Brahmi thambli in Kannada | ಬ್ರಾಹ್ಮೀ ತಂಬುಳಿ । ತಿಮರೆ ತಂಬ್ಳಿ । ಒಂದೆಲಗ ತಂಬುಳಿ
ಬ್ರಾಹ್ಮೀ ತಂಬುಳಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಹಿಡಿ ಬ್ರಾಹ್ಮೀ ಎಲೆಗಳು
- 1/4 ಕಪ್ ತೆಂಗಿನತುರಿ
- 1/2 ಕಪ್ ಮೊಸರು ಅಥವಾ ಗಟ್ಟಿ ಮಜ್ಜಿಗೆ
- 1 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟಿಸ್ಪೂನ್ ಅಡುಗೆ ಎಣ್ಣೆ
- 1 ಒಣ ಮೆಣಸಿನಕಾಯಿ
- 1/4 ಟಿಸ್ಪೂನ್ ಸಾಸಿವೆ
ಬ್ರಾಹ್ಮೀ । ತಿಮರೆ । ಒಂದೆಲಗ ತಂಬುಳಿ ಮಾಡುವ ವಿಧಾನ:
- ಬ್ರಾಹ್ಮೀ ಎಲೆಗಳನ್ನು ತೊಳೆದು ಕತ್ತರಿಸಿ.
- ಕತ್ತರಿಸಿದ ಎಲೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ. ಮೊಸರು ಮತ್ತು ನೀರು ಸೇರಿಸಿ. ಉಪ್ಪು ಹಾಕಿ ಕಲಸಿ.
- ಎಣ್ಣೆ, ಒಣ ಮೆಣಸು ಮತ್ತು ಸಾಸಿವೆ ಒಗ್ಗರಣೆ ಮಾಡಿ ಸೇರಿಸಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ