Dasavala thambuli or thambli recipe in kannada | ದಾಸವಾಳ ತಂಬುಳಿ ಮಾಡುವ ವಿಧಾನ
ದಾಸವಾಳ ತಂಬುಳಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದೊಂದು ಸರಳ ಮತ್ತು ರುಚಿಕರ ಅಡುಗೆಯಾಗಿದ್ದು, ದಾಸವಾಳ ಹೂವು ಸಿಕ್ಕಿದಲ್ಲಿ ಮಾಡಲು ಮರೆಯದಿರಿ. ಅನ್ನದೊಂದಿಗೆ ಬಹಳ ರುಚಿಕರವಾಗಿರುತ್ತದೆ.ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 10 - 12 ದಾಸವಾಳ ಹೂಗಳು
- 1 ಕಪ್ ತೆಂಗಿನ ತುರಿ
- 1/4 ಟೀಸ್ಪೂನ್ ಸಾಸಿವೆ
- 2 ಕಪ್ ಮೊಸರು
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 2 ಟೀಸ್ಪೂನ್ ಅಡುಗೆ ಎಣ್ಣೆ
ದಾಸವಾಳ ತಂಬುಳಿ ಮಾಡುವ ವಿಧಾನ:
- ತಾಜಾ ದಾಸವಾಳ ಹೂಗಳನ್ನು ತೆಗೆದುಕೊಳ್ಳಿ. ಬಿಳಿ ಹೂವುಗಳಿದ್ದಲ್ಲಿ ಉತ್ತಮ. ಜಾಗ್ರತೆಯಿಂದ ತೊಳೆದು ನೀರಾರಿಸಿ.
- ದಾಸವಾಳ ಹೂವುಗಳ ದಳಗಳನ್ನು ಪ್ರತ್ಯೇಕಿಸಿ. ಕೀಟ ಅಥವಾ ಹುಳುಗಳು ಇದ್ದರೆ ತೆಗೆಯಿರಿ.
- ಆಯ್ದ ದಾಸವಾಳ ದಳಗಳನ್ನು ಕತ್ತರಿಸಿ.
- ಕೈಗಳನ್ನು ಬಳಸಿ ಕತ್ತರಿಸಿದ ದಳಗಳನ್ನು ಹಿಸುಕಿ. ಉಪ್ಪು ಸೇರಿಸಿ.
- ತೆಂಗಿನ ತುರಿ ಮತ್ತು 1/4 ಟೀಸ್ಪೂನ್ ಸಾಸಿವೆಯನ್ನು ನುಣ್ಣನೆ ಅರೆಯಿರಿ.
- ಅರೆದ ತೆಂಗಿನಕಾಯಿಯನ್ನು ಹಿಸುಕಿದ ದಾಸವಾಳಕ್ಕೆ ಸೇರಿಸಿ. ಮೊಸರನ್ನೂ ಸೇರಿಸಿ ಚೆನ್ನಾಗಿ ಕಲಸಿ.
- ಕೆಂಪು ಮೆಣಸಿನಕಾಯಿ , ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ . ಬಿಸಿಯಾದ ಅನ್ನದೊಂದಿಗೆ ಬಡಿಸಿ.
Thumba saralavada aduge
ಪ್ರತ್ಯುತ್ತರಅಳಿಸಿಹೌದು.. ನೀವು ಮಾಡಿ ನೋಡಿ. ಹೇಗಿತ್ತೆಂದು ತಿಳಿಸಿ.
ಅಳಿಸಿ