Mavinakayi uppinakayi recipe in Kannada | ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ
ಮಾವಿನಕಾಯಿ ಉಪ್ಪಿನಕಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ದೊಡ್ಡ ಮಾವಿನಕಾಯಿ (ಹುಳಿ ಕಡಿಮೆ ಇರುವಂಥದ್ದು)
- 3/4 - 1 ಕಪ್ ನೀರು
- ದೊಡ್ಡ ಚಿಟಿಕೆ ಅರಿಶಿನ (ಬೇಕಾದಲ್ಲಿ)
- 2 ಟೇಬಲ್ ಚಮಚ ಉಪ್ಪು
ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 10 -15 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಜೀರಿಗೆ
- 7 - 8 ಮೆಂತೆ
- 1/4 ಟೀಸ್ಪೂನ್ ಇಂಗು
ದಿಢೀರ್ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ:
- ಮಾವಿನಕಾಯಿಯನ್ನು ತೊಳೆದು, ನೀರಾರಿಸಿ, ಕತ್ತರಿಸಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಶುರುವಾದ ಕೂಡಲೇ, ಕತ್ತರಿಸಿದ ಮಾವಿನಕಾಯಿ ಹಾಕಿ ಸ್ಟವ್ ಆಫ್ ಮಾಡಿ.ಬಿಸಿ ಆರಲು ಬಿಡಿ.
- ಆ ಸಮಯದಲ್ಲಿ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ಕೊನೆಯಲ್ಲಿ ಇಂಗು ಹಾಕಿ ಸ್ಟವ್ ಆಫ್ ಮಾಡಿ.
- ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
- ಆ ಪುಡಿಯನ್ನು ಉಪ್ಪು ನೀರು ಮತ್ತು ಮಾವಿನಕಾಯಿ ಇರುವ ಬಾಣಲೆಗೆ ಹಾಕಿ, ಚೆನ್ನಾಗಿ ಮಗುಚಿ.
- ಬೇಕಾದಲ್ಲಿ ಅರಿಶಿನ ಪುಡಿ ಸೇರಿಸಿ, ಮಗುಚಿ.
- ಬಿಸಿ ಆರಿದ ಮೇಲೆ ಉಪ್ಪಿನಕಾಯಿ ಸ್ವಲ್ಪ ಗಟ್ಟಿ ಆಗುವುದು. ಇದನ್ನು ಕೂಡಲೇ ಬಡಿಸಬಹುದು. ಒಂದು ದಿನದ ನಂತ್ರ ರುಚಿ ಹೆಚ್ಚುವುದು. ಹೊರಗೆ ಸುಮಾರು ಹದಿನೈದು ದಿವಸ ಮತ್ತು ಫ್ರಿಡ್ಜ್ ನಲ್ಲಿ ಎರಡು ತಿಂಗಳು ಇಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ