Besan ladoo or unde recipe in Kannada | ಬೇಸನ್ ಲಾಡು ಅಥವಾ ಉಂಡೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕಡ್ಲೆ ಹಿಟ್ಟು
- 1/2 ಕಪ್ ಸಕ್ಕರೆ
- 1/4 ಕಪ್ ತುಪ್ಪ (ನಾನು ಇದಕ್ಕಿಂತ ಕಡಿಮೆ ಬಳಸಿದ್ದೇನೆ)
- 7 - 8 ಗೋಡಂಬಿ
- 2 ಏಲಕ್ಕಿ
ಬೇಸನ್ ಲಾಡು ಅಥವಾ ಉಂಡೆ ಮಾಡುವ ವಿಧಾನ:
- ಗೋಡಂಬಿಯನ್ನು ಒಂದು ಚಮಚ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.
- ಅದೇ ಬಾಣಲೆಯಲ್ಲಿ ಕಡ್ಲೆಹಿಟ್ಟನ್ನು ತುಪ್ಪ ಹಾಕದೇ ಮಧ್ಯಮ ಉರಿಯಲ್ಲಿ ಘಮ್ಮೆಂದು ಸುವಾಸನೆ ಬರುವವರೆಗೆ ಅಥವಾ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ನಂತರ ತುಪ್ಪ ಸೇರಿಸಿ 2 ನಿಮಿಷ ಹುರಿಯುವುದನ್ನು ಮುಂದುವರೆಸಿ. ಸ್ಟವ್ ಆಫ್ ಮಾಡಿ.
- ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
- ಪುಡಿ ಮಾಡಿದ ಸಕ್ಕರೆಯನ್ನು ಹುರಿದ ಕಡ್ಲೆಹಿಟ್ಟಿಗೆ ಹಾಕಿ ಕಲಸಿ.
- ಹುರಿದಿಟ್ಟ ಗೋಡಂಬಿ ಸೇರಿಸಿ ಕಲಸಿ.
- ಮಿಶ್ರಣ ಪುಡಿ ಪುಡಿ ಎನಿಸಿದಲ್ಲಿ, ಉಂಡೆ ಮಾಡಲು ಕಷ್ಟ ಎನಿಸಿದಲ್ಲಿ ಸ್ವಲ್ಪ ತುಪ್ಪ ಸೇರಿಸಿ.
- ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಹೀಗೆ ಎಲ್ಲ ಉಂಡೆಗಳನ್ನು ಮಾಡಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ