ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
- 2 ಕಪ್ ಕತ್ತರಿಸಿದ ಮಾವಿನಹಣ್ಣು
- 2 ಟೇಬಲ್ ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
- ಚಿಟಿಕೆ ಉಪ್ಪು
- 1 - 2 ಏಲಕ್ಕಿ
- ಅಗತ್ಯವಿದ್ದಷ್ಟು ನೀರು
ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ:
- ಒಂದು ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ಮಾವಿನ ಹಣ್ಣು, ಸಕ್ಕರೆ, ಉಪ್ಪು ಮತ್ತು ಏಲಕ್ಕಿಯನ್ನು ತೆಗೆದುಕೊಳ್ಳಿ.
- ನುಣ್ಣಗೆ ಅರೆದು ಒಂದು ಬಾಣಲೆಗೆ ಹಾಕಿ. ಮಿಕ್ಸಿ ಜಾರು ತೊಳೆಯುವಷ್ಟು ಮಾತ್ರ ನೀರು ಸೇರಿಸಿ.
- ಮಧ್ಯಮ ಉರಿಯಲ್ಲಿ ಮಗುಚುತ್ತಾ 7 - 8 ನಿಮಿಷ, ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ.
- ಸ್ಟವ್ ಆಫ್ ಮಾಡಿ. ಒಂದು ಪ್ಲೇಟ್ ಗೆ ಸುರಿದು ಹರಡಿ.
- ಬಿಸಿಲಿನಲ್ಲಿ ಒಣಗಲು ಇಡಿ. ಕಸ-ಧೂಳು ಸೇರದಿರಲು ಮೊದಲನೇ ದಿನ ಒಂದು ಬಟ್ಟೆ ಮುಚ್ಚುವುದು ಒಳ್ಳೆಯದು.
- ಎರಡರಿಂದ ಮೂರು ದಿನ ಚೆನ್ನಾಗಿ ಒಣಗಿದ ಮೇಲೆ ಅಂಚು ಬಿಡಿಸಿ, ತೆಗೆಯಿರಿ.
- ಬೇಕಾದ ಆಕಾರಕ್ಕೆ ಕತ್ತರಿಸಿ ಅಥವಾ ಸುರುಳಿ ಮಾಡಿ ಎತ್ತಿಡಿ.
- ಒಂದು ವರ್ಷದವರೆಗೂ ಹಾಳಾಗುವುದಿಲ್ಲ. ಬೇಕಾದರೆ ಫ್ರಿಡ್ಜ್ ನಲ್ಲಿಡಿ. ಚಾಕಲೇಟ್ ನಂತೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ