ಮಂಗಳವಾರ, ನವೆಂಬರ್ 22, 2016

Kosu palya recipe in Kannada | ಕೋಸು ಪಲ್ಯ ಮಾಡುವ ವಿಧಾನ

Kosu palya recipe in Kannada

Kosu palya recipe in Kannada | ಕೋಸು ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಎಲೆಕೋಸು
  2. 1/2 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕಡ್ಲೆ ಬೇಳೆ
  5. 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ದೊಡ್ಡ ಚಿಟಿಕೆ ಇಂಗು
  8. 1 ಹಸಿರು ಮೆಣಸಿನಕಾಯಿ (ಬೇಕಾದಲ್ಲಿ)
  9. 4 - 5 ಕರಿಬೇವಿನ ಎಲೆ
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  11. ಉಪ್ಪು ರುಚಿಗೆ ತಕ್ಕಷ್ಟು
  12. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  13. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನ ಕಾಯಿ
  3. 1/2 ಟೀಸ್ಪೂನ್ ಸಾಸಿವೆ

ಕೋಸು ಪಲ್ಯ ಮಾಡುವ ವಿಧಾನ:

  1. ಕೋಸನ್ನು ತೊಳೆದು ಸಣ್ಣದಾಗಿ ಕತ್ತರಿಸಿ, ಉಪ್ಪು ನೀರಿನಲ್ಲಿ 10 ನಿಮಿಷ ಹಾಕಿಡಿ (ಒಂದು ಚಮಚ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು).
  2. ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿಟ್ಟು ಕೊಳ್ಳಿ.
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.
  4. ನಂತರ ನೀರು ಬಸಿದು, ಕತ್ತರಿಸಿದ ಕೋಸು ಹಾಕಿ. ಒಂದು ನಿಮಿಷ ಮಗುಚಿ. 
  5. ಉಪ್ಪು, ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ. ಮುಚ್ಚಳ ಮುಚ್ಚಿ, ಮಂದ ಉರಿಯಲ್ಲಿ ಬೇಯಲು ಬಿಡಿ. ಒಂದೆರಡು ಬಾರಿ ಮಗುಚಿ.
  6. ಕೋಸು ಬೆಂದ ಮೇಲೆ ಪುಡಿ ಮಾಡಿದ ಮಸಾಲೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ. 
  7. 2 ನಿಮಿಷ ಮಗುಚಿ. ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...