Goddu khara recipe in Kannada | ಗೊಡ್ಡುಖಾರ ಮಾಡುವ ವಿಧಾನ
ಗೊಡ್ಡುಖಾರ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 10 -12 ಒಣಮೆಣಸಿನಕಾಯಿ
- 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
- 1 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಎಸಳು ಕರಿಬೇವು
- 1 ಸಣ್ಣ ಗಾತ್ರದ ಈರುಳ್ಳಿ
- 1 ಟೀಸ್ಪೂನ್ ಎಣ್ಣೆ
- 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಗೊಡ್ಡುಖಾರ ಮಾಡುವ ವಿಧಾನ:
- ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿಯಿರಿ.
- ನಂತರ ಸಿಪ್ಪೆ ತೆಗೆದ ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಆಮೇಲೆ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿಬೇವನ್ನು ಸೇರಿಸಿ, ಕರಿಬೇವು ಗರಿಗರಿಯಾಗುವವರೆಗೆ ಹುರಿಯಿರಿ.
- ಈರುಳ್ಳಿಯನ್ನು ಸ್ಟವ್ ಮೇಲೆ ಹಿಡಿದು ಸುಟ್ಟು, ದೊಡ್ಡದಾಗಿ ಕತ್ತರಿಸಿಟ್ಟುಕೊಳ್ಳಿ.
- ಬಿಸಿ ಅರಿದಮೇಲೆ ಹುರಿದ ಪದಾರ್ಥ ಮತ್ತು ಸುಟ್ಟ ಈರುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ.
- ರುಚಿಗೆ ತಕ್ಕಂತೆ ಉಪ್ಪು ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಬಿಸಿ ಅನ್ನದೊಂದಿಗೆ ಅಥವಾ ರೊಟ್ಟಿಯೊಂದಿಗೆ ತುಪ್ಪದ ಜೊತೆ ಬಡಿಸಿ. ಹೊರಗೆ ಒಂದು ವಾರ ಮತ್ತು ಫ್ರಿಡ್ಜ್ ನಲ್ಲಿ ಒಂದು ತಿಂಗಳು ಇಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ