Eerulli pakoda (bajji) or Neerulli baje recipe in kannada | ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಮಾಡುವ ವಿಧಾನ
ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಯನ್ನು ಈರುಳ್ಳಿ, ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಓಮದ ಕಾಳು, ಇಂಗು, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹಾಕಿ ಮಾಡಲಾಗುತ್ತದೆ. ನನ್ನ ಪ್ರಕಾರ ಒಮ ಅಥವಾ ಅಜ್ವೈನ್ ಹಾಕಿ ಮಾಡಿದರೆ ಹೆಚ್ಚು ರುಚಿ. ನೀವು ನಿಮ್ಮ ಇಷ್ಟದ ಪ್ರಕಾರ ಒಮದ ಬದಲು ಜೀರಿಗೆ ಅಥವಾ ಜಜ್ಜಿದ ಕೊತ್ತಂಬರಿಯನ್ನು ಸೇರಿಸಬಹುದು.
ನಾನು ಕೆಲವೊಮ್ಮೆ ಸಣ್ಣಗೆ ಹೆಚ್ಚಿದ ಶುಂಟಿ ಬೆಳ್ಳುಳ್ಳಿಯನ್ನು ಸಹ ಸೇರಿಸುತ್ತೇನೆ. ಅದು ಸಹ ರುಚಿಕರವಾಗಿರುತ್ತದೆ. ಈ ಗರಿಗರಿಯಾದ ಪಕೋಡ ಅಥವಾ ಬಜ್ಜಿ ಯನ್ನು ಮಾಡಿ ಸವಿದು ಆನಂದಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 5 - 6 ದೊಡ್ಡ ಈರುಳ್ಳಿ
- 3 ಕಪ್ ಕಡ್ಲೆ ಹಿಟ್ಟು
- 1/2 ಕಪ್ ಅಕ್ಕಿ ಹಿಟ್ಟು
- 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1 - 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ (ಬೇಕಾದಲ್ಲಿ)
- 2 ಟೇಬಲ್ ಚಮಚ ಹೆಚ್ಚಿದ ಕರಿಬೇವು
- 1/4 ಟೀಸ್ಪೂನ್ ಇಂಗು
- 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಖಾಯಿಸಲು ಅಥವಾ ಕರಿಯಲು
ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಮಾಡುವ ವಿಧಾನ:
- ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ.
- ಈಗ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ , ಕತ್ತರಿಸಿದ ಕರಿಬೇವಿನ ಸೊಪ್ಪು, ಓಮ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ.
- 2 ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಹ ನೀರು ಸೇರಿಸಬೇಡಿ.
- ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಒಂದು ಕೈ ಹಿಡಿಯಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಹಾಕಿ. ಹಿಟ್ಟು ತುಂಬ ಉದುರಾಗಿದೆ (ಒಣಕಲಾಗಿದೆ) ಎನಿಸಿದರೆ ಸ್ವಲ್ಪವೇ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ ಆನಂತರ ಬಿಸಿ ಎಣ್ಣೆಯಲ್ಲಿ ಹಾಕಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ