ಮೊಸರು ಅವಲಕ್ಕಿ ದೋಸೆ ಮಾಡುವ ವಿಧಾನ
ಮೊಸರು ಅವಲಕ್ಕಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )
- 2 ಕಪ್ ದೋಸೆ ಅಕ್ಕಿ
- 1 ಕಪ್ ತೆಳು ಅವಲಕ್ಕಿ (ಅಥವಾ ೩/೪ ಕಪ್ ಗಟ್ಟಿ ಅವಲಕ್ಕಿ)
- 1 ಕಪ್ ಮೊಸರು (ಹುಳಿ ಇಲ್ಲದ್ದು)
- 1 ಟಿಸ್ಪೂನ್ ಸಕ್ಕರೆ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
ಮೊಸರು ಅವಲಕ್ಕಿ ದೋಸೆ ಮಾಡುವ ವಿಧಾನ:
- ಅಕ್ಕಿಯನ್ನು ತೊಳೆದು ೨ - ೩ ಘಂಟೆಗಳ ಕಾಲ ನೆನೆಸಿ.
- ಅರೆಯುವ ಮೊದಲು ಅವಲಕ್ಕಿಯನ್ನು ತೊಳೆದಿಟ್ಟು ಕೊಳ್ಳಿ. ದಪ್ಪ ಅವಲಕ್ಕಿ ಆದಲ್ಲಿ ೧೦ ನಿಮಿಷಗಳ ಕಾಲ ನೆನೆ ಹಾಕಿ.
- ಅರ್ಧ ಭಾಗದಷ್ಟು ಅಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಸುರಿಯಿರಿ.
- ಉಳಿದ ಅರ್ಧ ಭಾಗದಷ್ಟು ಅಕ್ಕಿ ಮತ್ತು ಅವಲಕ್ಕಿಯನ್ನು ನೀರು ಹಾಕಿ ಅರೆಯಿರಿ.
- ಅರೆದ ನಂತರ ಮೊಸರು ಹಾಕಿ ಒಂದೆರಡು ಸುತ್ತು ಅರೆಯಿರಿ.
- ಈ ಹಿಟ್ಟನ್ನು ಅದೇ ಪಾತ್ರೆಗೆ ಸುರಿಯಿರಿ. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ೫-೬ ಘಂಟೆಗಳ ಕಾಲ ಅಥವಾ ಒಂದು ರಾತ್ರಿ ಹುದುಗಲು ಬಿಡಿ.
- ಮಾರನೇ ದಿನ ಉಪ್ಪು ಮತ್ತು ಸಕ್ಕರೆ ಹಾಕಿ. ಚೆನ್ನಾಗಿ ಕಲಸಿ. ಹಿಟ್ಟು ಸ್ವಲ್ಪ ತೆಳ್ಳಗಿರಬೇಕು. ಹಾಗಾಗಿ ಅಗತ್ಯವಿದ್ದಷ್ಟು ನೀರು ಸೇರಿಸಿ.
- ಬಿಸಿ ದೋಸೆ ಕಾವಲಿಗೆ ಎಣ್ಣೆ ಸವರಿ ಒಂದು ಸೌಟು ಹಿಟ್ಟನ್ನು ಸುರಿಯಿರಿ. ಹಿಟ್ಟನ್ನು ಹೆಚ್ಚು ಹರಡ ಬಾರದು. ಅದು ತಾನಾಗಿಯೇ ಹರಡಬೇಕು. ಸೆಟ್ ದೋಸೆಯಂತೆ ಮಾಡಬೇಕು.
- ಕೆಲವು ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ತುಪ್ಪ ಅಥವಾ ಎಣ್ಣೆ ಹಾಕಿ. ದೋಸೆಯನ್ನು ತೆಗೆಯಿರಿ. ಬಿಸಿ ದೋಸೆಯನ್ನು ಬೆಣ್ಣೆ ಮತ್ತು ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗು ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ