Avalakki sandige recipe in Kannada | ಅವಲಕ್ಕಿ ಸಂಡಿಗೆ ಮಾಡುವ ವಿಧಾನ
ಅವಲಕ್ಕಿ ಸಂಡಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 60 ಎಂಎಲ್)
- 3 ಕಪ್ ತೆಳು ಅವಲಕ್ಕಿ
- ಒಣಮೆಣಸಿನ ಚೂರುಗಳು ಅಥವಾ ಹಸಿಮೆಣಸಿನಕಾಯಿ ಪೇಸ್ಟ್
- 1/2 ಟೀಸ್ಪೂನ್ ಓಮ
- 1/4 ಟೀಸ್ಪೂನ್ ಸೋಡಾ
- 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಅವಲಕ್ಕಿ ಸಂಡಿಗೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೆಗೆದುಕೊಳ್ಳಿ.
- ನೀರು ಹಾಕಿ ತೊಳೆದು ಕೂಡಲೇ ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ.
- ನಂತರ ಅದಕ್ಕೆ ಉಪ್ಪು, ಒಣಮೆಣಸಿನಕಾಯಿ ಚೂರುಗಳು, ಓಮ, ಸೋಡಾ ಮತ್ತು ಉಪ್ಪು ಸೇರಿಸಿ.
- ಅಥವಾ ನಿಮ್ಮಿಷ್ಟದ ಯಾವುದೇ ಮಸಾಲೆ (ಇಂಗು, ಜೀರಿಗೆ, ಎಳ್ಳು ಇತ್ಯಾದಿ) ಸೇರಿಸಬಹುದು.
- ಚೆನ್ನಾಗಿ ಕೈಯಲ್ಲಿ ಹಿಸುಕಿ ಕಲಸಿ.
- ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ಅಥವಾ ಬಟ್ಟೆಯಲ್ಲಿ ಸಂಡಿಗೆ ಹಾಕಲು ತಯಾರು ಮಾಡಿ.
- ಚಕ್ಕುಲಿ ಅಚ್ಚಿನಲ್ಲಿ ಕಲಸಿದ ಹಿಟ್ಟನ್ನು ತುಂಬಿಸಿ, ರಿಬ್ಬನ್ ನಂತೆ ಸಂಡಿಗೆಯನ್ನು ಒತ್ತಿ. ಬಿಸಿಲಿನಲ್ಲಿ ಒಣಗಲು ಇಡಿ.
- ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ.
- ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ.
- ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ