Masala oats recipe in Kannada | ಮಸಾಲಾ ಓಟ್ಸ್ ಮಾಡುವ ವಿಧಾನ
ಮಸಾಲಾ ಓಟ್ಸ್ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1/2 ಕಪ್ ಓಟ್ಸ್
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 tsp ಟೀಸ್ಪೂನ್ ಶುಂಠಿ
- 1 tsp ಟೀಸ್ಪೂನ್ ಬೆಳ್ಳುಳ್ಳಿ
- 1 ಹಸಿಮೆಣಸಿನಕಾಯಿ
- ಸ್ವಲ್ಪ ಕರಿಬೇವು
- 1 ಈರುಳ್ಳಿ
- 1/2 cup ಮಿಶ್ರ ತರಕಾರಿಗಳು
- 1 ಟೊಮೇಟೊ
- 1/4 tsp ಅರಿಶಿನ ಪುಡಿ
- 1/2 tsp ಅಚ್ಚಖಾರದ ಪುಡಿ
- 1/2 tsp ಧನಿಯಾ ಪುಡಿ
- 1/2 tsp ಪಾವ್ ಬಾಜಿ ಮಸಾಲಾ
- 1/4 tsp ಗರಂ ಮಸಾಲಾ
- ಸ್ವಲ್ಪ ಕೊತ್ತಂಬರಿ ಸೊಪ್ಪು
- ನಿಂಬೆ ಹಣ್ಣಿನ ರಸ ರುಚಿಗೆ ತಕ್ಕಂತೆ
- 2 tbsp ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಂತೆ
ಮಸಾಲಾ ಓಟ್ಸ್ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಒಗ್ಗರಣೆ ಮಾಡಿ.
- ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಿರಿ.
- ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ.
- ಮಿಶ್ರ ತರಕಾರಿಗಳನ್ನು ಹಾಕಿ ಹುರಿಯಿರಿ.
- ಹೆಚ್ಚಿದ ಟೊಮೇಟೊ ಹಾಕಿ ಹುರಿಯಿರಿ.
- ನಂತರ ಅಚ್ಚಖಾರದ ಪುಡಿ, ಧನಿಯಾ ಪುಡಿ, ಪಾವ್ ಬಾಜಿ ಮಸಾಲಾ, ಗರಂ ಮಸಾಲ ಮತ್ತು ಅರಿಶಿನ ಸೇರಿಸಿ ಹುರಿಯಿರಿ.
- ಸುಮಾರು ಒಂದೂವರೆ ಕಪ್ ನೀರು ಸೇರಿಸಿ
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕುದಿಯಲು ಬಿಡಿ.
- ಒಂದು ಕುದಿ ಬಂದ ಮೇಲೆ, ಅರ್ಧ ಕಪ್ ಓಟ್ಸ್ ಹಾಕಿ ಮಗುಚಿ.
- ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ.
- ಅಗತ್ಯವಿದ್ದರೆ ನೀರು ಸೇರಿಸಿ, ಕುದಿಸಿ.
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟವ್ ಆಫ್ ಮಾಡಿ.
- ಕೊನೆಯಲ್ಲಿ ರುಚಿಗೆ ತಕ್ಕಂತೆ ನಿಂಬೆ ಹಣ್ಣಿನ ರಸ ಸೇರಿಸಿ.
- ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ರುಚಿಯಾಗಿರುತ್ತದೆ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ