ಹಲಸಿನಕಾಯಿಯನ್ನು ಕತ್ತರಿಸಿ ಸೊಳೆಗಳನ್ನು ಬೇರ್ಪಡಿಸಿ. ಗಮನಿಸಿ ಹಲಸಿನಕಾಯಿ ಚೆನ್ನಾಗಿ ಬಲಿತಿರಬೇಕು ಆದರೆ ಹಣ್ಣಾಗಿರಬಾರದು.
ನಂತರ ಸೆಕೆ ಅಥವಾ ಆವಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಸುಮಾರು ಮೂವತ್ತು ನಿಮಿಷ ಬೇಕಾಗುವುದು.
ಆ ಸಮಯದಲ್ಲಿ ಒರಳುಕಲ್ಲಿನಲ್ಲಿ ಮೆಣಸು ಮತ್ತು ಉಪ್ಪು ಹಾಕಿ ಗುದ್ದಿರಿ. ನಿಮ್ಮಿಷ್ಟದ ಯಾವುದೇ ಮಸಾಲೆ ಸೇರಿಸಬಹುದು.
ಅದಕ್ಕೆ ಬೇಯಿಸಿದ ಹಲಸಿನ ಸೊಳೆ ಅಥವಾ ತೊಳೆ ಹಾಕಿ ಒನಕೆಯಿಂದ ಗುದ್ದಿ ಕೊಳ್ಳಿ ಅಥವಾ ಅರೆಯಿರಿ. ಬಿಸಿಯಾಗಿರುವಾಗಲೇ ಗುದ್ದಬೇಕು, ಇಲ್ಲವಾದಲ್ಲಿ ಗುದ್ದುವುದು ಸ್ವಲ್ಪ ಶ್ರಮದಾಯಕವೆನಿಸಬಹುದು.
ಅಂಗೈಗೆ ನೀರು ಮುಟ್ಟಿಸಿ ನಿಂಬೆ ಗಾತ್ರದ ಉಂಡೆ ಮಾಡಿ ಕೊಳ್ಳಿ.
ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ನಂತರ ಒಂದು ಉಂಡೆಯನ್ನು ಇರಿಸಿ ಎಣ್ಣೆ ಹಚ್ಚಿದ ಮತ್ತೊಂದು ಸಣ್ಣ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ.
ಈಗ ಒಂದು ಅಗಲವಾದ ಪಾತ್ರೆ ಅಥವಾ ಮಣೆಯಿಂದ ಒತ್ತಿ. ಜಾಗ್ರತೆಯಿಂದ ಮೇಲಿನ ಪ್ಲಾಸ್ಟಿಕ್ ಹಾಳೆಯನ್ನು ತೆಗೆಯಿರಿ.
ದೊಡ್ಡ ಪ್ಲಾಸ್ಟಿಕ್ ಹಾಳೆ ಅಥವಾ ಬಟ್ಟೆ ಮೇಲೆ ಒತ್ತಿದ ಹಪ್ಪಳವನ್ನು ಹಾಕಿ, ಸಣ್ಣ ಪ್ಲಾಸ್ಟಿಕನ್ನು ಜಾಗ್ರತೆಯಿಂದ ತೆಗೆಯಿರಿ.
ಎಲ್ಲ ಹಪ್ಪಳವನ್ನು ಇದೆ ರೀತಿ ಮಾಡಿ. ನಂತರ ಬಿಸಿಲಿನಲ್ಲಿಟ್ಟು ಒಣಗಿಸಿ. 3-4 ಗಂಟೆಗಳ ನಂತರ ಒಮ್ಮೆ ಹಪ್ಪಳಗಳನ್ನು ತಿರುವಿ ಹಾಕಿ. ಒಂದೆರಡು ಹಪ್ಪಳ ಒಣಗುತ್ತದೆ. ಒಣಗಿದ ನಂತರ ಎಣ್ಣೆ ಅಥವಾ ಓವೆನ್ ನಲ್ಲಿ ಕಾಯಿಸಿ.
Pumpkin sambar recipe in Kannada | ಚೀನಿಕಾಯಿ ಅಥವಾ ಸಿಹಿಕುಂಬಳಕಾಯಿ ಸಾಂಬಾರ್ ಮಾಡುವ ವಿಧಾನ
Pumpkin sambar video Kannada
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1/2 kg ಚೀನಿಕಾಯಿ ಅಥವಾ ಸಿಹಿಕುಂಬಳಕಾಯಿ
4 ಟೇಬಲ್ ಚಮಚ ತೊಗರಿಬೇಳೆ
1/4 ಟೀಸ್ಪೂನ್ ಅರಿಶಿನ ಪುಡಿ
2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ, ಹಾಕಿದರೆ ಒಳ್ಳೆಯದು)
ಗೋಲಿ ಗಾತ್ರದ ಹುಣಿಸೇಹಣ್ಣು
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/ ಕಪ್ ತೆಂಗಿನ ತುರಿ
2 - 4 ಕೆಂಪು ಮೆಣಸಿನಕಾಯಿ
1.5 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
1/4 ಟೀಸ್ಪೂನ್ ಜೀರಿಗೆ
7 - 8 ಮೆಂತ್ಯ ಕಾಳು (ಬೇಕಾದಲ್ಲಿ)
ಒಂದು ಚಿಟಿಕೆ ಇಂಗು
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವು
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಅಡುಗೆ ಎಣ್ಣೆ
ಚೀನಿಕಾಯಿ ಅಥವಾ ಸಿಹಿಕುಂಬಳಕಾಯಿ ಸಾಂಬಾರ್ ಮಾಡುವ ವಿಧಾನ:
ಚೀನಿಕಾಯಿ ಅಥವಾ ಸಿಹಿಕುಂಬಳಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ.
ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಬೇಳೆಯನ್ನು ಬೇಯಿಸಿ.
ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ಚೀನಿಕಾಯಿ ಅಥವಾ ಸಿಹಿಕುಂಬಳಕಾಯಿ, ಸ್ವಲ್ಪ ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಹಾಕಿ. 1 ಲೋಟ ನೀರು ಹಾಕಿ ಒಂದು ವಿಷಲ್ ಮಾಡಿ. ಚೀನಿಕಾಯಿ ಅಥವಾ ಸಿಹಿಕುಂಬಳಕಾಯಿ ಬೇಗ ಬೇಯುವುದರಿಂದ ವಿಷಲ್ ಮಾಡದೇ ಹಾಗೇ ಸಹ ಬೇಯಿಸಬಹುದು.
ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ.
ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ.
ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Ragi manni pudi recipe in Kannada | ರಾಗಿ ಮಣ್ಣಿ ಪುಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ಅಕ್ಕಿ
1/2 ಕಪ್ ಗೋಧಿ
1/2 ಕಪ್ ರಾಗಿ
1/2 ಕಪ್ ಹೆಸರುಕಾಳು
1/2 ಕಪ್ ಬಾರ್ಲಿ
ರಾಗಿ ಮಣ್ಣಿ ಪುಡಿ ಮಾಡುವ ವಿಧಾನ:
ಎಲ್ಲ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಂಡು ಆರಿಸಿ.
ಒಂದೊಂದೇ ಪದಾರ್ಥವನ್ನು ಒಳ್ಳೆಯ ನೀರಿನಲ್ಲಿ ೨ - ೩ ಬಾರಿ ತೊಳೆಯಿರಿ. ನೀರನ್ನು ಸಂಪೂರ್ಣವಾಗಿ ಬಗ್ಗಿಸಿ.
ನಂತರ ಶುದ್ಧವಾದ ಬಟ್ಟೆ ಮೇಲೆ ಅಥವಾ ಅಗಲವಾದ ತಟ್ಟೆಯ ಮೇಲೆ ಹರಡಿ ನೀರಾರಲು ಬಿಡಿ.
ನೀರಾರಿದ ಮೇಲೆ ಒಂದೊಂದಾಗಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಗಮನಿಸಿ, ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದರೆ ಸಾಕು. ಅಕ್ಕಿ, ಬಾರ್ಲಿ ಬಿಳಿ ಆದರೆ ಸಾಕು. ಉಳಿದದ್ದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಸಾಕು.
ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ.
ಸಾರಣಿಸಿ ಅಥವಾ ಜರಡಿ ಹಿಡಿದು ಮಣ್ಣಿ ಪುಡಿಯನ್ನು ಸಿದ್ಧ ಮಾಡಿಕೊಳ್ಳಿ. ಗಮನಿಸಿ, ಉಪಯೋಗಿಸುವ ಎಲ್ಲ ಪಾತ್ರೆಗಳು ಸ್ವಚ್ಛವಾಗಿರಬೇಕು ಮತ್ತು ನೀರಿನ ಪಸೆ ಇರಬಾರದು.
ಒಂದು ಚಮಚ ಪುಡಿ ಮತ್ತು ಒಂದು ಚಮಚ ಬೆಲ್ಲವನ್ನು ಹಾಲಿನಲ್ಲಿ ಕರಗಿಸಿ, ಓಲೆ ಮೇಲಿಟ್ಟು ನಿರಂತರವಾಗಿ ಮಗುಚುತ್ತಾ ಕುದಿಸಿ. ಇದನ್ನು ನಾಲ್ಕನೇ ತಿಂಗಳಿನಿಂದ ಕೊಡಬಹುದು.
ಬೀನ್ಸ್, ಕ್ಯಾರಟ್ ಮತ್ತು ಆಲೂಗಡ್ಡೆಯನ್ನು ಕತ್ತರಿಸಿಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ ಹೆಸರುಬೇಳೆಯನ್ನು ತೊಳೆಯಿರಿ.
ಕತ್ತರಿಸಿದ ತರಕಾರಿ, ಬಟಾಣಿ ಮತ್ತು ಹೆಸರುಬೇಳೆಯನ್ನು ಕುಕ್ಕರ್‌ನಲ್ಲಿ ಹಾಕಿ. 1 ಕಪ್ ನೀರು ಸೇರಿಸಿ. 2 ವಿಷಲ್ ಮಾಡಿ ಬೇಯಿಸಿ.
ಒಂದು ಬಾಣಲೆ ತೆಗೆದುಕೊಂಡು ಎಣ್ಣೆ, ಶೇಂಗಾ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ.
ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. ಕಾಪ್ಸಿಕಮ್ ಹಾಕುವುದಾದಲ್ಲಿ ಈಗ ಹಾಕಿ.
ನಂತರ ಕತ್ತರಿಸಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಸ್ಟೋವ್ ಆಫ್ ಮಾಡಿ.
ಕೂಡಲೇ ಬಿಸಿಬೇಳೆ ಬಾತ್ ಪುಡಿ, ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
ತೊಳೆದ ಗಟ್ಟಿ ಅವಲಕ್ಕಿ ಮತ್ತು ಒಂದು ಕಪ್ ನೀರು ಹಾಕಿ ಕುದಿಸಿ.
ನಂತರ ಬೇಯಿಸಿದ ತರಕಾರಿ ಮತ್ತು ಬೇಳೆಯನ್ನು ಹಾಕಿ. ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸವಿದು ಆನಂದಿಸಿ.
Menthe kadubu recipe in Kannada | ಮೆಂತೆ ಕಡುಬು ಮಾಡುವ ವಿಧಾನ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ಗೋಧಿ ಹಿಟ್ಟು
1/2 ಟೀಸ್ಪೂನ್ ಅಚ್ಚ ಖಾರದ ಪುಡಿ
1/4 ಟೀಸ್ಪೂನ್ ಅಜ್ವಾಯ್ನ್ ಅಥವಾ ಓಂಕಾಳು
ದೊಡ್ಡ ಚಿಟಿಕೆ ಇಂಗು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಟೀಸ್ಪೂನ್ ಸಾಸಿವೆ
1/2 ಟೀಸ್ಪೂನ್ ಜೀರಿಗೆ
1 ಸಣ್ಣಗೆ ಹೆಚ್ಚಿದ ಈರುಳ್ಳಿ
1/2 ಕಪ್ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು
1/4 ಟೀಸ್ಪೂನ್ ಅಚ್ಚ ಖಾರದ ಪುಡಿ (ಬೇಕಾದಲ್ಲಿ)
1/4 ಟೀಸ್ಪೂನ್ ಅರಿಶಿನ ಪುಡಿ
5 - 6 ಟೀಸ್ಪೂನ್ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಮೆಂತೆ ಕಡುಬು ಮಾಡುವ ವಿಧಾನ:
ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಸಣ್ಣದಾಗಿ ಹೆಚ್ಚಿಕೊಳ್ಳಿ.
ಒಂದು ಪಾತ್ರೆಯಲ್ಲಿ ಹಿಟ್ಟಿಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ಗೋಧಿ ಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ ಇಂಗು ಮತ್ತು ಓಂಕಾಳು). ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೆತ್ತಗಿನ ಹಿಟ್ಟು ಕಲಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿರಲಿ.
ನಂತರ ಸಣ್ಣ ನೆಲ್ಲಿಕಾಯಿ ಗಾತ್ರದ ಬಿಲ್ಲೆಗಳನ್ನು (ಚಪ್ಪಟೆಯಾದ ಉಂಡೆ) ಮಾಡಿ.
ಕುದಿಯುವ ನೀರಿನಲ್ಲಿ ಹಾಕಿ 20 ನಿಮಿಷಗಳ ಕಾಲ ಬೇಯಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ.
ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು ಹಾಕಿ ಬಾಡಿಸಿ. ಖಾರದ ಪುಡಿ (ಬೇಕಾದಲ್ಲಿ), ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಗುಚಿ.
ಬೇಯಿಸಿದ ಬಿಲ್ಲೆಗಳನ್ನು ಅರ್ಧ ಕಪ್ ನೀರಿನೊಂದಿಗೆ ಹಾಕಿ, ಕುದಿಸಿ.