ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 1/2 ಕಪ್ ಅಕ್ಕಿ ಹಿಟ್ಟು
- 1.5 ಕಪ್ ನೀರು
- ದೊಡ್ಡ ಚಿಟಿಕೆ ಇಂಗು
- 1 ಟೀಸ್ಪೂನ್ ಎಣ್ಣೆ
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ನೀರು ತೆಗೆದುಕೊಂಡು ಕುದಿಯಲು ಇಡಿ.
- ಅದಕ್ಕೆ ಉಪ್ಪು, ಅರ್ಧ ಚಮಚ ಎಣ್ಣೆ ಮತ್ತು ಇಂಗು ಸೇರಿಸಿ.
- ನೀರು ಕುದಿಯಲು ಪ್ರಾರಂಭವಾದ ಮೇಲೆ ಅಕ್ಕಿ ಹಿಟ್ಟನ್ನು ಸೇರಿಸಿ.
- ಮೃದುವಾದ ಹಿಟ್ಟು ತಯಾರಾಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ.
- ಬಿಸಿ ಕಡಿಮೆ ಆದ ಮೇಲೆ, ಇನ್ನರ್ಧ ಚಮಚ ಎಣ್ಣೆ ಹಾಕಿ, ನಾದಿ.
- ಸಣ್ಣ ತೂತುಗಳಿರುವ ಅಚ್ಚಿಗೆ ಹಿಟ್ಟು ತುಂಬಿಸಿ.
- ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಬಟ್ಟೆಯ ಮೇಲೆ ಸಂಡಿಗೆ ಹಾಕಿ.
- ಬಿಸಿಲಿನಲ್ಲಿ ಒಣಗಲು ಇಡಿ.
- ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ.
- ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು ಅಥವಾ ಹಾಗೆಯೂ ತಿನ್ನಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.
Akki sangige yalli hulu hogalu enu madabeku enne savarabhahuda
ಪ್ರತ್ಯುತ್ತರಅಳಿಸಿ