Carrot uppinakayi recipe in Kannada | ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ
ಕ್ಯಾರಟ್ ಉಪ್ಪಿನಕಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಹೆಚ್ಚಿದ ಕ್ಯಾರಟ್
- 1 ದೊಡ್ಡ ನಿಂಬೆಹಣ್ಣು
- 5 - 6 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 7 - 8 ಮೆಂತೆ
- 12 ಟೇಬಲ್ ಚಮಚ ಉಪ್ಪು
ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ:
- ಒಂದು ಪಾತ್ರೆ ಯಲ್ಲಿ ಸಣ್ಣಗೆ ಕತ್ತರಿಸಿದ ಕ್ಯಾರಟ್ ತೆಗೆದುಕೊಳ್ಳಿ.
- ಅದಕ್ಕೆ ಉಪ್ಪು ಮತ್ತು ನಿಂಬೆರಸ ಹಾಕಿ. ಚೆನ್ನಾಗಿ ಮಗುಚಿ ಐದು ನಿಮಿಷ ನೆನೆಯಲು ಬಿಡಿ.
- ಈಗ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
- ಆ ಪುಡಿಯನ್ನು ಉಪ್ಪು ಮತ್ತು ನಿಂಬೆರಸ ಬೆರೆಸಿದ ಕ್ಯಾರಟ್ ಗೆ ಹಾಕಿ, ಚೆನ್ನಾಗಿ ಮಗುಚಿ.
- ಕೊನೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ.
- ರುಚಿಕರ ಕ್ಯಾರಟ್ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಫ್ರಿಡ್ಜ್ ನಲ್ಲಿ ಒಂದು ವಾರ ಇಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ