Mangalore style churumuri recipe in Kannada | ಮಂಗಳೂರು ಶೈಲಿಯ ಚುರುಮುರಿ ಮಾಡುವ ವಿಧಾನ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 4 - 6 ಕಪ್ ಮಂಡಕ್ಕಿ
- 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ
- 1 ಸಣ್ಣದಾಗಿ ಕೊಚ್ಚಿದ ಟೊಮೆಟೊ
- 1 ತುರಿದ ಸಣ್ಣ ಗಾತ್ರದ ಕ್ಯಾರೆಟ್
- 2 ಟೇಬಲ್ ಚಮಚ ತುರಿದ ಮಾವಿನಕಾಯಿ
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಹುರಿದ ನೆಲಗಡಲೆ
- 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ ( ಬೇಕಾದಲ್ಲಿ - ಹೆಚ್ಚಿನ ಖಾರಕ್ಕಾಗಿ)
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1/4 ಟೀಸ್ಪೂನ್ ಅರಿಶಿನ ಪುಡಿ
- 2 ಟೇಬಲ್ ಚಮಚ ತೆಂಗಿನ ಎಣ್ಣೆ / ಅಡುಗೆ ಎಣ್ಣೆ ( ತೆಂಗಿನ ಎಣ್ಣೆಗೆ ಆದ್ಯತೆ)
- ಉಪ್ಪು ರುಚಿಗೆ ತಕ್ಕಷ್ಟು
ಮಂಗಳೂರು ಶೈಲಿಯ ಚುರುಮುರಿ ಮಾಡುವ ವಿಧಾನ:
- ದೊಡ್ಡ ಬಟ್ಟಲಿನಲ್ಲಿ ಗರಿಗರಿಯಾದ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ ಒಂದು ಬಾಣಲೆಯಲ್ಲಿ ಬೆಚ್ಚಗೆ ಮಾಡುವ ಮೂಲಕ ಗರಿ ಗರಿ ಮಾಡಿಕೊಳ್ಳಿ.
- ಈಗ ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ಉಪ್ಪು ಮತ್ತು ತೆಂಗಿನ ಎಣ್ಣೆ ಸೇರಿಸಿ.
- ಚೆನ್ನಾಗಿ ಕಲಸಿ. ಬೇಕಾದಲ್ಲಿ ಒಂದು ದೊಡ್ಡ ಚಿಟಿಕೆ ಚಾಟ್ ಮಸಾಲಾ ಸಹ ಸೇರಿಸಬಹುದು.
- ಹುರಿದ ಕಡಲೆಕಾಯಿ ಬೀಜವನ್ನು ಸೇರಿಸಿ. ನೀವು ಕಾಂಗ್ರೆಸ್ ಕಡಲೆಕಾಯಿ ಅಥವಾ ಯಾವುದೇ ಕಾರಕಡ್ಡಿ ಮಿಕ್ಸ್ಚರ್ ನ್ನು ಸಹ ಬಳಸಬಹುದು.
- ಸಣ್ಣದಾಗಿ ಕೊಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ತುರಿದ ಮಾವಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು , ಹಸಿರು ಮೆಣಸಿನ ಕಾಯಿ ಮತ್ತು ಟೊಮೆಟೊ ಸೇರಿಸಿ.
- ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ