipe in Kannada | ಸಿಹಿ ಅವಲಕ್ಕಿ ಪಂಚಕಜ್ಜಾಯ ಮಾಡುವ ವಿಧಾನ 

ಸಿಹಿ ಅವಲಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಅವಲಕ್ಕಿ
  2. 1/2 ಕಪ್ ತೆಂಗಿನ ತುರಿ
  3. 1/4 ಕಪ್ ಬೆಲ್ಲ
  4. 1/2 ಚಮಚ ತುಪ್ಪ
  5. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಸಿಹಿ ಅವಲಕ್ಕಿ ಪಂಚಕಜ್ಜಾಯ ಮಾಡುವ ವಿಧಾನ:

  1. ತೆಂಗಿನ ತುರಿ, ಬೆಲ್ಲ, ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಒಂದು ಅಗಲವಾದ ಬಟ್ಟಲಿನಲ್ಲಿ ತೆಗೆದುಕೊಂಡು ಕಲಸಿ. 
  2. ಅದಕ್ಕೆ ಅವಲಕ್ಕಿಯನ್ನು ಹಾಕಿ ಕಲಸಿದರೆ ಸಿಹಿ ಅವಲಕ್ಕಿ ಪಂಚಕಜ್ಜಾಯ ಸವಿಯಲು ಸಿದ್ಧ.

ಬುಧವಾರ, ಅಕ್ಟೋಬರ್ 26, 2016

Jamun recipe in Kannada | ಜಾಮೂನ್ ಮಾಡುವ ವಿಧಾನ

Jamun recipe in Kannada

Jamun recipe in Kannada | ಜಾಮೂನ್ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 150gm ನ ಜಾಮೂನ್ ಮಿಕ್ಸ್ 
  2. 1/4 ಪ್ರಮಾಣದಷ್ಟು ನೀರು
  3. 2 ಕಪ್ ಸಕ್ಕರೆ
  4. 1 ಟೀಸ್ಪೂನ್ ತುಪ್ಪ 
  5. 1 ಟೀ ಚಮಚ ತುಪ್ಪ
  6. ಚಿಟಿಕೆ ಏಲಕ್ಕಿ ಪುಡಿ

ಜಾಮೂನ್ ಮಾಡುವ ವಿಧಾನ:

  1. ಒಂದು ಅಗಲವಾದ ಪಾತ್ರೆಯಲ್ಲಿ ಜಾಮೂನ್ ಮಿಕ್ಸ್ ನ್ನು ಅಳತೆ ಮಾಡಿ ತೆಗೆದುಕೊಳ್ಳಿ. 
  2. ನಂತರ 1/4 ಅಳತೆಯಷ್ಟು ನೀರು ತೆಗೆದುಕೊಳ್ಳಿ. (ಹಿಟ್ಟು 2 ಕಪ್ ಗಿಂತ ಸ್ವಲ್ಪ ಕಡಿಮೆ ಇದ್ದ ಕಾರಣ ನಾನು 1/2 ಕಪ್ ಗಿಂತ ಸ್ವಲ್ಪ ಕಡಿಮೆ ನೀರು ಬಳಸಿದೆ). ಸರಿಯಾದ ಪ್ರಮಾಣದಲ್ಲಿ ನೀರು ಉಪಯೋಗಿಸುವುದು ಬಹಳ ಅವಶ್ಯಕ. 
  3. ನಂತರ ಸ್ವಲ್ಪ ಸ್ವಲ್ಪ ನೀರು ಚಿಮುಕಿಸುತ್ತಾ ಜಾಮೂನ್ ಹಿಟ್ಟನ್ನು ಹೆಚ್ಚು ಒತ್ತಡ ಹಾಕದೆ ಕೈ ಬೆರಳುಗಳಿಂದ ಕಲಸಿ. ಚಪಾತಿ ಹಿಟ್ಟು ಕಲಸುವಂತೆ ಒತ್ತಿ ಕಲಸಬೇಡಿ. ಈ ವಿಡಿಯೋದಲ್ಲಿ ಹಿಟ್ಟು ಕಲಸುವುದನ್ನು ನೀವು ನೋಡಬಹುದು. ಐದು ನಿಮಿಷ ಮುಚ್ಚಿಡಿ. 
  4. ಆ ಸಮಯದಲ್ಲಿ ಒಂದು ಪಾತ್ರೆಗೆ 2 ಕಪ್ ಸಕ್ಕರೆ, 2 ಕಪ್ ನೀರು ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಬಿಡಿ. 
  5. ಕುದಿಯಲು  ಪ್ರಾರಂಭವಾದ ಮೇಲೆ 6 - 7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ. 
  6. ಈಗ ಕೈಗೆ ತುಪ್ಪ ಸವರಿಕೊಂಡು, ಜಾಮೂನ್ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಉಂಡೆ ಮಾಡುವಾಗಲೂ ಹೆಚ್ಚು ಒತ್ತಡ ಹಾಕಬೇಡಿ. 
  7. ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ ಜಾಮೂನ್ ಗಳನ್ನು ಸಣ್ಣ-ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ. 
  8. ಕಾಯಿಸಿದ ಜಾಮೂನ್ ನನ್ನು ಬಿಸಿ ಸಕ್ಕರೆ ಪಾಕಕ್ಕೆ ಹಾಕಿ. 15 ನಿಮಿಷಗಳ ನಂತರ ಸವಿಯಿರಿ. 

ಸೋಮವಾರ, ಅಕ್ಟೋಬರ್ 24, 2016

Badam burfi recipe in Kannada | ಬಾದಾಮ್ ಬರ್ಫಿ ಮಾಡುವ ವಿಧಾನ

Badam burfi recipe in Kannada

Badam burfi recipe in Kannada | ಬಾದಾಮ್ ಬರ್ಫಿ ಮಾಡುವ ವಿಧಾನ 

ಬಾದಾಮ್ ಬರ್ಫಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಕಪ್ ಬಾದಾಮಿ
  2. 1/4 ಕಪ್ ಗೋಡಂಬಿ
  3. 3/4 ಕಪ್ ಹಾಲು
  4. 1 ಕಪ್ ಸಕ್ಕರೆ 
  5. 2 ಟೇಬಲ್ ಚಮಚ ತುಪ್ಪ
  6. ಚಿಟಿಕೆ ಏಲಕ್ಕಿ ಪುಡಿ

ಬಾದಾಮ್ ಬರ್ಫಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಬಾದಾಮಿ ಹಾಕಿ ಎರಡು ನಿಮಿಷದ ನಂತ್ರ ಸ್ಟವ್ ಆಫ್ ಮಾಡಿ. 
  2. ಬಿಸಿ ಆರಿದ ಮೇಲೆ ಬಾದಾಮಿ ಸಿಪ್ಪೆ ತೆಗೆದು ಒಂದು ಘಂಟೆ ನೀರಿನಲ್ಲಿ ನೆನೆಸಿಡಿ. 
  3. ಗೋಡಂಬಿಯನ್ನು ಒಂದು ಘಂಟೆ ನೆನೆಸಿಡಿ. 
  4. ನೆನೆಸಿದ ಬಾದಾಮಿ ಮತ್ತು ಗೋಡಂಬಿಯನ್ನು ಹಾಲು ಹಾಕಿ ನುಣ್ಣನೆ ಅರೆಯಿರಿ. 
  5. ಒಂದು ನಾನ್-ಸ್ಟಿಕ್ ಬಾಣಲೆಯಲ್ಲಿ ತುಪ್ಪ, ಅರೆದ ಮಿಶ್ರಣ ಮತ್ತು ಸಕ್ಕರೆ ಹಾಕಿ ಸ್ಟೋವ್ ಮೇಲಿಟ್ಟು ಮಗುಚಿ. 
  6. ಗಟ್ಟಿಯಾದ ಮುದ್ದೆಯಂತಾದಾಗ ಮತ್ತು ಮಿಶ್ರಣ ಬಿಳಿ ಬಣ್ಣಕ್ಕೆ ತಿರುಗಿದಾಗ ಸ್ಟವ್ ಆಫ್ ಮಾಡಿ. 
  7. ಬಿಸಿ ಆರಿದ ಮೇಲೆ ತುಪ್ಪ ಸವರಿದ ದಪ್ಪ ಪ್ಲಾಸ್ಟಿಕ್ ಹಾಳೆ ಮೇಲೆ ಹಾಕಿ, ನಾದಿ, ತುಪ್ಪ ಸವರಿದ ಲಟ್ಟಣಿಗೆಯಿಂದ ದಪ್ಪನಾಗಿ ಲಟ್ಟಿಸಿ. ತುಂಬ ಅಂಟುತ್ತಿದ್ದಲ್ಲಿ ಮಗುಚಿದ್ದು ಕಡಿಮೆಯಾಯಿತೆಂದರ್ಥ. ಪುನಃ ಸ್ವಲ್ಪ ಹೊತ್ತು ಮಗುಚಿ. 
  8. ಎರಡು ಘಂಟೆಯ ನಂತರ ನಿಮಗೆ ಇಷ್ಟವಾದ ಆಕಾರಕ್ಕೆ ಕತ್ತರಿಸಿ.
  9. ರುಚಿಯಾದ ಬಾದಾಮ್ ಬರ್ಫಿ ಸವಿಯಲು ಸಿದ್ದ. ನಾಲ್ಕೈದು ಘಂಟೆಗಳ ನಂತ್ರ ಸವಿದರೆ ಉತ್ತಮ.

Avarekalu usli recipe in Kannada | ಅವರೇಕಾಳು ಉಸ್ಲಿ ಮಾಡುವ ವಿಧಾನ

Avarekalu usli recipe in Kannada

Avarekalu usli recipe in Kannada | ಅವರೇಕಾಳು ಉಸ್ಲಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅವರೇಕಾಳು
  2. 1 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/4 ಟೀಸ್ಪೂನ್ ಸಾಸಿವೆ 
  4. 1/4 ಟೀಸ್ಪೂನ್ ಜೀರಿಗೆ
  5. 1/2 ಒಣಮೆಣಸಿನಕಾಯಿ ಚೂರು ಮಾಡಿದ್ದೂ
  6. 4 - 5 ಕರಿಬೇವಿನ ಎಲೆ
  7. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  8. ಒಂದು ಚಿಟಿಕೆ ಅರಿಶಿನ ಪುಡಿ
  9. ಒಂದು ದೊಡ್ಡ ಚಿಟಿಕೆ ಇಂಗು
  10. 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  11. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ 
  2. ಸಣ್ಣ ಚೂರು ಶುಂಠಿ
  3. 2 - 3 ಹಸಿರು ಮೆಣಸಿನಕಾಯಿ 
  4. ಸ್ವಲ್ಪ ಕೊತಂಬರಿ ಸೊಪ್ಪು

ಅವರೇಕಾಳು ಉಸ್ಲಿ ಮಾಡುವ ವಿಧಾನ:

  1. ಅವರೇಕಾಳನ್ನು ಕುಕ್ಕರ್ ನಲ್ಲಿ 3 - 4 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
  2. ತೆಂಗಿನತುರಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ, ಮಸಾಲೆ ಅರೆದಿಟ್ಟುಕೊಳ್ಳಿ. 
  3. ನಂತರ ಒಂದು ಬಾಣಲೆಯನ್ನು ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ತಯಾರಿಸಿ. 
  4. ನಂತರ ಒಗ್ಗರಣೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ
  5. ಜೊತೆಯಲ್ಲಿ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  6. ಅದಕ್ಕೆ ಬೇಯಿಸಿದ ಅವರೇಕಾಳನ್ನು ಹಾಕಿ ಮಗುಚಿ. 
  7. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  8. ಅರೆದ ಮಸಾಲೆ ಸೇರಿಸಿ, ಚೆನ್ನಾಗಿ ಮಗುಚಿ ಒಂದು ನಿಮಿಷ ಬೇಯಿಸಿ. 
  9.  ಸ್ಟವ್ ಆಫ್ ಮಾಡಿ. 
  10. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಸವಿದು ಆನಂದಿಸಿ. ಅನ್ನ ಅಥವಾ ಚಪಾತಿಯೊಂದಿಗೂ ಬಡಿಸಬಹುದು. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಅಕ್ಟೋಬರ್ 20, 2016

Jolada rotti recipe in Kannada | ಜೋಳದ ರೊಟ್ಟಿ ಮಾಡುವ ವಿಧಾನ

Jolada rotti recipe in Kannada

Jolada rotti recipe in Kannada | ಜೋಳದ ರೊಟ್ಟಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಜೋಳದ ಹಿಟ್ಟು 
  2. 1.25 ಕಪ್ ನೀರು
  3. 1 - 2 ಟೀಸ್ಪೂನ್ ಗೋಧಿ ಹಿಟ್ಟು 
  4. 1/2 ಟೀಸ್ಪೂನ್ ಅಡುಗೆ ಎಣ್ಣೆ 
  5. ಉಪ್ಪು ರುಚಿಗೆ ತಕ್ಕಷ್ಟು
  6. ಒಂದು ಕಾಟನ್ ಬಟ್ಟೆ ಮತ್ತು ಸ್ವಲ್ಪ ನೀರು

ಜೋಳದ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ 1 ಕಪ್ ನೀರು, ಎಣ್ಣೆ ಮತ್ತು ಉಪ್ಪನ್ನು ಹಾಕಿ ಕುದಿಸಿ. 
  2. ಕುದಿಯುವ ನೀರಿಗೆ ಜೋಳದ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಸೇರಿಸಿ, ಒಮ್ಮೆ ಕೈಯಾಡಿಸಿ ಸ್ಟವ್ ಆಫ್ ಮಾಡಿ. 
  3. ಈಗ ಉಳಿದ 0.25 ಕಪ್ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಸಟ್ಟುಗದಿಂದ ಮಗುಚಿ, ಚೆನ್ನಾಗಿ ಹೊಂದಿಸಿ. 
  4. ಬಿಸಿ ಆರುವವರೆಗೆ ಮುಚ್ಚಿಡಿ. 
  5. ಬಿಸಿ ಆರಿದ ಮೇಲೆ ಕೈಗೆ ಹಿಟ್ಟು ಮುಟ್ಟಿಸಿ ಕೊಂಡು ಹಿಟ್ಟನ್ನು ಚೆನ್ನಾಗಿ ನಾದಿ. 
  6. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. ಕೈಯಲ್ಲಿ ತಟ್ಟಿಯೂ ಮಾಡಬಹುದು. 
  7. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ. 
  8. ಬಟ್ಟೆಯನ್ನು ನೀರಿನಲ್ಲಿ ಅದ್ದಿ ಇಡೀ ರೊಟ್ಟಿಯ ಮೇಲೆ ಮೆತ್ತಗೆ ಒತ್ತಿರಿ. ರೊಟ್ಟಿಯ ಮೇಲಿನ ನೀರು ಆರಿದ ಮೇಲೆ ರೊಟ್ಟಿಯನ್ನು ತಿರುಗಿಸಿ ಎರಡು ಬದಿ ಕಾಯಿಸಿ. 
  9. ಬಿಸಿ ಬಿಸಿಯಾಗಿರುವಾಗಲೇ ಬೆಣ್ಣೆ ಮತ್ತು ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

Avarekalu mixture recipe in Kannada | ಅವರೇಕಾಳು ಕುರುಕಲು ತಿಂಡಿ ಮಾಡುವ ವಿಧಾನ

Avarekalu mixture recipe in Kannada

Avarekalu mixture recipe in Kannada | ಅವರೇಕಾಳು ಕುರುಕಲು ತಿಂಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅವರೇಕಾಳು
  2. 1/2 ಕಪ್ ಗಟ್ಟಿ ಅವಲಕ್ಕಿ
  3. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  4. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  5. 1/4 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  6. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  7. 2 ದೊಡ್ಡ ಚಿಟಿಕೆ ಇಂಗು 
  8. 5 - 6 ಕರಿಬೇವಿನ ಎಲೆ 
  9. ಎಣ್ಣೆ ಕಾಯಿಸಲು
  10. ಉಪ್ಪು ರುಚಿಗೆ ತಕ್ಕಷ್ಟು

ಅವರೇಕಾಳು ಕುರುಕಲು ತಿಂಡಿ ಮಾಡುವ ವಿಧಾನ:

  1. ಅವರೆಕಾಯಿಯನ್ನು ಸುಲಿದು, ಅವರೆಕಾಳನ್ನು ನೀರಿನಲ್ಲಿ 4 - 5 ಘಂಟೆಗಳ ಕಾಲ ಅಥವಾ ರಾತ್ರಿಯಿಡಿ ನೆನೆ ಹಾಕಿ.
  2. ನೆನೆಸಿದ ನಂತರ ಅವರೆಕಾಳನ್ನು ಹಿಸುಕಿ ಸಿಪ್ಪೆ ತೆಗೆಯಿರಿ. ಒಂದು ಬಟ್ಟೆಯ ಮೇಲೆ ಹರಡಿ ನೀರಾರಿಸಿಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅವರೆಕಾಳನ್ನು ಕಾಯಿಸಿ ಅಥವಾ ಕರಿದು ತೆಗೆಯಿರಿ. 
  4. ನಂತರ ಗಟ್ಟಿ ಅವಲಕ್ಕಿಯನ್ನು ಕಾಯಿಸಿ ಅಥವಾ ಕರಿದು ತೆಗೆಯಿರಿ. 
  5. ಇನ್ನೊಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ. 
  6. ನಂತರ ಕರಿಬೇವನ್ನು ಸೇರಿಸಿ ಹುರಿಯಿರಿ. ಸ್ಟವ್ ಆಫ್ ಮಾಡಿ. 
  7. ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಅರಿಶಿನ, ಉಪ್ಪು ಮತ್ತು ಇಂಗು ಹಾಕಿ. 
  8. ನಂತರ ಹುರಿದು ತೆಗೆದಿಟ್ಟ ಅವರೇಕಾಳು ಮತ್ತು ಅವಲಕ್ಕಿ ಹಾಕಿ ಚೆನ್ನಾಗಿ ಮಗುಚಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.

ಬುಧವಾರ, ಅಕ್ಟೋಬರ್ 19, 2016

Uddina dose recipe in Kannada | ಉದ್ದಿನ ದೋಸೆ ಮಾಡುವ ವಿಧಾನ

Uddina dose recipe in Kannada

Uddina dose recipe in Kannada | ಉದ್ದಿನ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 2 ಕಪ್ ದೋಸೆ ಅಕ್ಕಿ
  2. 3/4 ಕಪ್ ಉದ್ದಿನ ಬೇಳೆ (ಗ್ರೈಂಡರ್ ಬಳಸುತ್ತೀರಾದರೆ 1/2 ಕಪ್ ಸಾಕು )
  3. 1 ಟೀಸ್ಪೂನ್ ಮೆಂತ್ಯ
  4. 1/2 ಕಪ್ ತೆಳು ಅಥವಾ 1/4 ಕಪ್ ದಪ್ಪ ಅವಲಕ್ಕಿ / ಗಟ್ಟಿ ಆವಲಕ್ಕಿ
  5. ಉಪ್ಪು ರುಚಿಗೆ ತಕ್ಕಷ್ಟು.

ದೋಸೆ ಹಿಟ್ಟು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  3. ಅವಲಕ್ಕಿ ಯನ್ನು ತೊಳೆದು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ತೆಳು ಅವಲಕ್ಕಿ ಆದಲ್ಲಿ ನೆನೆಸಬೇಕಾಗಿಲ್ಲ. 
  4. ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸಿತ್ತಾ ಮಿಕ್ಸಿಯಲ್ಲಿ ಅರೆದು ಒಂದು ಪಾತ್ರೆಗೆ ಹಾಕಿ. 
  5. ನಂತರ ಅಕ್ಕಿಯನ್ನು ನುಣ್ಣನೆ ಅರೆದು ಅದೇ ಪಾತ್ರೆಗೆ ಬಗ್ಗಿಸಿ. 
  6. ಕೊನೆಯಲ್ಲಿ ಅವಲಕ್ಕಿ ಮತ್ತು ಉಳಿದ ಅಕ್ಕಿಯನ್ನು ನುಣ್ಣನೆ ಅರೆದು ಅದೇ ಪಾತ್ರೆಗೆ ಬಗ್ಗಿಸಿ. 
  7. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ. 
  8. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

    ಉದ್ದಿನ ದೋಸೆ ಮಾಡುವ ವಿಧಾನ:

    1. ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿಮಾಡಿ ಕೊಳ್ಳಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
    2. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

    To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

    ಸೋಮವಾರ, ಅಕ್ಟೋಬರ್ 17, 2016

    Kayi holige or kayi obbattu recipe in Kannada | ಕಾಯಿ ಹೋಳಿಗೆ ಅಥವಾ ಕಾಯಿ ಒಬ್ಬಟ್ಟು ಮಾಡುವ ವಿಧಾನ

    Kayi holige or kayi obbattu recipe in Kannada

    Kayi holige or kayi obbatu recipe in Kannada | ಕಾಯಿ ಹೋಳಿಗೆ ಅಥವಾ ಕಾಯಿ ಒಬ್ಬಟ್ಟು ಮಾಡುವ ವಿಧಾನ 



    ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

    1. 2 ಕಪ್ ಮೈದಾ ಹಿಟ್ಟು 
    2. 3/4 ಕಪ್ ನೀರು 
    3. ಉಪ್ಪು ರುಚಿಗೆ ತಕ್ಕಷ್ಟು
    4. ಚಿಟಿಕೆ ಬಣ್ಣ ಅಥವಾ ಅರಶಿನ
    5. 6 ಟೇಬಲ್ ಚಮಚ ಅಡುಗೆ ಎಣ್ಣೆ

    ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

    1. 4 ಕಪ್ ತೆಂಗಿನ ತುರಿ
    2. 2 ಕಪ್ ಪುಡಿಮಾಡಿದ ಬೆಲ್ಲ
    3. 2 ಏಲಕ್ಕಿ

    ಕಾಯಿ ಹೋಳಿಗೆ ಅಥವಾ ಕಾಯಿ ಒಬ್ಬಟ್ಟು ಮಾಡುವ ವಿಧಾನ:

    1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು ಮತ್ತು ಬಣ್ಣ (ಅಥವಾ ಅರಶಿನ) ಹಾಕಿ. 
    2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಬಹಳ ಮೃದುವಾದ ಹಿಟ್ಟನ್ನು ಕಲಸಿ. 
    3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ. 
    4. ಈಗ ಹೂರಣ ತಯಾರಿಸಲು, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ನೀರು ಹಾಕದೆ ನುಣ್ಣನೆ ಅರೆಯಿರಿ. 
    5. ಅರೆದ ಮಿಶ್ರಣವನ್ನು ಬಾಣಲೆಗೆ ಹಾಕಿ, ಸ್ಟವ್ ಮೇಲಿಟ್ಟು ನೀರಿನಂಶ ಹೋಗುವವರೆಗೆ ಮಗುಚಿ. "ಚಸ್" ಎಂದು ಬರುವ ಸದ್ದು ಕಡಿಮೆ ಆದಾಗ ನೀರಿನಂಶ ಹೋಯಿತೆಂದು ತಿಳಿಯಬಹುದು. 
    6. ಹೂರಣ ಬೆಚ್ಚಗಾದ ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟು ಕೊಳ್ಳಿ. ಉಂಡೆ ಮೃದುವಾಗಿರಬೇಕು. 
    7. ಈಗ ಕಣಕವನ್ನು ಸಹ ಉಂಡೆ ಮಾಡಿಟ್ಟು ಕೊಳ್ಳಿ. ಉಂಡೆ ಮಾಡಲು ಸಣ್ಣ ಲಿಂಬೆ ಗಾತ್ರದ ಹಿಟ್ಟನ್ನು ಚಿವುಟಿ ತೆಗೆದು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲೆ ಹಾಕಿದರಾಯಿತು. 
    8. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಕಣಕವನ್ನು ಬೆರಳಿನಿಂದ ತೆಗೆದು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ. 
    9. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ. 
    10. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. ರುಚಿ ರುಚಿಯಾದ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

    ಭಾನುವಾರ, ಅಕ್ಟೋಬರ್ 16, 2016

    Mysore rasam powder recipe in Kannada | ಮೈಸೂರು ಶೈಲಿಯ ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ಮಾಡುವ ವಿಧಾನ

    Mysore rasam powder recipe in Kannada

    Mysore rasam powder recipe in Kannada | ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ಮಾಡುವ ವಿಧಾನ 


    ಮೈಸೂರು ಶೈಲಿಯ ರಸಂ ಪುಡಿ

    ಬೇಕಾಗುವ ಪದಾರ್ಥಗಳು - ಸಣ್ಣ ಅಳತೆ: (ಅಳತೆ ಕಪ್ = 240 ಎಂ ಎಲ್)

    1. 15 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
    2. 8 ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ
    3. 2 ಚಮಚ ಜೀರಿಗೆ
    4. 1 ಚಮಚ ಮೆಂತೆ
    5. 1 ಚಮಚ ಸಾಸಿವೆ
    6. 1 ಚಮಚ ಕರಿಮೆಣಸು ಅಥವಾ ಕಾಳುಮೆಣಸು
    7. ಸಣ್ಣ ಚೂರು ಅರಶಿನ ಕೊಂಬು
    8. 1/2 ಚಮಚ ಇಂಗು
    9. 2 ಚಮಚ ಅಡುಗೆ ಎಣ್ಣೆ

    ಬೇಕಾಗುವ ಪದಾರ್ಥಗಳು - ದೊಡ್ಡ ಅಳತೆ: (ಅಳತೆ ಕಪ್ = 240 ಎಂ ಎಲ್)

    1. 100gm ಬ್ಯಾಡಗಿ ಮೆಣಸಿನಕಾಯಿ 
    2. 100gm ಗುಂಟೂರ್ ಮೆಣಸಿನಕಾಯಿ 
    3. 200gm ಧನಿಯಾ ಅಥವಾ ಕೊತ್ತಂಬರಿ ಬೀಜ
    4. 50gm ಜೀರಿಗೆ
    5. 50gm ಮೆಂತೆ
    6. 50gm ಸಾಸಿವೆ
    7. 50gm ಕರಿಮೆಣಸು ಅಥವಾ ಕಾಳುಮೆಣಸು
    8. ಒಂದು ಬೆರಳುದ್ದ ಅರಶಿನ ಕೊಂಬು
    9. 10gm ಇಂಗು
    10. 10 ಚಮಚ ಅಡುಗೆ ಎಣ್ಣೆ

    ಮೈಸೂರು ಶೈಲಿಯ ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ಮಾಡುವ ವಿಧಾನ:

    1. ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಗಮನಿಸಿ ನಾನು ಸಣ್ಣ ಅಳತೆ ಉಪಯೋಗಿಸಿದ್ದು, ಅದು ದೊಡ್ಡ ಅಳತೆಯನ್ನು ಗಮನದಲ್ಲಿಟ್ಟು, ಅಂದಾಜಿನ ಮೇಲೆ ನಿಗದಿ ಪಡಿಸಿದ ಅಳತೆಯಾಗಿದೆ. 
    2. ಈಗ ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಒಂದು ಚಮಚ ಎಣ್ಣೆ ಹಾಕಿ, ಒಣ ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟು ಕೊಳ್ಳಿ.
    3. ನಂತರ ಅದೇ ಬಾಣಲೆಗೆ ಧನಿಯಾ, ಜೆರಿಗೆ, ಮೆಂತೆ, ಕಾಳುಮೆಣಸು, ಅರಶಿನ ಕೊಂಬು ಮತ್ತು ಸಾಸಿವೆಯನ್ನು ಹಾಕಿ, ಸಣ್ಣ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ.
    4. ಮಸಾಲೆಗಳ ಸುವಾಸನೆ ಬರುವವರೆಗೆ ಅಥವಾ ಮಸಾಲೆಗಳ ಬಣ್ಣ ಸ್ವಲ್ಪ ಬದಲಾವಣೆ ಆಗುವವರೆಗೆ ಅಥವಾ ಜೀರಿಗೆ ಮತ್ತು ಮೆಂತೆ ಉಬ್ಬುವವರೆಗೆ ಹುರಿಯಿರಿ. ಗಮನಿಸಿ, ದೊಡ್ಡ ಅಳತೆಯಾದಲ್ಲಿ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಹುರಿಯಬೇಕು. 
    5. ಈಗ ಅದೇ ಬಾಣಲೆಗೆ ಇಂಗು ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ. 
    6. ಹುರಿದ ಎಲ್ಲ ಮಸಾಲೆಗಳು ತಣ್ಣಗಾಗುವವರೆಗೆ ಕಾದು, ನೀರಿನ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.
    7. ಘಮಘಮಿಸುವ ಮೈಸೂರು ಶೈಲಿಯ ರಸಂ ಪುಡಿ ಅಥವಾ ಐಯಂಗಾರ್ ಪುಳಿಯೋಗರೆ ಪುಡಿ ತಯಾರಾಯಿತು. ಈಗ ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸದ್ಯದಲ್ಲೇ ಈ ಪುಡಿ ಉಪಯೋಗಿಸಿ ಸಾರು ಮತ್ತು ಪುಳಿಯೋಗರೆ ಮಾಡುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

    ಶುಕ್ರವಾರ, ಅಕ್ಟೋಬರ್ 14, 2016

    Navane or siri dhanya pongal recipe in Kannada | ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ

    Navane or siri dhanya pongal recipe in Kannada

    Navane or siri dhanya pongal recipe in Kannada | ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ 

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

    1. 1/2 ಕಪ್ ನವಣೆ ಅಥವಾ ಇನ್ನಾವುದೇ ಸಿರಿಧಾನ್ಯ
    2. 1/2 ಕಪ್ ಹೆಸರುಬೇಳೆ
    3. 4 ಟೇಬಲ್ ಸ್ಪೂನ್ ತುಪ್ಪ
    4. 1/2 ಟೀ ಸ್ಪೂನ್ ಜೀರಿಗೆ
    5. 1/4 ಟೀ ಸ್ಪೂನ್ ಅರಶಿನ ಪುಡಿ
    6. 1/2 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
    7. 8 - 10 ಗೋಡಂಬಿ
    8. 1-2 ಹಸಿರುಮೆಣಸಿನಕಾಯಿ
    9. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
    10. 8 - 10 ಕರಿಬೇವಿನ ಎಲೆ
    11. 1/4 ಕಪ್ ತೆಂಗಿನತುರಿ
    12. ಉಪ್ಪು ರುಚಿಗೆ ತಕ್ಕಷ್ಟು

    ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ:

    1. ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
    2. ಒಂದು ಕುಕ್ಕರ್‌ನಲ್ಲಿ ಹುರಿದ ಹೆಸರುಬೇಳೆ ಮತ್ತು ನವಣೆಯನ್ನು ಹಾಕಿ ತೊಳೆಯಿರಿ. ನಂತರ 3 ಕಪ್ ನೀರು ಹಾಕಿ 2 ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
    3. ಈಗ ಶುಂಠಿಯನ್ನು ಕತ್ತರಿಸಿ, ಕಾಳುಮೆಣಸನ್ನು ಜಜ್ಜಿ, ಗೋಡಂಬಿಯನ್ನು ತುಂಡು ಮಾಡಿ, ತೆಂಗಿನಕಾಯಿ ತುರಿದಿಟ್ಟುಕೊಳ್ಳಿ ಮತ್ತು ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. 
    4. ನಂತರ ಒಂದು ಬಾಣಲೆಯನ್ನು ಬಿಸಿಮಾಡಿ, ತುಪ್ಪ ಮತ್ತು ಜೀರಿಗೆ ಹಾಕಿ.
    5. ಜೀರಿಗೆ ಸಿಡಿದ ಕೂಡಲೇ ಗೋಡಂಬಿ, ಕಾಳುಮೆಣಸು ಮತ್ತು ಅರಶಿನ ಪುಡಿಯನ್ನು ಹಾಕಿ. ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
    6. ತೆಂಗಿನ ತುರಿಯನ್ನು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ.
    7. ಈಗ ಬೇಯಿಸಿದ ನವಣೆ ಮತ್ತು ಬೇಳೆ ಮಿಶ್ರಣವನ್ನು ಹಾಕಿ. 
    8. ಸುಮಾರು 1 ಕಪ್ ನಷ್ಟು ನೀರು ಅಥವಾ ಬಿಸಿಬೇಳೆಬಾತ್ ನಂತೆ ತೆಳ್ಳಗಾಗುವಷ್ಟು ನೀರು ಹಾಕಿ.
    9. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಸಿ. ಬಿಸಿ ಬಿಸಿ ಮತ್ತು ಆರೋಗ್ಯದಾಯಕ ನವಣೆ ಪೊಂಗಲ್ ನ್ನು ಸವಿದು ಆನಂದಿಸಿ.

    Hitikida avarekalu saru recipe in Kannada | ಹಿತಿಕಿದ ಅವರೇಕಾಳು ಸಾರು ಮಾಡುವ ವಿಧಾನ

    Hitikida avarekalu saru recipe in Kannada

    Hitikida avarekalu saru recipe in Kannada | ಹಿತಿಕಿದ ಅವರೇಕಾಳು ಸಾರು ಮಾಡುವ ವಿಧಾನ 

    ಹಿತಿಕಿದ ಅವರೇಕಾಳು ಸಾರು ವಿಡಿಯೋ

    ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

    1. 2 ಕಪ್ ಅವರೇಕಾಳು
    2. 1 - 2 ಟೀ ಚಮಚ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ ಅಥವಾ (ಅಚ್ಚಖಾರದ ಪುಡಿ + ಧನಿಯಾ ಪುಡಿ)
    3. 2 ಟೀಸ್ಪೂನ್ ಅಡುಗೆ ಎಣ್ಣೆ
    4. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
    5. ನಿಮ್ಮ ರುಚಿ ಪ್ರಕಾರ ಉಪ್ಪು

    ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

    1. 1 ಕತ್ತರಿಸಿದ ಈರುಳ್ಳಿ
    2. 4 ಬೇಳೆ ಬೆಳ್ಳುಳ್ಳಿ
    3. ಸ್ವಲ್ಪ ಶುಂಠಿ
    4. 1 ಕತ್ತರಿಸಿದ ಟೊಮೆಟೊ
    5. 1/4 ಕಪ್ ತೆಂಗಿನ ತುರಿ
    6. ಸ್ವಲ್ಪ ಚಕ್ಕೆ 
    7. ಸ್ವಲ್ಪ ಲವಂಗ
    8. ಸ್ವಲ್ಪ ಕೊತ್ತುಂಬರಿ ಸೊಪ್ಪು

    ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

    1. 1 ಕೆಂಪು ಮೆಣಸಿನಕಾಯಿ 
    2. 5 - 6 ಕರಿಬೇವಿನ ಎಲೆ
    3. 1/2 ಚಮಚ ಸಾಸಿವೆ 
    4. 2 ಟೀಸ್ಪೂನ್ ಅಡುಗೆ ಎಣ್ಣೆ

    ಹಿತಿಕಿದ ಅವರೇಕಾಳು ಸಾರು ಮಾಡುವ ವಿಧಾನ:

    1. ಅವರೆಕಾಯಿಯನ್ನು ಸುಲಿದು, ಅವರೆಕಾಳನ್ನು ನೀರಿನಲ್ಲಿ 4 - 5 ಘಂಟೆಗಳ ಕಾಲ ಅಥವಾ ರಾತ್ರಿಯಿಡಿ ನೆನೆ ಹಾಕಿ.
    2. ನೆನೆಸಿದ ನಂತರ ಅವರೆಕಾಳನ್ನು ಹಿಸುಕಿ ಸಿಪ್ಪೆ ತೆಗೆಯಿರಿ. 
    3. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ. 
    4. ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಿಪ್ಪೆ ತೆಗೆದ ಅವರೆಕಾಳನ್ನು ಹಾಕಿ ಒಂದು ನಿಮಿಷ ಹುರಿಯಿರಿ. 
    5. ನಂತರ ಅರೆದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. 
    6. ಸಾರು ಅಥವಾ ಸಾಂಬಾರ್ ಪುಡಿ ಸೇರಿಸಿ ಕೈಯಾಡಿಸಿ. 
    7. ಉಪ್ಪು ಮತ್ತು ಮೂರು ಕಪ್ ನಷ್ಟು ನೀರು ಹಾಕಿ ಎರಡು ವಿಷಲ್ ಮಾಡಿ ಬೇಯಿಸಿ. 
    8. ಒತ್ತಡ ಇಳಿದ ಮೇಲೆ ಮುಚ್ಚಳ ತೆರೆದು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. 
    9. ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
    10. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.


    ಬುಧವಾರ, ಅಕ್ಟೋಬರ್ 12, 2016

    Navane uppittu recipe in Kannada | ನವಣೆ (ಸಿರಿಧಾನ್ಯ) ಉಪ್ಪಿಟ್ಟು ಮಾಡುವ ವಿಧಾನ

    Navane uppittu recipe in Kannada

    Navane uppittu recipe in Kannada | ನವಣೆ (ಸಿರಿಧಾನ್ಯ) ಉಪ್ಪಿಟ್ಟು ಮಾಡುವ ವಿಧಾನ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

    1. 1 ಕಪ್ ನವಣೆ  (ಸಿರಿಧಾನ್ಯ)
    2. 2.5 ಕಪ್ ನೀರು
    3. 1/2 ಟೀಸ್ಪೂನ್ ಸಾಸಿವೆ
    4. 1 ಟೀಸ್ಪೂನ್ ಉದ್ದಿನಬೇಳೆ
    5. 1 ಟೀಸ್ಪೂನ್ ಕಡ್ಲೆಬೇಳೆ
    6. 1 ದೊಡ್ಡ ಈರುಳ್ಳಿ
    7. 1 ಟೊಮ್ಯಾಟೋ 
    8. 1-2 ಹಸಿರು ಮೆಣಸಿನಕಾಯಿ
    9. 4-5 ಕರಿ ಬೇವಿನ ಎಲೆ
    10. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
    11. 1/2 ಮಧ್ಯಮ ಗಾತ್ರದ ಕ್ಯಾರಟ್ (ಬೇಕಾದಲ್ಲಿ)
    12. 4 ಬೀನ್ಸ್ (ಬೇಕಾದಲ್ಲಿ)
    13. 2 ಟೇಬಲ್ ಚಮಚ ಹಸಿ ಬಟಾಣಿ (ಬೇಕಾದಲ್ಲಿ)
    14. 1/4 ಟೀಸ್ಪೂನ್ ಅರಶಿನ ಪುಡಿ
    15. 6-8 ಟೀಸ್ಪೂನ್ ಅಡುಗೆ ಎಣ್ಣೆ
    16. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
    17. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
    18. 1/2 ಕಪ್ ತೆಂಗಿನತುರಿ

    ನವಣೆ (ಸಿರಿಧಾನ್ಯ) ಉಪ್ಪಿಟ್ಟು ಮಾಡುವ ವಿಧಾನ:

    1. ನವಣೆಯನ್ನು ತೊಳೆದು ನೀರು ಬಗ್ಗಿಸಿ ಪಕ್ಕಕ್ಕಿಡಿ. 
    2. ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ತರಕಾರಿಗಳನ್ನು ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
    3. ಒಂದು ಕುಕ್ಕರ್ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
    4. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
    5. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಮತ್ತು ತರಕಾರಿಗಳನ್ನು ಹಾಕಿ. 
    6. ಅರಶಿನ ಪುಡಿ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
    7. ನಂತರ ತೊಳೆದಿಟ್ಟ ನವಣೆಯನ್ನು ಹಾಕಿ ಒಂದು ನಿಮಿಷ ಹುರಿಯಿರಿ. 
    8. 2.5 ಕಪ್ ನೀರು ಹಾಕಿ ಕುದಿಸಿ.ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಬೇಯಿಸಿ. 
    9. ಕುಕ್ಕರ್ ಒತ್ತಡ ಕಡಿಮೆ ಆದ ಮೇಲೆ, ಮುಚ್ಚಳ ತೆಗೆದು ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಆರೋಗ್ಯಕರ ನವಣೆ ಉಪ್ಪಿಟ್ಟು ತಿಂದು ಆನಂದಿಸಿ. 


    ಶುಕ್ರವಾರ, ಅಕ್ಟೋಬರ್ 7, 2016

    Kumbalakayi halwa or Kashi halwa recipe in Kannada | ಕುಂಬಳಕಾಯಿ ಹಲ್ವಾ ಅಥವಾ ಕಾಶಿ ಹಲ್ವಾ ಅಥವಾ ಡೂಮ್ರೂಟ್ ಹಲ್ವಾ ಮಾಡುವ ವಿಧಾನ

    Kumbalakayi halwa or Kashi halwa recipe in Kannada | ಕುಂಬಳಕಾಯಿ ಹಲ್ವಾ ಅಥವಾ ಕಾಶಿ ಹಲ್ವಾ ಅಥವಾ ಡೂಮ್ರೂಟ್ ಹಲ್ವಾ ಮಾಡುವ ವಿಧಾನ 

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

    1. 2 ಕಪ್ ತುರಿದ ಬೂದುಕುಂಬಳಕಾಯಿ
    2. 1/2 ಕಪ್ ಸಕ್ಕರೆ 
    3. 1/4 ಕಪ್ ತುಪ್ಪ
    4. ದೊಡ್ಡ ಚಿಟಿಕೆ ಏಲಕ್ಕಿ ಪುಡಿ
    5. 5 - 6 ಗೋಡಂಬಿ 
    6. 10 ಒಣ ದ್ರಾಕ್ಷಿ

    ಕುಂಬಳಕಾಯಿ ಹಲ್ವಾ ಅಥವಾ ಕಾಶಿ ಹಲ್ವಾ ಅಥವಾ ಡೂಮ್ರೂಟ್ ಹಲ್ವಾ ಮಾಡುವ ವಿಧಾನ:

    1. ಬೂದುಕುಂಬಳಕಾಯಿ ಸಿಪ್ಪೆ ಮತ್ತು ತಿರುಳು ತೆಗೆದು ತುರಿದಿಟ್ಟುಕೊಳ್ಳಿ. 
    2. ತುರಿದ ಕುಂಬಳಕಾಯಿಯನ್ನು ಒಂದು ಪಾತ್ರೆಗೆ ಹಾಕಿ ಆಗಾಗ್ಯೆ ಮಗುಚುತ್ತಾ ಬೇಯಿಸಿ. 
    3. ಕುಂಬಳಕಾಯಿ ಮೆತ್ತಗಾದ ಮೇಲೆ ಅದರ ನೀರನ್ನು ತೆಗೆಯಿರಿ. 
    4. ಆ ನೀರನ್ನು ಒಂದು ದಪ್ಪ ತಳದ ಬಾಣಲೆಗೆ ಹಾಕಿ, ಸಕ್ಕರೆ ಸೇರಿಸಿ. 
    5. ಒಂದೆಳೆ ಪಾಕ ಅಥವಾ ದಪ್ಪ ಸಕ್ಕರೆ ಪಾಕ ಆಗುವವರೆಗೆ ಕುದಿಸಿ. 
    6. ಈಗ ಅದಕ್ಕೆ ಬೇಯಿಸಿ ನೀರು ಬಸಿದ ಕುಂಬಳಕಾಯಿ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚಿ. ಕೆಲವೇ ನಿಮಿಷದಲ್ಲಿ ನೀರಾರುತ್ತದೆ. 
    7. ನೀರಾರಿದ ಮೇಲೆ ಸ್ಟವ್ ಉರಿ ತಗ್ಗಿಸಿ. ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹುರಿದು ತುಪ್ಪ ಸಮೇತ ಸೇರಿಸಿ. ಏಲಕ್ಕಿ ಪುಡಿಯನ್ನೂ ಸೇರಿಸಿ. 
    8. ಕೆಲವೇ ನಿಮಿಷಗಳಲ್ಲಿ ಹಲ್ವಾ ಬಾಣಲೆ ತಳ ಬಿಡಲು ಪ್ರಾರಂಭಿಸುತ್ತದೆ. ಅಥವಾ ಹಲ್ವಾ ಒಂದು ಮೆತ್ತಗಿನ ಮುದ್ದೆಯಂತಾದಾಗ ಸ್ಟವ್ ಆಫ್ ಮಾಡಿ. 
    9. ರುಚಿಕರ ಹಾಗೂ ಆರೋಗ್ಯಕರ ಹಲ್ವಾ ಸವಿದು ಆನಂದಿಸಿ.

    ಗುರುವಾರ, ಅಕ್ಟೋಬರ್ 6, 2016

    Curd rice or mosaranna in Kannada | ಮೊಸರನ್ನ ಮಾಡುವ ವಿಧಾನ

    Curd rice or mosaranna in Kannada

    Curd rice or mosaranna in Kannada | ಮೊಸರನ್ನ ಮಾಡುವ ವಿಧಾನ 

    ಮೊಸರನ್ನ ವಿಡಿಯೋ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

    1. 1/2 ಕಪ್ ಸೋನಾ ಮಸೂರಿ ಅಕ್ಕಿ
    2. 2 ಕಪ್ ಮೊಸರು
    3. 1/2 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ) 
    4. 1/2 ಚಮಚ ಸಾಸಿವೆ 
    5. 1 ಟೀಸ್ಪೂನ್ ಉದ್ದಿನ ಬೇಳೆ 
    6. 1 ಟೀಸ್ಪೂನ್ ಕಡಲೆಬೇಳೆ 
    7. 5 - 6 ಗೋಡಂಬಿ
    8. 4 - 5 ಕರಿಬೇವಿನ ಎಲೆ 
    9. 1 ಹಸಿರು ಮೆಣಸಿನಕಾಯಿ
    10. ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
    11. ಒಂದು ಚಿಟಿಕೆ ಇಂಗು
    12. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತಂಬರಿ ಸೊಪ್ಪು
    13. 2 ಟೀ ಚಮಚ ಅಡುಗೆ ಎಣ್ಣೆ 
    14. ಉಪ್ಪು ರುಚಿಗೆ ತಕ್ಕಷ್ಟು

    ಮೊಸರನ್ನ ಮಾಡುವ ವಿಧಾನ:

    1. ಮೊದಲಿಗೆ ಮೆತ್ತಗಿನ ಅನ್ನ ಮಾಡಿಟ್ಟು ಕೊಳ್ಳಿ. 
    2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ. 
    3. ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ.  ಈರುಳ್ಳಿ ಹಾಕಲು ಬಯಸಿದಲ್ಲಿ ಹಾಕಿ ಹುರಿಯಿರಿ (ನಾನು ಈರುಳ್ಳಿ ಹಾಕಲಿಲ್ಲ). 
    4. ಒಮ್ಮೆ ಕೈಯಾಡಿಸಿ ಸ್ಟವ್ ಆಫ್ ಮಾಡಿ. 
    5. ಮೆತ್ತಗೆ ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಅನ್ನ ಮೆತ್ತಗಿಲ್ಲವಾದಲ್ಲಿ ಸೌಟು ಅಥವಾ ಮಾಷೆರ್ ನಿಂದ ಮುದ್ದೆ ಮಾಡಿ. 
    6. ಅನ್ನ ಬೆಚ್ಚಗಾದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಕೊತಂಬರಿ ಸೊಪ್ಪು ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.

    ಬುಧವಾರ, ಅಕ್ಟೋಬರ್ 5, 2016

    hesaru bele nippattu recipe in Kannada | ಜಟ್ -ಪಟ್ ಹೆಸರು ಬೇಳೆ ನಿಪ್ಪಟ್ಟು ಮಾಡುವ ವಿಧಾನ

    hesaru bele nippattu recipe in Kannada

    hesaru bele nippattu recipe in Kannada | ಜಟ್ -ಪಟ್  ಹೆಸರು ಬೇಳೆ ನಿಪ್ಪಟ್ಟು ಮಾಡುವ ವಿಧಾನ 

    ಹೆಸರು ಬೇಳೆ ನಿಪ್ಪಟ್ಟು ವಿಡಿಯೋ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

    1. 1 ಕಪ್ ಹೆಸರು ಬೇಳೆ 
    2. 2 ಕಪ್ ಮೈದಾ ಹಿಟ್ಟು 
    3. 2 ಕಪ್ ಗೋಧಿ ಹಿಟ್ಟು 
    4. 4 ಚಮಚ ಜಜ್ಜಿದ ಕಾಳು ಮೆಣಸು
    5. ಉಪ್ಪು ರುಚಿಗೆ ತಕ್ಕಷ್ಟು
    6. ಕರಿಯಲು ಎಣ್ಣೆ

    ಜಟ್ -ಪಟ್ ಹೆಸರು ಬೇಳೆ ನಿಪ್ಪಟ್ಟು ಮಾಡುವ ವಿಧಾನ:

    1. ಹೆಸರು ಬೇಳೆಯನ್ನು ೨ ಘಂಟೆಗಳ ಕಾಲ ನೆನೆಸಿಡಿ. 
    2. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಗೋಧಿ ಹಿಟ್ಟು, ಜಜ್ಜಿದ ಕಾಳು ಮೆಣಸು, ಉಪ್ಪು ಮತ್ತು ನೆನೆಸಿದ ಹೆಸರು ಬೇಳೆ ಹಾಕಿ. 
    3. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾದ ಹಿಟ್ಟು ಕಲಸಿ. 
    4. ಈಗ ದೊಡ ಕಿತ್ತಳೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ತೆಳುವಾಗಿ ಲಟ್ಟಿಸಿ. 
    5. ಒಂದು ಲೋಟ ತೆಗೆದುಕೊಂಡು ಸಣ್ಣ ಸಣ್ಣ ವೃತ್ತಾಕಾರದ ನಿಪ್ಪಟ್ಟುಗಳನ್ನು ಮಾಡಿ. ಅಥವಾ ಚೌಕಾಕಾರವಾಗಿ ಕತ್ತರಿಸಿ. 
    6. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ವೃತ್ತಾಕಾರದ ಅಥವಾ ಚೌಕಾಕಾರದ ನಿಪ್ಪಟ್ಟನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಬಿಸಿ ಬಿಸಿ ಮತ್ತು ಗರಿ ಗರಿಯಾದ ಹೆಸರು ಬೇಳೆ ನಿಪ್ಪಟ್ಟು ಸವಿಯಲು ಸಿದ್ದ.


    ಮಂಗಳವಾರ, ಅಕ್ಟೋಬರ್ 4, 2016

    Shavige payasa recipe in Kannada | ಶಾವಿಗೆ ಪಾಯಸ ಮಾಡುವ ವಿಧಾನ

    Shavige payasa recipe in Kannada | ಶಾವಿಗೆ ಪಾಯಸ ಮಾಡುವ ವಿಧಾನ 

    ಶಾವಿಗೆ ಪಾಯಸ ವಿಡಿಯೋ 

    ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

    1. 1/2 ಕಪ್ ಶಾವಿಗೆ
    2. 2 ಕಪ್ ಹಾಲು
    3. 2 ಕಪ್ ನೀರು (ಶಾವಿಗೆ ಬೇಯಿಸಲು)
    4. 1/2 ಕಪ್ ಸಕ್ಕರೆ
    5. 2 ಟೀಸ್ಪೂನ್ ತುಪ್ಪ
    6. 5-6 ಗೋಡಂಬಿ
    7. 8-10 ಒಣದ್ರಾಕ್ಷಿ
    8. ಒಂದು ಚಿಟಿಕೆ ಏಲಕ್ಕಿ ಪುಡಿ

    ಶಾವಿಗೆ ಪಾಯಸ ಮಾಡುವ ವಿಧಾನ:

    1. ಶಾವಿಗೆಯನ್ನು ಹುರಿದು ತೆಗೆದುಕೊಳ್ಳಿ. ಹಾಗೆ ಎರಡು ಕಪ್ ಕುದಿಸಿದ ಹಾಲು ತೆಗೆದುಕೊಳ್ಳಿ. 
    2. ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ.
    3. ಕುದಿಯುವ ನೀರಿಗೆ ಶಾವಿಗೆ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ. 
    4. ನಂತ್ರ ನೀರು ಬಸಿದು ತೆಗೆಯಿರಿ. 
    5. ಬೇಯಿಸಿದ ಶಾವಿಗೆಗೆ, ಹಾಲು ಮತ್ತು ಸಕ್ಕರೆ ಸೇರಿಸಿ, ಕುದಿಯಲು ಇಡಿ.  
    6. ಒಂದೈದು ನಿಮಿಷ ಕುದಿಸಿ, ಏಲಕ್ಕಿ ಪುಡಿ ಸೇರಿಸಿ. 
    7. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ, ಸ್ಟವ್ ಆಫ್ ಮಾಡಿ. 
    8. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ. ಈ ಪಾಯಸದಲ್ಲಿ ಶಾವಿಗೆ ಬೇಯಿಸಿ, ನೀರು ಬಸಿದ ಕಾರಣ, ತಣ್ಣಗಾದ ಮೇಲೆ ಪಾಯಸ ಗಟ್ಟಿಯಾಗುವುದಿಲ್ಲ. 

    To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

    ಭಾನುವಾರ, ಅಕ್ಟೋಬರ್ 2, 2016

    Halu payasa recipe in Kannada | ಹಾಲು ಪಾಯಸ ಮಾಡುವ ವಿಧಾನ

    Halu payasa recipe in Kannada

    Halu payasa recipe in Kannada | ಹಾಲು ಪಾಯಸ ಮಾಡುವ ವಿಧಾನ 

    ಹಾಲು ಪಾಯಸ ವಿಡಿಯೋ

    ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

    1. 1/4 ಕಪ್ ಅಕ್ಕಿ
    2. 3/4 ಕಪ್ ನೀರು
    3. 1/2 ಕಪ್ ಸಕ್ಕರೆ
    4. 1.5 - 2 ಕಪ್ ಹಾಲು (ಪಾಯಸದ ದಪ್ಪ ಅವಲಂಬಿಸಿ)
    5. 2 ಟೀಸ್ಪೂನ್ ತುಪ್ಪ
    6. 5-6 ಗೋಡಂಬಿ
    7. 8-10 ಒಣದ್ರಾಕ್ಷಿ
    8. 2 ಲವಂಗ ಅಥವಾ ಒಂದು ಏಲಕ್ಕಿ

    ಹಾಲು ಪಾಯಸ ಮಾಡುವ ವಿಧಾನ:

    1. ಅಕ್ಕಿಯನ್ನು ತೊಳೆದು 3/4 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ (ಒಂದು ಲೋಟ ಅಕ್ಕಿಗೆ ಮೂರು ಲೋಟ ನೀರು).
    2. ಅಕ್ಕಿ ಬೆಂದ ನಂತರ, ಅನ್ನಕ್ಕೆ ಹಾಲು ಹಾಕಿ ಸಣ್ಣ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಹಾಲು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಿ. 
    3. ನಂತರ ಸಕ್ಕರೆ ಮತ್ತು ಜಜ್ಜಿದ ಲವಂಗ ಸೇರಿಸಿ. 
    4. ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಡಿ. 
    5. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದ ಸಮೇತ ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.

    To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

    ಶನಿವಾರ, ಅಕ್ಟೋಬರ್ 1, 2016

    Hesaru bele payasa recipe in Kannada | ಹೆಸರು ಬೇಳೆ ಪಾಯಸ ಮಾಡುವ ವಿಧಾನ

    Hesaru bele payasa recipe in Kannada

    Hesaru bele payasa recipe in Kannada | ಹೆಸರು ಬೇಳೆ ಪಾಯಸ ಮಾಡುವ ವಿಧಾನ 


    ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

    1. 1 ಸಣ್ಣ ಗಾತ್ರದ ಮುಳ್ಳು ಸೌತೆಕಾಯಿ (ಬೇಕಾದಲ್ಲಿ)
    2. 1/2 ಕಪ್ ಹೆಸರು ಬೇಳೆ
    3. 1/2 ಕಪ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
    4. 2 ಕಪ್ ತೆಂಗಿನಕಾಯಿ ಹಾಲು (2 ಕಪ್ ತೆಂಗಿನ ತುರಿ ಮತ್ತು 2 ಕಪ್ ನೀರಿನಿಂದ ತೆಗೆದ ಕಾಯಿ ಹಾಲು)
    5. 2 ಟೀಸ್ಪೂನ್ ತುಪ್ಪ
    6. 5-6 ಗೋಡಂಬಿ
    7. 8-10 ಒಣದ್ರಾಕ್ಷಿ
    8. 2 ಕಪ್ ನೀರು
    9. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
    10. ಒಂದು ಚಿಟಿಕೆ ಉಪ್ಪು

    ಹೆಸರು ಬೇಳೆ ಪಾಯಸ ಮಾಡುವ ವಿಧಾನ:

    1. ಹೆಸರುಬೇಳೆಯನ್ನು ತೊಳೆದು 1.5 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ.
    2. ಮುಳ್ಳು ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ.
    3. ಬೇಯಿಸಿದ ಹೆಸರುಬೇಳೆಗೆ ಸಣ್ಣದಾಗಿ ಕೊಚ್ಚಿದ ಸೌತೆಕಾಯಿ ಮತ್ತು 1/2 ಕಪ್ ನೀರು ಹಾಕಿ. 
    4. ಆಗಾಗ್ಯೆ ಮಗುಚುತ್ತಾ 8 - 10 ನಿಮಿಷ ಸೌತೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
    5. 1/2 ಕಪ್ ಪುಡಿ ಮಾಡಿದ ಬೆಲ್ಲ ಮತ್ತು ಚಿಟಿಕೆ ಉಪ್ಪು ಸೇರಿಸಿ. 
    6. ಬೆಲ್ಲ ಕರಗಿದ ಮೇಲೆ ತೆಂಗಿನ ಕಾಯಿ ಹಾಲನ್ನು ಹಾಕಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ತೆಂಗಿನ ಕಾಯಿ ಹಾಲನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಥವಾ ಅಂಗಡಿಯಿಂದ ಖರೀದಿಸಬಹುದು. ನಾನು 2 ಕಪ್ ತೆಂಗಿನ ತುರಿ ಮತ್ತು 2 ಕಪ್ ನೀರು ಬಳಸಿಕೊಂಡು ಕಾಯಿ ಹಾಲನ್ನು ತಯಾರಿಸಿದ್ದೇನೆ.
    7. ಪಾಯಸ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ತೆಂಗಿನ ಕಾಯಿ ಹಾಲು ಸೇರಿಸಿದ ನಂತರ ತುಂಬಾ ಹೊತ್ತು ಕುದಿಸಬಾರದು.
    8. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದ ಸಮೇತ ಸೇರಿಸಿ. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.


    To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

    Related Posts Plugin for WordPress, Blogger...