Sabakki sandige recipe in Kannada | ಸಬಕ್ಕಿ ಸಂಡಿಗೆ ಮಾಡುವ ವಿಧಾನ
ಸಬ್ಬಕ್ಕಿ ಸಂಡಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಸಾಬಕ್ಕಿ
- 2 ಕಪ್ ನೀರು
- 2 - 3 ಹಸಿರುಮೆಣಸಿನಕಾಯಿ ಅಥವಾ ನಿಮ್ಮ ರುಚಿ ಪ್ರಕಾರ
- 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿ ಪ್ರಕಾರ
- 1/2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಇಂಗು
- ಎಣ್ಣೆ ಕಾಯಿಸಲು
ಸಾಬಕ್ಕಿ ಸಂಡಿಗೆ ಮಾಡುವ ವಿಧಾನ:
- ಸಾಬಕ್ಕಿಯನ್ನು ಮೂವತ್ತು ನಿಮಿಷಗಳ ಕಾಲ ನೀರಿನಲ್ಲಿನೆನೆಸಿಡಿ.
- ನಂತರ ನೀರು ಬಗ್ಗಿಸಿ, ಎರಡು ಕಪ್ ನಷ್ಟು ನೀರು ಸೇರಿಸಿ (೧ ಕಪ್ ಸಾಬಕ್ಕಿಗೆ ೪ ಕಪ್ ನೀರು).
- ಸಾಬಕ್ಕಿಯನ್ನು ಮೆತ್ತಗೆ ಬೇಯಿಸಿ. ನಾನು ಕುಕ್ಕರ್ ನಲ್ಲಿ ಎರಡು ವಿಷಲ್ ಮಾಡಿ ಬೇಯಿಸುತ್ತೇನೆ.
- ನಂತ್ರ ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಮಿಕ್ಸಿಯಲ್ಲೂ ಪುಡಿ ಮಾಡಬಹುದು.
- ಅದನ್ನು ಬೇಯಿಸಿದ ಸಾಬಕ್ಕಿಗೆ ಹಾಕಿ.
- ಜೀರಿಗೆ ಮತ್ತು ಇಂಗನ್ನು ಸೇರಿಸಿ. ಚೆನ್ನಾಗಿ ಕಲಸಿ.
- ಬಿಸಿ ಆರಿದ ಮೇಲೆ, ಬಟ್ಟೆ ಅಥವಾ ಪ್ಲಾಸ್ಟಿಕ್ ಶೀಟ್ನ ಮೇಲೆ ಸಂಡಿಗೆ ಹಾಕಿ.
- ಬಿಸಿಲಿನಲ್ಲಿ ಗರಿಗರಿಯಾಗುವವರೆಗೆ ಒಣಗಿಸಿ.
- ಎರಡು ದಿನದ ನಂತ್ರ ತಿರುಗಿಸಿ ಹಾಕಿ ಒಣಗಿಸಿ. ಒಣಗಲು ಬೇಕಾದ ದಿನ, ಬಿಸಿಲಿನ ಮೇಲೆ ಅವಲಂಬಿತವಾಗಿರುತ್ತದೆ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಣಗಿಸಿದ ಸಂಡಿಗೆಯನ್ನು ಬಿಸಿ ಎಣ್ಣೆಗೆ ಹಾಕಿ ಕಾಯಿಸಿ.
- ಊಟ, ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ