Mavinakai chutney recipe in kannada | ಮಾವಿನಕಾಯಿ ಚಟ್ನಿ ಮಾಡುವ ವಿಧಾನ
ಮಾವಿನಕಾಯಿ ಚಟ್ನಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಸಾಧಾರಣವಾಗಿ ಮಾವಿನಕಾಯಿ ಚಟ್ನಿ ಯನ್ನು ಹಸಿರುಮೆಣಸಿನಕಾಯಿ ಮತ್ತು ತೆಂಗಿನಕಾಯಿ ಹಾಕಿ ಮಾಡಲಾಗುತ್ತದೆ. ಆದರೆ ಈ ಚಟ್ನಿಯನ್ನು ಮಾವಿನಕಾಯಿ, ತೆಂಗಿನ ತುರಿ, ಹುರಿದ ಒಣಮೆಣಸು ಮತ್ತು ಉದ್ದಿನಬೇಳೆಯನ್ನು ಸೇರಿಸಿ ಮಾಡುವ ಕಾರಣ ಹೆಚ್ಚು ರುಚಿಕರವಾಗಿರುತ್ತದೆ.
ಮಾವಿನಕಾಯಿ ಚಟ್ನಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 1/2 ಮಾವಿನಕಾಯಿ
- 2 ಕಪ್ ತೆಂಗಿನ ತುರಿ
- 2 - 4 ಒಣ ಮೆಣಸಿನಕಾಯಿ
- 4 ಟೀಸ್ಪೂನ್ ಉದ್ದಿನ ಬೇಳೆ
- ಒಂದು ಚಿಟಿಕೆ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಮಾವಿನಕಾಯಿ ಚಟ್ನಿ ಮಾಡುವ ವಿಧಾನ:
- ಮಾವಿನಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ.
- ಸಿಪ್ಪೆ ತೆಗೆದ ಮಾವಿನಕಾಯಿಯನ್ನು ತುರಿಯಿರಿ.
- ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.
- ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಒಂದು ಮಿಕ್ಸೀ ಜಾರಿಗೆ ತೆಂಗಿನ ತುರಿ, ತುರಿದ ಮಾವಿನಕಾಯಿ, ಹುರಿದ ಒಣ ಮೆಣಸು ಮತ್ತು ಹುರಿದ ಉದ್ದಿನಬೇಳೆ ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ