Menasinakayi fry recipe in Kannada | ಮೆಣಸಿನಕಾಯಿ ಫ್ರೈ ಮಾಡುವ ವಿಧಾನ
ಮೆಣಸಿನಕಾಯಿ ಫ್ರೈ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 10 - 12 ಹಸಿರುಮೆಣಸಿನಕಾಯಿ (ಕಡಿಮೆ ಖಾರದ್ದು)
- 1 ಸ್ಪೂನ್ ಧನಿಯಾ ಪುಡಿ
- 1/2 ಸ್ಪೂನ್ ಜೀರಿಗೆ ಪುಡಿ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- 1 ಟೇಬಲ್ ಚಮಚ ನಿಂಬೆಹಣ್ಣು
- ನಿಮ್ಮ ರುಚಿ ಪ್ರಕಾರ ಉಪ್ಪು
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಮೆಣಸಿನಕಾಯಿ ಫ್ರೈ ಮಾಡುವ ವಿಧಾನ:
- ಮೊದಲಿಗೆ ಹಸಿಮೆಣಸಿನಕಾಯಿಯನ್ನು ತೊಳೆದು ನೀರು ಒರೆಸಿಕೊಳ್ಳಿ.
- ಆಮೇಲೆ ಉದ್ದುದ್ದವಾಗಿ ಸೀಳಿ, ಆದರೆ ಎರಡು ಭಾಗ ಮಾಡಬೇಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸೀಳಿದ ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ.
- ಆಮೇಲೆ ಅದಕ್ಕೆ ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ.
- ಜೊತೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ.
- ಕೊನೆಯಲ್ಲಿ ನಿಂಬೆಹಣ್ಣಿನ ರಸ ಸೇರಿಸಿ, ಮಗುಚಿ.
- ಮುಚ್ಚಳ ಮುಚ್ಚಿ ಒಂದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
- ಮುಚ್ಚಳ ತೆಗೆದು, ಇನ್ನೊಮ್ಮೆ ಕೈಯ್ಯಾಡಿಸಿ, ಸ್ಟವ್ ಆಫ್ ಮಾಡಿ.
- ರೊಟ್ಟಿ, ಚಪಾತಿ, ಮೊಸರನ್ನ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ