ಕಾಯಿ ವಡೆ ಅಥವಾ ಅಕ್ಕಿ ಹಿಟ್ಟಿನ ಪೂರಿ ಮಾಡುವ ವಿಧಾನ
ಕಾಯಿ ವಡೆ ವಿಡಿಯೋ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )
- 2 ಕಪ್ ಅಕ್ಕಿ ಹಿಟ್ಟು
- 1 ಕಪ್ ತೆಂಗಿನ ತುರಿ
- 2 - 4 ಒಣ ಮೆಣಸಿನಕಾಯಿ
- 2 ಟಿಸ್ಪೂನ್ ಕೊತ್ತಂಬರಿ ಬೀಜ / ಧನಿಯ
- 1/4 ಟಿಸ್ಪೂನ್ ಜೀರಿಗೆ
- 1 - 2 ಹಸಿರು ಮೆಣಸಿನಕಾಯಿ
- 2 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಕಾಯಿಸಲು
ಕಾಯಿ ವಡೆ ಅಥವಾ ಅಕ್ಕಿ ಹಿಟ್ಟಿನ ಪೂರಿ ಮಾಡುವ ವಿಧಾನ:
- ತೆಂಗಿನಕಾಯಿ ತುರಿಯಿರಿ. ಹಾಗೂ ಧನಿಯ, ಜೀರಿಗೆ ಮತ್ತು ಒಣಮೆಣಸಿನ ಕಾಯಿಯನ್ನು ಅಳತೆ ಪ್ರಕಾರ ತೆಗೆದಿಟ್ಟು ಕೊಳ್ಳಿ.
- ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು ತೆಗೆದು ಕೊಳ್ಳಿ. ನಂತರ ಧನಿಯ, ಜೀರಿಗೆ ಮತ್ತು ಒಣಮೆಣಸಿನಕಾಯಿಯನ್ನು ಪುಡಿ ಮಾಡಿ ಅಕ್ಕಿ ಹಿಟ್ಟಿಗೆ ಸೇರಿಸಿ.
- ತೆಂಗಿನ ತುರಿಯನ್ನು ಸಹ ಪುಡಿ ಮಾಡಿ ಅಕ್ಕಿಹಿಟ್ಟಿಗೆ ಸೇರಿಸಿ.
- ಈಗ ಸಣ್ಣಗೆ ಕತ್ತರಿಸಿದ ಕರಿಬೇವು ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಇದನ್ನು ಸಹ ಪುಡಿ ಮಾಡಿ ಸೇರಿಸಬಹುದು.
- ಈಗ ಬಿಸಿ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಗಮನಿಸಿ ಬಿಸಿ ನೀರು ಸಾಕು. ಕುದಿಯುವ ನೀರು ಹಾಕ ಬಾರದು.
- ಕಲಸಿ ಆದಮೇಲೆ 2 ಟಿಸ್ಪೂನ್ ಎಣ್ಣೆ ಹಾಕಿ, ಪುನಃ ಕಲಸಿ.
- ಈಗ ಒಂದು ಸ್ವಚ್ಚವಾದ ಬಟ್ಟೆಯನ್ನು ತೆಗೆದು ಕೊಂಡು, ನಿಂಬೆ ಹಣ್ಣಿನ ಗಾತ್ರದ ಹಿಟ್ಟನ್ನು ಇಡಿ. ಬಟ್ಟೆಯಿಂದ ಮುಚ್ಚಿ, ಪೂರಿಯ ಆಕಾರಕ್ಕೆ ಕೈ ಯಿಂದ ತಟ್ಟಿ ಅಥವಾ ಲಟ್ಟಣಿಗೆ ಸಹಾಯದಿಂದ ಲಟ್ಟಿಸಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ತಟ್ಟಿದ ಅಥವಾ ಲಟ್ಟಿಸಿದ ಪೂರಿಗಳನ್ನು ಕಾಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ