Rave dose recipe in Kannada | ರವೆ ದೋಸೆ ಮಾಡುವ ವಿಧಾನ
Quick Video: Rave dose recipe
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1/4 ಕಪ್ ಮೀಡಿಯಂ ರವೆ
- 1/8 ಕಪ್ ಮೈದಾ ಹಿಟ್ಟು
- 2.5 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ; ದೋಸೆಕಲ್ಲು ಮತ್ತು ಹಿಟ್ಟಿನ ಗುಣಮಟ್ಟ ಅವಲಂಬಿಸಿ)
- ಎಣ್ಣೆ ಅಥವಾ ತುಪ್ಪ (ದೋಸೆ ಮಾಡುವಾಗ ಬಳಸಲು)
- ಉಪ್ಪು ರುಚಿಗೆ ತಕ್ಕಷ್ಟು
ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
- 5 - 6 ಜಜ್ಜಿದ ಕಾಳುಮೆಣಸು
- 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
- 1 ಟೇಬಲ್ ಚಮಚ ತೆಂಗಿನ ತುರಿ (ನಾನು ಬಳಸಲಿಲ್ಲ)
- 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ (ನಾನು ಬಳಸಲಿಲ್ಲ)
- ಚಿಟಿಕೆ ಇಂಗು (ನಾನು ಬಳಸಲಿಲ್ಲ)
- ಚಿಟಿಕೆ ಅರಿಶಿನ ಪುಡಿ (ನಾನು ಬಳಸಲಿಲ್ಲ)
ರವೆ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಹಿಟ್ಟು ತೆಗೆದುಕೊಳ್ಳಿ.
- ನೀರು, ಉಪ್ಪು ಮತ್ತು ನಿಮ್ಮಿಚ್ಛೆಯ ಪದಾರ್ಥಗಳನ್ನು ಸೇರಿಸಿ. ನಾನು ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕಾಳುಮೆಣಸು ಮತ್ತು ಶುಂಠಿ ಬಳಸಿದ್ದೇನೆ.
- ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ. ಗಮನಿಸಿ ರವೆ ದೋಸೆ ಹಿಟ್ಟು ನೀರ್ ದೋಸೆಯಂತೆ ತೆಳ್ಳಗಿರುತ್ತದೆ.
- ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.
- ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
- ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ.
- ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
ಕನ್ನಡದಲ್ಲೂ ಪೋಸ್ಚ ಮಾಡಿದ್ದೀರಾ! ಒಳ್ಳೆಯ ಪ್ರಯತ್ನ. ಶುಭವಾಗಲಿ.
ಪ್ರತ್ಯುತ್ತರಅಳಿಸಿDhanyavadagalu...nimmellara sahakara sada irali.
ಅಳಿಸಿ-Latha
- kannada version superb !
ಪ್ರತ್ಯುತ್ತರಅಳಿಸಿDhanyavadagalu.
ಅಳಿಸಿnanage thumba upakaravayithu. nimma e seveyannu dayamadi munduvaresi. dhanyvadagalu.
ಪ್ರತ್ಯುತ್ತರಅಳಿಸಿThumba santhosha guru avare. Khanditha munduvaresutteve. Dhanyavadagalu.
ಅಳಿಸಿ