Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ
ಉದ್ದಿನ ಹಪ್ಪಳ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಉದ್ದಿನಬೇಳೆ
- ಅಗತ್ಯವಿದ್ದಷ್ಟು ನೀರು
- 1/4 ಟೀಸ್ಪೂನ್ ಉಪ್ಪು
- 1/4 ಟೀಸ್ಪೂನ್ ಸೋಡಾ
- ಕಾಯಿಸಲು ಎಣ್ಣೆ
ಉದ್ದಿನ ಹಪ್ಪಳ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ಉದ್ದಿನಬೇಳೆ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಜರಡಿ ಹಿಡಿದುಕೊಳ್ಳಿ.
- ನಂತ್ರ ಆ ಹಿಟ್ಟಿಗೆ ಉಪ್ಪು ಮತ್ತು ಸೋಡಾ ಹಾಕಿ ಕಲಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ಗಟ್ಟಿಯಾದ ಹಿಟ್ಟು ಕಲಸಿ.
- ಒಂದು ಕುಟ್ಟಾಣಿ ತೆಗೆದುಕೊಂಡು ಹಿಟ್ಟನ್ನು ಚೆನ್ನಾಗಿ ಗುದ್ದಿ ಮೃದು ಮಾಡಿಕೊಳ್ಳಿ.
- ಸಣ್ಣ ಉಂಡೆ ತೆಗೆದುಕೊಂಡು, ತೆಳ್ಳಗೆ ಲಟ್ಟಿಸಿ.
- ಒಂದು ಬಟ್ಟಲಿನಿಂದ ಒತ್ತಿ, ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ.
- ಹತ್ತಿಯ ಬಟ್ಟೆ ಮೇಲೆ ಒಂದೆರಡು ಘಂಟೆ ಗಾಳಿಯಾಡಲು ಬಿಡಿ. ಬಿಸಿಲಿನಲ್ಲಿ ಒಣಗಿಸಬಾರದು.
- ಎಣ್ಣೆಯಲ್ಲಿ ಕಾಯಿಸಿ. ಲಟ್ಟಿಸಿದ ಕೂಡಲೆಯೂ ಕಾಯಿಸಬಹುದು.
- ಚೆನ್ನಾಗಿ ನೆರಳಿನಲ್ಲಿ ಒಣಗಿಸಿದರೆ ಒಂದು ತಿಂಗಳು ಹಾಳಾಗುವುದಿಲ್ಲ.
- ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ