Menthe huli or Menthya sambar in Kannada | ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಮಾಡುವ ವಿಧಾನ
ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಬಹಳ ರುಚಿಕರ ಮತ್ತು ಅತೀ ಕಡಿಮೆ ಪದಾರ್ಥಗಳನ್ನು ಬಳಸಿ ಮಾಡುವ ಸಾಂಬಾರ್ ಆಗಿದೆ. ಈ ಸಾಂಬಾರ್ ಗೆ ಬೇಳೆಯಾಗಲಿ ಅಥವಾ ಯಾವುದೇ ತರಕಾರಿಯಾಗಲಿ ಬಳಸುವುದಿಲ್ಲ. ಹುಳಿ-ಸಿಹಿ ಮಿಶ್ರಿತ ಈ ಸಾಂಬಾರ್ ಅನ್ನದೊಂದಿಗೆ ಬಲು ರುಚಿ. ಒಮ್ಮೆ ಮಾಡಿ ನೋಡಿ.
ತಯಾರಿ ಸಮಯ: 0 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 2 ಟೀಸ್ಪೂನ್ ಮೆಂತೆ / ಮೆಂತ್ಯ ಕಾಳು
- 4 - 6 ಕೆಂಪು ಮೆಣಸಿನಕಾಯಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1/4 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಸಾಸಿವೆ
- 1 ಕಪ್ ತೆಂಗಿನ ತುರಿ
- 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- 2 ನಿಂಬೆ ಗಾತ್ರದ ಬೆಲ್ಲ
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಮಾಡುವ ವಿಧಾನ:
- ದೊಡ್ಡ ಬಾಣಲೆ ತೆಗೆದುಕೊಂಡು ಬಿಸಿ ಮಾಡಿ. ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಸಾಸಿವೆ ಸೇರಿಸಿ.
- ಮಧ್ಯಮ ಜ್ವಾಲೆಯ ಅಡಿಯಲ್ಲಿ ಅವುಗಳನ್ನು ಹುರಿಯಿರಿ ಮತ್ತು ಪಕ್ಕಕ್ಕಿಡಿ.
- ಅದೇ ಬಾಣಲೆಗೆ ಮೆಂತೆ ಅಥವಾ ಮೆಂತ್ಯವನ್ನು ಹಾಕಿ.
- ಹೊಂಬಣ್ಣ ಬರುವವರೆಗೆ ಮಧ್ಯಮ ಜ್ವಾಲೆಯಲ್ಲಿ ಹುರಿಯಿರಿ.
- ಈಗ ಹುರಿದ ಮೆಂತೆಗೆ ಎಚ್ಚರಿಕೆಯಿಂದ 2 ಕಪ್ ನೀರು ಸೇರಿಸಿ ಕುದಿಸಿ.
- ಮುಚ್ಚಳವನ್ನು ಮುಚ್ಚಿ ಮಧ್ಯಮ ಜ್ವಾಲೆಯ ಅಡಿಯಲ್ಲಿ 10 ನಿಮಿಷ ಬೇಯಿಸಿ.
- ಅಷ್ಟರಲ್ಲಿ ಮಿಕ್ಸಿ ಜಾರ್ ಗೆ ತುರಿದ ತೆಂಗಿನಕಾಯಿ ಮತ್ತು ಹುರಿದ ಮಸಾಲೆಗಳನ್ನು (ಕೆಂಪು ಮೆಣಸಿನಕಾಯಿ , ಜೀರಿಗೆ , ಕೊತ್ತಂಬರಿ ಬೀಜ ಮತ್ತು ಸಾಸಿವೆ) ಹಾಕಿ.
- ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆಯಿರಿ.
- ಈಗ ಬೇಯಿಸಿದ ಮೆಂತೆ ಅಥವಾ ಮೆಂತ್ಯಕ್ಕೆ ಅರೆದ ಮಸಾಲೆ ಮತ್ತು ಬೆಲ್ಲವನ್ನು ಸೇರಿಸಿ.
- ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣಿನಿಂದ ತೆಗೆದ ಹುಣಿಸೆ ರಸ ಸೇರಿಸಿ ಮತ್ತು ಉಪ್ಪು ಸೇರಿಸಿ .
- 3 - 4 ಕಪ್ ನೀರು ಸೇರಿಸಿ ಕುಡಿಸಿ. ಚೆನ್ನಾಗಿ ಕುದಿಯಲು ಪ್ರಾರಂಭವದ ಕೂಡಲೇ ಸ್ಟವ್ ಆಫ್ ಮಾಡಿ.
- ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ, ಆನಂದಿಸಿ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ