Nimbe hannina sippe recipes in Kannada | ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ಮತ್ತು ಉಪಯೋಗಗಳು
ಉಪ್ಪಿನಕಾಯಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 4 ನಿಂಬೆಹಣ್ಣಿನ ಸಿಪ್ಪೆ
- 1 - 2 ನಿಂಬೆಹಣ್ಣು
- 2 - 3 ಟೇಬಲ್ ಚಮಚ ಉಪ್ಪು
- 2 ಟೀಸ್ಪೂನ್ ಅಚ್ಚಖಾರದಪುಡಿ
- 1/4 ಟೀಸ್ಪೂನ್ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- 1 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 2 ಕರಿಬೇವಿನ ಎಲೆ
ಚಟ್ನಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 1 ನಿಂಬೆಹಣ್ಣಿನ ಸಿಪ್ಪೆ
- 1 - 2 ಹಸಿಮೆಣಸಿನಕಾಯಿ
- 2 ಟೀಸ್ಪೂನ್ ಉದ್ದಿನಬೇಳೆ
- 1/2 ಕಪ್ ತೆಂಗಿನತುರಿ
- 1 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1 ಒಣಮೆಣಸು
- ಒಂದು ದೊಡ್ಡ ಚಿಟಿಕೆ ಇಂಗು
ಟೀ ಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 1/2 ಟೀಸ್ಪೂನ್ ಕತ್ತರಿಸಿದ ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ)
- 1/2 ಟೀಸ್ಪೂನ್ ಕತ್ತರಿಸಿದ ಶುಂಠಿ
- ಸ್ವಲ್ಪ ಪುದಿನ ಎಲೆ
ಉಪ್ಪಿನಕಾಯಿ ಮಾಡುವ ವಿಧಾನ:
- ನಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
- ಒಂದು ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಾಕಿ ಉಪ್ಪು ಸೇರಿಸಿ.
- ಜೊತೆಗೆ ಅಚ್ಚಖಾರದ ಪುಡಿ ಮತ್ತು ಅರಿಶಿನ ಸೇರಿಸಿ.
- ಮೇಲಿನಿಂದ ಒಂದು ದೊಡ್ಡ ನಿಂಬೆ ಹಣ್ಣಿನಿಂದ ತೆಗೆದ ರಸ ಸೇರಿಸಿ ಚೆನ್ನಾಗಿ ಕಲಸಿ. ಕೈ, ಚಮಚ ಮತ್ತು ಪಾತ್ರೆಯಲ್ಲಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ.
- ಬೇಕೆನಿಸಿದರೆ ಇನ್ನೊಂದು ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.
- ಮುಚ್ಚಳ ಮುಚ್ಚಿ ಏಳು ದಿನ ಇಡಿ. ದಿನಕ್ಕೊಮ್ಮೆ ನೀರಿನ ಪಸೆ ಇಲ್ಲದ ಚಮಚದಲ್ಲಿ ಮಗುಚುತ್ತಿರಿ.
- ಏಳರಿಂದ ಹತ್ತು ದಿನದ ನಂತರ ಬೇಕಾದಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಉಪ್ಪಿನಕಾಯಿ ಸವಿಯಲು ಸಿಧ್ಧ.
ಚಟ್ನಿ ಮಾಡುವ ವಿಧಾನ:
- ನಿಂಬೆಹಣ್ಣಿನ ಸಿಪ್ಪೆಯನ್ನು ಉಪ್ಪಿನ ಡಬ್ಬದಲ್ಲಿ ಏಳರಿಂದ ಹತ್ತು ದಿನ ಹಾಕಿಡಿ.
- ಉದ್ದಿನಬೇಳೆ ಮತ್ತು ಮೆಣಸಿನಕಾಯಿಯನ್ನು ಹುರಿಯಿರಿ.
- ಉಪ್ಪಿನಲ್ಲಿ ಹಾಕಿದ ಸಿಪ್ಪೆ, ಉದ್ದಿನಬೇಳೆ, ಮೆಣಸಿನಕಾಯಿ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ.
- ಪಾತ್ರೆಗೆ ಬಗ್ಗಿಸಿ ಒಗ್ಗರಣೆ ಕೊಡಿ.ಅನ್ನ ಅಥವಾ ದೋಸೆಯೊಂದಿಗೆ ಬಡಿಸಿ.
ಟೀ ಮಾಡುವ ವಿಧಾನ:
- ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ), ಶುಂಠಿ ಮತ್ತು ಪುದಿನವನ್ನು ಅರ್ಧ ಕಪ್ ನೀರಿನಲ್ಲಿ ಒಂದು ನಿಮಿಷ ಕುದಿಸಿ.
- ಶೋಧಿಸಿ ಕುಡಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ