Nellikai candy recipe in Kannada | ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ
ನೆಲ್ಲಿಕಾಯಿ ಕ್ಯಾಂಡಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 10 - 12 ನೆಲ್ಲಿಕಾಯಿ
- 1/2 ಕಪ್ ಸಕ್ಕರೆ
- 1/4 ಟೀಸ್ಪೂನ್ ಉಪ್ಪು
ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ:
- ನೆಲ್ಲಿಕಾಯಿಯನ್ನು ತೊಳೆಯಿರಿ.
- ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಆವಿಯಲ್ಲಿ ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ.
- ಸ್ವಲ್ಪ ಬಿಸಿ ಆರಿದ ಮೇಲೆ ನೆಲ್ಲಿಕಾಯಿ ಗೆರೆಯ ಮೇಲೆ ಕತ್ತರಿಸಿ, ಬೀಜ ತೆಗೆಯಿರಿ.
- 1/4 ಕಪ್ ಸಕ್ಕರೆ ಮತ್ತು 1/4 ಟೀಸ್ಪೂನ್ ಹಾಕಿ ಕಲಸಿ 5 - 6 ಘಂಟೆ ಪಕ್ಕಕ್ಕಿಡಿ.
- ನೆಲ್ಲಿಕಾಯಿ ಬಿಟ್ಟ ನೀರನ್ನು ಬಸಿದು ತೆಗೆಯಿರಿ.
- ಪುನಃ 1/4 ಕಪ್ ಸಕ್ಕರೆ ಹಾಕಿ ಕಲಸಿ.
- 2 - 3 ದಿನ ಬಿಸಿಲಿನಲ್ಲಿ ಒಣಗಲು ಬಿಡಿ.
- ವರ್ಷವಿಡೀ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ