Nellikai leha recipe in Kannada | ನೆಲ್ಲಿಕಾಯಿ ಲೇಹ ಮಾಡುವ ವಿಧಾನ
ನೆಲ್ಲಿಕಾಯಿ ಲೇಹ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/4ಕೆಜಿ ನೆಲ್ಲಿಕಾಯಿ (8 - 10 ದೊಡ್ಡ ನೆಲ್ಲಿಕಾಯಿ)
- 1 - 2 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
- 2 - 3 ಏಲಕ್ಕಿ
- 1/4 ಟೀಸ್ಪೂನ್ ಉಪ್ಪು
ನೆಲ್ಲಿಕಾಯಿ ಲೇಹ ಮಾಡುವ ವಿಧಾನ:
- ನೆಲ್ಲಿಕಾಯಿಯನ್ನು ತೊಳೆದು, ತುರಿದುಕೊಳ್ಳಿ.
- ತುರಿಯನ್ನು ಅಳತೆ ಮಾಡಿ. ನನಗೆ ಎರಡು ಕಪ್ ತುರಿ ಸಿಕ್ಕಿತು.
- ಒಂದು ಬಾಣಲೆಯಲ್ಲಿ ನೆಲ್ಲಿಕಾಯಿ ತುರಿ ಹಾಕಿ.
- 1/4 ಕಪ್ ನೀರು ಹಾಕಿ. ಮೆತ್ತಗಾಗುವವರೆಗೆ ಹುರಿದು ಬೇಯಿಸಿ ಕೊಳ್ಳಿ.
- ನಂತರ ಸಕ್ಕರೆ ಸೇರಿಸಿ. ಎರಡು ಕಪ್ ತುರಿಗೆ ಎರಡು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಅಂದರೆ ಒಂದು ಕಪ್ ಸೇರಿಸಿದ್ದೇನೆ.
- ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು.
- ಜಜ್ಜಿದ ಏಲಕ್ಕಿ ಸೇರಿಸಿ ಮಗುಚಿ.
- ನೀರಾರುವವರೆಗೆ ಅಥವಾ ಒಂದೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು)
- ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.
- ನೆಲ್ಲಿಕಾಯಿ ಲೇಹ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು ದಿನ ಇಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ